Star Fashion 2025: ಸಿಂಪಲ್ ಲೇಯರ್ ಲುಕ್‌ನಲ್ಲಿ ಡಿಸೆಂಬರ್ ಹಲೋ ಎಂದ ಸುಕೃತಾ ವಾಗ್ಲೆ
Actress Sukrutha Wagle: ವೈಟ್ ಶೇಡ್‌ನ ಶರ್ಟ್ ಹಾಗೂ ದೊಗಲೆ ಡೆನಿಮ್ ಪ್ಯಾಂಟ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ಸುಕೃತಾ ವಾಗ್ಲೆ ಕಾಣಿಸಿಕೊಂಡಿದ್ದು, ಹಲೋ ಡಿಸೆಂಬರ್ ಎನ್ನುತ್ತಾ ವಿಂಟರ್‌ಗೆ ಸ್ವಾಗತ ಕೋರಿದ್ದಾರೆ. ಅವರ ಲುಕ್ ಹೇಗಿದೆ? ಇಲ್ಲಿದೆ ಫ್ಯಾಷನ್ ರಿವ್ಯೂ.
ಶ್ವೇತ ವರ್ಣದ ಶರ್ಟ್ ಟಾಪ್ ಹಾಗೂ ಡೆನಿಮ್ ಜೀನ್ಸ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಸುಕೃತಾ ವಾಗ್ಲೆ ಹಲೋ ಡಿಸೆಂಬರ್ ಎನ್ನುತ್ತಾ ವಿಂಟರ್ ಸೀಸನನ್ನು ಸ್ವಾಗತಿಸಿದ್ದಾರೆ.
ವೈಟ್ & ಬ್ಲ್ಯೂ ಕಾಂಬಿನೇಷನ್‌ನ ವಿಂಟರ್ ಕಲರ್ಸ್
ಹೌದು, ಈ ವಿಂಟರ್‌ನಲ್ಲಿ ಉಲ್ಲಾಸ ಮೂಡಿಸುವ ಕಲರ್‌ಗಳಲ್ಲಿ ಸೇರಿದ ಶ್ವೇತ ವರ್ಣ ಹಾಗೂ ನೀಲಿ ಶೇಡ್‌ನ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವ ಅವರು ಕೂಲಾಗಿ ಮುಂಬರುವ ವಿಂಟರ್ ದಿನಗಳನ್ನು ಸ್ವಾಗತಿಸುತ್ತಾ ತಾನು ಕೂಡ ವಿಂಟರ್ ಸೀಸನ್ ಫ್ಯಾಷನ್‌ಗೆ ರೆಡಿ ಎಂಬಂತೆ ಫೋಸ್ ನೀಡಿದ್ದಾರೆ.
ಗಮನ ಸೆಳೆಯುವ ಸುಕೃತಾ ವಾಗ್ಲೆ ಫ್ಯಾಷನ್ ಶೂಟ್ಸ್
ಒಂದಲ್ಲ ಒಂದು ಡಿಫರೆಂಟ್ ಫ್ಯಾಷನ್ ಶೂಟ್‌ಗಳಲ್ಲಿ ಗಮನ ಸೆಳೆಯುವ ನಟಿ ಸುಕೃತಾ ವಾಗ್ಲೆ, ಈ ಹಿಂದೆಯೂ ಚಾರ್ಲಿ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಡಿಫರೆಂಟ್ ಆಗಿ ಪೋಸ್ ನೀಡಿದ್ದರು. ಇನ್ನು, ಸಾಕಷ್ಟು ಬಾರಿ, ಹೆಚ್ಚು ವೆಚ್ಚ ಮಾಡದೇ ಸಿಂಪಲ್ ಔಟ್‌ಫಿಟ್ ಹಾಗೂ ಸೀರೆಗಳ ಫೋಟೋ ಶೂಟ್‌ಗಳಲ್ಲಿ, ಫಾಲೋವರ್‌ಗಳ ಕಣ್ಮನ ಸೆಳೆಯುವಂತಹ ಪೋಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಉಲ್ಲಾಸ ಮೂಡಿಸುವ ವೈಟ್ ಲೇಯರ್ ಲುಕ್
ಮಿಲ್ಕಿ ವೈಟ್ ಕ್ರಾಪ್ ಇನ್ನರ್ ಟಾಪ್ ಹಾಗೂ ಕಾಟನ್ ಶರ್ಟನ್ನು ಧರಿಸಿರುವ ಸುಕೃತಾ, ಅದನ್ನು ಜಾಕೆಟ್‌ನಂತೆ ಓಪನ್ ಮಾಡಿ ಧರಿಸಿದ್ದಾರೆ, ಇನ್ನು ದೊಗಲೆ ರೆಟ್ರೊ ಲುಕ್ ನೀಡುವ ಪಾಕೆಟ್ ಇರುವಂತಹ ಜೀನ್ಸ್ ಪ್ಯಾಂಟ್ ಇದಕ್ಕೆ ಮ್ಯಾಚ್ ಮಾಡಿದ್ದಾರೆ. ಹೆಚ್ಚು ಖರ್ಚಿಲ್ಲದೇ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.
ಅತ್ಯಾಕರ್ಷಕ ಕರ್ಲಿ ಹೇರ್‌ಸ್ಟೈಲ್
ಒಟ್ಟಾರೆ, ಅವರ ಕರ್ಲಿ ಹೇರ್‌ಸ್ಟೈಲ್ ಹಾಗೂ ಮುಖದ ಮೇಲಿನ ಸ್ಮೈಲ್ ಅವರ ಫೋಸನ್ನು ಮತ್ತಷ್ಟು ಅತ್ಯಾಕರ್ಷಕವಾಗಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.