ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಜೆನ್‌ ಝೀ ಯುವತಿಯರು ಮೆಚ್ಚಿದ ಆಲಯಾ ಸೈರೆನ್‌ ಡ್ರೆಸ್

ಬಾಲಿವುಡ್‌ ನಟಿ ಆಲಯಾ ಧರಿಸಿರುವ ಅಲ್ಟ್ರಾ ಮಾಡರ್ನ್‌ ವಿನ್ಯಾಸ ಹೊಂದಿರುವ ಸೈರೆನ್‌ ಡ್ರೆಸ್‌ಗೆ ಜೆನ್‌ ಝೀ ಯುವತಿಯರು ಫಿದಾ ಆಗಿದ್ದಾರೆ. ಅಲ್ಟ್ರಾ ಮಾಡರ್ನ್‌ ಹುಡುಗಿಯರ ವಾರ್ಡ್‌ರೋಬ್‌ ಸೇರುತ್ತಿರುವ ಈ ಡ್ರೆಸ್‌ ಸದ್ಯ ಇಯರ್‌ ಎಂಡ್‌ ಫ್ಯಾಷನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ಏನಿದು ಸೈರೆನ್‌ ಡ್ರೆಸ್‌? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಆಲಯಾ, ಬಾಲಿವುಡ್‌ ನಟಿ
1/5

ಜೆನ್‌ ಝೀ ಹುಡುಗಿಯರ ಫೆವರೇಟ್‌

ಬಾಲಿವುಡ್‌ ನಟಿ ಆಲಯಾ ಧರಿಸಿರುವ ಸೈರೆನ್‌ ಡ್ರೆಸ್ ಇದೀಗ ಜೆನ್‌ ಝೀ ಹುಡುಗಿಯರ ಲಿಸ್ಟ್‌ಗೆ ಸೇರಿದೆ.

2/5

ಇಯರ್‌ ಎಂಡ್‌ ಫ್ಯಾಷನ್‌

ಅಲ್ಟ್ರಾ ಮಾಡರ್ನ್‌ ಹುಡುಗಿಯರ ವಾರ್ಡ್‌ರೋಬ್‌ ಸೇರುತ್ತಿರುವ ಈ ಡ್ರೆಸ್‌ ಸದ್ಯ ಇಯರ್‌ ಎಂಡ್‌ ಫ್ಯಾಷನ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ತಕ್ಷಣಕ್ಕೆ ನೋಡಲು ಲಾಂಗ್‌ ಪೆಪ್ಲಂ ಸ್ಕರ್ಟ್‌ನಂತೆ ಕಾಣಿಸುವ ಈ ಡ್ರೆಸ್‌ ಇನ್ನೊಂದು ಕಡೆಯಿಂದ ನೋಡಿದಾಗ ಅಸ್ಸೆಮ್ಮಿಟ್ರಿಕಲ್‌ ಗೌನ್‌ನಂತೆ ಕಾಣಿಸುತ್ತದೆ. ಮತ್ತೊಂದು ಕಡೆಯಿಂದ ಗ್ಲಾಮರಸ್‌ ಕಾರ್ಪೋರೇಟ್‌ ಲುಕ್‌ ನೀಡುವ ಕಟೌಟ್‌ ಸ್ಕರ್ಟ್ ಸೂಟ್‌ನಂತೆಯೂ ಕಾಣಿಸುತ್ತದೆ. ಕೆಲವರಿಗೆ ವೆಸ್ಟರ್ನ್‌ ಪಾರ್ಟಿ ಔಟ್‌ಫಿಟ್‌ನಂತೆಯೂ ಭಾಸವಾಗುತ್ತದೆ. ಹೀಗೆ ನಾನಾ ವಿನ್ಯಾಸಗಳನ್ನು ಒಂದರಲ್ಲೇ ಹೊಂದಿದೆ.

3/5

ಏನಿದು ಸೈರೆನ್‌ ಡ್ರೆಸ್‌?

ಸಿಂಪಲ್‌ ಭಾಷೆಯಲ್ಲಿ ಹೇಳುವುದಾದರೇ, ಸಮ್ಮಿಶ್ರ ಡಿಸೈನ್‌ ಹೊಂದಿರುವ ಡ್ರೆಸ್‌ ಇದು. ಕಟೌಟ್‌ನಂತೆ ಕಂಡರೂ ಇದು ಅದಲ್ಲ! ಸ್ಪೆಗೆಟಿ ವಿನ್ಯಾಸದ ಬಾಡಿ ಹಗ್ಗಿಂಗ್‌ ಇರುವಂತಹ ಲಾಂಗ್‌ ಸ್ಕರ್ಟ್‌ನಂತೆ ಕಾಣುವ ಉಡುಗೆಯಿದು. ಸಿಂಪಲ್‌ ಬಾಡಿಕಾನ್‌ ಗೌನ್‌ನಂತಿರುವ ಡಿಸೈನರ್‌ವೇರ್‌ ಇದು. ಒಟ್ಟಾರೆ, ನಾನಾ ವಿನ್ಯಾಸಗಳ ಸಮ್ಮಿಶ್ರಗೊಂಡ ಸೈರೆನ್‌ ಡ್ರೆಸ್‌ ಇದು ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್‌.

4/5

ಯೂನಿಕ್‌ ಔಟ್‌ಫಿಟ್‌ನಲ್ಲಿ ಆಲಯಾ

ಅಂದಹಾಗೆ, ಆಲಯಾ ಬಾಲಿವುಡ್‌ನಲ್ಲಿ ಕೇವಲ ನಾಲ್ಕೈದು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಆಗಾಗ್ಗೆ ಫ್ಯಾಷನ್‌ ಫೋಟೋ ಶೂಟ್‌ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿ ಇರುವಂತಹ ನಟಿ. ಎಲ್ಲದಕ್ಕಿಂತ ಹೆಚ್ಚಾಗಿ ನಟಿ ಪೂಜಾ ಬೇಡಿಯ ಮಗಳು. ಪ್ರತಿ ಇವೆಂಟ್‌ನಲ್ಲೂ ತನ್ನದೇ ಆದ ಯೂನಿಕ್‌ ಫ್ಯಾಷನ್‌ ಡಿಸೈನರ್‌ವೇರ್ಸ್ ಧರಿಸಿ ಕಾಣಿಸಿಕೊಳ್ಳುವ ಖಯಾಲಿ ಹೊಂದಿರುವ ಅಲ್ಟ್ರಾ ಮಾಡರ್ನ್‌ ಯುವನಟಿ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್‌.

5/5

ಅಲ್ಟ್ರಾ ಮಾಡರ್ನ್‌ ಲುಕ್‌ಗಾಗಿ ಸೈರೆನ್‌ ಡ್ರೆಸ್‌

ಈ ಜನರೇಷನ್‌ ಹುಡುಗಿಯರು, ಈ ಇಯರ್‌ ಎಂಡ್‌ನ ಪಾರ್ಟಿಗಳಿಗಾಗಿ ಗ್ಲಾಮರಸ್‌ ಹಾಗೂ ಬಾಡಿ ಹಗ್ಗಿಂಗ್‌ ಔಟ್‌ಫಿಟ್‌ಗಳನ್ನು ಇಷ್ಟಪಡತೊಡಗಿದ್ದಾರೆ. ಆ ಲಿಸ್ಟ್‌ಗೆ ಈ ಸೈರೆನ್‌ ಡ್ರೆಸ್‌ ಸೇರಿಕೊಂಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author