ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬ್ಲೇಜರ್‌ ಮೆರ್ಮೈಡ್‌ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬ್ಲೇಜರ್‌ ಧರಿಸಿದ ವಿಶೇಷ ಮೆರ್ಮೈಡ್‌ ಗೌನ್‌ನಲ್ಲಿ ಮಿಂಚಿದರು. ಅವರ ಈ ಡಿಸೈನರ್‌ವೇರ್‌ ಕುರಿತಂತೆ ಫ್ಯಾಷನಿಸ್ಟಾಗಳು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್.

ಬಾಲಿವುಡ್‌ ನಟಿ ಐಶ್ವರ್ಯಾ ರೈ
1/5

ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್‌ ನಟಿ ಐಶ್ವರ್ಯಾ ರೈ ಮತ್ತೊಮ್ಮೆ ತಮ್ಮ ಸ್ಪೆಷಲ್‌ ಗೌನ್‌ನಲ್ಲಿ ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಮಿಂಚಿದ್ದಾರೆ.

2/5

ರೆಡ್‌ ಕಾರ್ಪೆಟ್‌ನಲ್ಲಿ ಎರಡು ಬಾರಿ ಡಿಫರೆಂಟ್‌ ಲುಕ್‌

ಎರಡು ಬಾರಿ ರೆಡ್‌ ಕಾರ್ಪೆಟ್‌ನಲ್ಲಿ ವಾಕ್‌ ಮಾಡಿದ ಐಶ್ವರ್ಯಾ ರೈ ಒಂದೊಂದು ಬಾರಿಯೂ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಒಂದಕ್ಕೊಂದು ಸ್ವಾಮ್ಯತೆ ಇರಲಿಲ್ಲ! ಆದರೆ, ಎಂದಿನಂತೆ ಅವರ, ಫ್ಯಾಷನ್‌ ಲುಕ್‌ ಎಲ್ಲರ ಪ್ರಶಂಸೆ ಗಳಿಸಿತು ಎನ್ನುತ್ತಾರೆ ಫ್ಯಾಷನಿಸ್ಟಾ ರಾಜೇಶ್‌ ಶೆಟ್ಟಿ.

3/5

ಡಾಲ್ಸ್ & ಗಬ್ಬಾನ ಮೆರ್ಮೈಡ್‌ ಗೌನ್‌

ಈ ಬಾರಿ ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ತಮ್ಮ ಡಾಲ್ಸ್ & ಗಬ್ಬಾನ ಲುಕ್‌ನಲ್ಲಿ ಕಾಣಿಸಿಕೊಂಡರು. ಶಿಮ್ಮರಿಂಗ್‌ ವೈಟ್‌ ಮೆರ್ಮೈಡ್‌ ಗೌನ್‌ ಧರಿಸಿದ್ದರು. ವಿಶೇಷವೆಂದರೇ, ಈ ಗೌನ್‌ಗೆ ಬ್ಲ್ಯಾಕ್‌ ಎಂಬಾಲಿಶ್ಡ್‌ ಬ್ಲ್ಯಾಕ್‌ ಬ್ಲೇಜರ್‌ ಮೇಲುಡುಗೆಯಂತೆ ಧರಿಸಿದ್ದರು. ಆಸ್ತ ಶರ್ಮಾ ಸ್ಟೈಲಿಂಗ್‌ ಮಾಡಿದ್ದರು. ಆದರೆ, ಗೌನ್‌ ಮೇಲೆ ಧರಿಸಿದ್ದ ಬ್ಲೇಜರ್‌ ಇಡೀ ಗೌನ್‌ನ ಸೌಂದರ್ಯವನ್ನು ಕೊಂಚ ಮರೆಮಾಚಿತು ಎಂದು ಸ್ಟೈಲಿಸ್ಟ್ ಜೋಸೆಫ್‌ ಅಭಿಪ್ರಾಯ ಪಟ್ಟರೇ, ಫ್ಯಾಷನಿಸ್ಟಾ ಜಾನ್‌, ಇದೊಂದು ಪ್ರಯೋಗಾತ್ಮಕ ಸ್ಟೈಲಿಂಗ್‌. ಹೊಸ ಐಡಿಯಾಗೆ ದಾರಿ ಮಾಡಿ ಕೊಡುತ್ತದೆ ಎಂದು ಹೇಳಿದ್ದಾರೆ.

4/5

ಗೌನ್‌ಗೆ ಸ್ಕಾಲೆಪ್‌ ಬಾರ್ಡರ್

ಇನ್ನು, ಈ ಗೌನ್‌ನ ಕೊನೆಯಲ್ಲಿ ವಿನ್ಯಾಸಗೊಳಿಸಲಾದ ಬ್ಲ್ಯಾಕ್‌ & ವೈಟ್‌ ಕಾಂಬಿನೇಷನ್‌ನ ಸ್ಕಾಲೆಪ್‌ ಬಾರ್ಡರ್‌ ಇಡೀ ಡಿಸೈನರ್‌ವೇರ್‌ನ ಅಂದ ಹೆಚ್ಚಿಸಿತ್ತು ಎಂದಿದ್ದಾರೆ ಸ್ಟೈಲಿಸ್ಟ್ ರಿಯಾ.

5/5

ಫ್ಯಾಷನ್‌ ವಿಶ್ಲೇಷಕರ ವಿಶ್ಲೇ‍ಷಣೆ

ಐಶ್ವರ್ಯಾ ರೈರವರು ಯಾವುದೇ ಉಡುಗೆ ಧರಿಸಿದರೂ ಕೂಡ ಆಕರ್ಷಕವಾಗಿಯೇ ಕಾಣಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ, ಹಳೆಯ ಚಾರ್ಮ್‌ ಉಳಿಸಿಕೊಳ್ಳಲು ಇತ್ತೀಚೆಗೆ ಬಹಳ ಚೂಸಿಯಾಗಿದ್ದಾರೆ ಎಂಬುದು ತಿಳಿದುಬರುತ್ತದೆ ಎಂದಿದ್ದಾರೆ ವಿಶ್ಲೇ‍ಷಕರು.

ಶೀಲಾ ಸಿ ಶೆಟ್ಟಿ

View all posts by this author