Star Fashion 2025: ಫ್ಯಾಷನಿಸ್ಟಾಗಳ ಮೆಚ್ಚುಗೆ ಗಳಿಸಿದ ಕಂಗನಾ ಧರಿಸಿದ ಗೊಂಚಾ ಟ್ರೆಡಿಷನಲ್ ಉಡುಗೆ
ಲಡಾಕ್ನ ಟ್ರೆಡಿಷನಲ್ ಗೊಂಚಾ ಉಡುಗೆಯಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಕಂಗನಾ ಅವರ ಈ ಲುಕ್ ಫ್ಯಾಷನಿಸ್ಟಾಗಳ ಮೆಚ್ಚುಗೆಗೆ ಪಾತ್ರವಾಗಿದೆ. ಏನಿದು ಗೊಂಚಾ ಔಟ್ಫಿಟ್? ಫ್ಯಾಷನಿಸ್ಟಾಗಳ ರಿವ್ಯೂ ಏನು? ಈ ಕುರಿತ ವರದಿ ಇಲ್ಲಿದೆ.
ಬಾಲಿವುಡ್ ನಟಿ ಕಂಗನಾ ರಾಣಾವತ್ -
ಟ್ರೆಡಿಷನಲ್ ಗೊಂಚಾ ಉಡುಗೆಯಲ್ಲಿ ವಿಂಟರ್ ವೆಡ್ಡಿಂಗ್ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಲುಕ್ಗೆ ಫ್ಯಾಷನಿಸ್ಟಾಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಡ್ಡಗಾಡು ಪ್ರದೇಶದ ಸಾಂಪ್ರದಾಯಿಕ ಉಡುಗೆ
ಲಡಾಕ್ನ ಟ್ರೆಡಿಷನಲ್ ಉಡುಗೆಯಾದ ಗೊಂಚಾ ಔಟ್ಫಿಟ್ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ! ಗುಡ್ಡಗಾಡು ಪ್ರದೇಶದ ಜನರು ಮದುವೆಯಲ್ಲಿ ಧರಿಸುವ ವಿನ್ಯಾಸದ ಈ ಔಟ್ಫಿಟ್ ಇದೀಗ ಕಂಗನಾ ಅವರನ್ನು ಸಿಂಗರಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಖುದ್ದು ಕಂಗನಾ, ಈ ಉಡುಗೆಯಲ್ಲಿರುವ ನಾನಾ ಪೋಸ್ಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಂಗನಾರ ಲಡಾಕಿ ಗೊಂಚಾ ಔಟ್ಫಿಟ್
ಅಂದಹಾಗೆ, ಲಡಾಕ್ನ ಟ್ರೆಡಿಷನಲ್ ಈ ಉಡುಗೆ ಅಲ್ಲಿನ ಸಂಸ್ಕೃತಿಯ ಧ್ಯೋತಕವಾಗಿದೆ. ದೇಹವನ್ನು ಬೆಚ್ಚಗಿಡುವ ಹಾಗೂ ಪಾದದವರೆಗೂ ಇರುವ ಈ ಉಡುಪು ಗೌನ್ನಂತೆ ಉದ್ದವಾಗಿದೆ. ಫುಲ್ ಸ್ಲೀವ್ ಹೊಂದಿದೆ. ಹಸಿರು ಹಾಗೂ ಮರೂನ್ ಕಾಂಬಿನೇಷನ್ನ ಫ್ಯಾಬ್ರಿಕ್ನಲ್ಲಿ ಡಿಸೈನ್ ಮಾಡಲಾಗಿದೆ. ಇದರ ಮೇಲೊಂದು ಮಸ್ಟರ್ಡ್ ಹಾಗೂ ಯೆಲ್ಲೋ ಮಿಶ್ರಿತ ಶಾಲು ಗೊಂಚಾ ಔಟ್ಫಿಟ್ಟಿನ ಸೌಂದರ್ಯ ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ವಿದ್ಯಾ ವಿವೇಕ್.
ಡಿಸೈನರ್ ಟ್ರೆಡಿಷನಲ್ ಉಡುಗೆ
ಅಂದಹಾಗೆ, ಕಂಗನಾ ಅವರ ಈ ಟ್ರೆಡಿಷನಲ್ ಉಡುಗೆಯನ್ನು ನಮ್ಜಾ ಕಾಚರ್ ಬ್ರಾಂಡ್ ವಿಶೇಷವಾಗಿ ಡಿಸೈನ್ ಮಾಡಿದೆ. ಈ ಉಡುಗೆಯನ್ನು ಧರಿಸಿರುವ ಕಂಗನಾ ನಮ್ಮ ರಾಷ್ಟ್ರದಲ್ಲಿನ ಒಂದು ಪ್ರಾಂತ್ಯದ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದಿದ್ದಾರೆ ಫ್ಯಾಷನಿಸ್ಟಾ ಜಾನ್.
ಮೆಚ್ಚುಗೆ ಗಳಿಸಿದ ಉಡುಗೆ
ಕಂಗನಾ ಧರಿಸಿರುವ ಈ ಉಡುಗೆಯ ಡಿಸೈನ್ಗೆ ಇದೀಗ ಫ್ಯಾಷನ್ಲೋಕದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಂಗನಾ ಅವರು ಸ್ಥಳೀಯ ಉಡುಗೆ ತೊಡುಗೆಗಳಿಗೆ ಆದ್ಯತೆ ನೀಡಿರುವುದು ಪ್ರಶಂಸನೀಯ ಎಂದಿದ್ದಾರೆ ಸಾಕಷ್ಟು ಫ್ಯಾಷನ್ ವಿಮರ್ಶಕರು.