ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಅನಿಮಲ್‌ ಪ್ರಿಂಟೆಡ್‌ ಸೀರೆಯಲ್ಲಿ ಕರೀನಾ ವೈಲ್ಡ್ ಲುಕ್‌

Star Fashion 2025: ಬಾಲಿವುಡ್‌ ನಟಿ ಕರೀನಾ ಕಪೂರ್‌ ಅನಿಮಲ್‌ ಪ್ರಿಂಟೆಡ್‌ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ವೈಲ್ಡ್ ಲುಕ್‌ಗೆ ಸೈ ಎಂದಿದ್ದಾರೆ. ಇದ್ಯಾವ ಬಗೆಯ ಸೀರೆ ಫ್ಯಾಷನ್‌? ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಏನು ಹೇಳುತ್ತಾರೆ? ಇಲ್ಲಿದೆ ವಿವರ.

ಚಿತ್ರಗಳು: ಕರೀನಾ ಕಪೂರ್‌, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ಕರೀನಾ ಕಪೂರ್‌ ಅನಿಮಲ್‌ ಪ್ರಿಂಟೆಡ್‌ ಸೀರೆಯಲ್ಲಿ ವೈಲ್ಡಾಗಿ ಕಾಣಿಸಿಕೊಂಡಿದ್ದಾರೆ.

2/5

ಬದಲಾದ ಕರೀನಾ ಸೀರೆ ಸ್ಟೇಟ್‌ಮೆಂಟ್‌

ಹೌದು, ಶಿಲ್ಪಾ ಶೆಟ್ಟಿಯ ನಂತರ ಈ ರೀತಿಯ ಅನಿಮಲ್‌ ಪ್ರಿಂಟೆಡ್‌ ಸೀರೆಯಲ್ಲಿ ಅದರಲ್ಲೂ ವೈಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕರೀನಾ ಕಪೂರ್‌, ತಮ್ಮ ಸೀರೆ ಸ್ಟೇಟ್‌ಮೆಂಟ್‌ಗೆ ಹೊಸತನ್ನು ಸೇರಿಸಿದ್ದಾರೆ. ಇವರ ಈ ವೈಲ್ಡ್ ಲುಕ್‌ಗೆ ಫ್ಯಾಷನ್‌ ಪ್ರಿಯರು ಫಿದಾ ಆಗಿದ್ದು, ಜೆನ್‌ ಜಿ ಹುಡುಗಿಯರ ಹುಬ್ಬೇರಿಸಿದೆ. ಜತೆಗೆ ಪ್ರಯೋಗಾತ್ಮಕ ಸೀರೆ ಉಡುವವರನ್ನು ಪ್ರೇರೇಪಿಸಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

3/5

ಅನಿಮಲ್‌ ಪ್ರಿಂಟೆಡ್‌ ಸೀರೆ ಪುರಾಣ

ಅನಿಮಲ್‌ ಪ್ರಿಂಟೆಡ್‌ ಸೀರೆಗಳು ದಶಕಗಳ ಹಿಂದೆಯೇ ಚಾಲ್ತಿಯಲ್ಲಿದ್ದವು. ಸೀರೆಗಿಂತ ಹೆಚ್ಚಾಗಿ ಔಟ್‌ಫಿಟ್‌ಗಳು ಟ್ರೆಂಡಿಯಾಗಿದ್ದವು. ಕೆಲವು ಸೆಲೆಬ್ರೆಟಿಗಳು ಮಾತ್ರ ಇಂತಹ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇವು ವೈಲ್ಡ್ ಲುಕ್‌ ನೀಡುವ ಕಾರಣ ಸಾಮಾನ್ಯ ಮಹಿಳೆಯರನ್ನು ತಲುಪಲಿಲ್ಲ! ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

4/5

ಏನಿದು ಅನಿಮಲ್‌ ಪ್ರಿಂಟೆಡ್‌ ಸೀರೆ?

ಪ್ರಾಣಿಗಳ ಪ್ರಿಂಟ್‌ ಇರುವ ಸೀರೆಗಳನ್ನು ಅನಿಮಲ್‌ ಪ್ರಿಂಟೆಡ್‌ ಸೀರೆಗಳೆಂದು ಕರೆಯಲಾಗುತ್ತದೆ. ಅದು ಚೀತಾ, ಜಿರಾಫೆ, ಹುಲಿಯ ಪಟ್ಟೆಯದ್ದಾಗಬಹುದು. ಕರೀನಾ ಉಟ್ಟಿರುವ ಸೀರೆ ಅನಿಮಲ್‌ ಪ್ರಿಂಟ್‌ದ್ದಾಗಿದ್ದು, ಅದರಲ್ಲೂ ಚೀತಾ ಪ್ರಿಂಟ್‌ದ್ದಾಗಿದೆ. ಇದು ಉಟ್ಟವರಿಗೆ ಟ್ರೆಡಿಷನಲ್‌ ಲುಕ್‌ ಕೊಡುವುದಿಲ್ಲ, ಬದಲಾಗಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡುತ್ತದೆ. ಅದರಲ್ಲೂ ಚೀತಾ ಪ್ರಿಂಟ್‌ ಆಗಿರುವುದರಿಂದ ಈ ಸೀರೆಯ ಸ್ಟೈಲಿಂಗನ್ನು ವೈಲ್ಡ್ ಲುಕ್‌ ಕೆಟಗರಿಗೆ ಸೇರಿಸಲಾಗಿದೆ ಎಂದು ವಿಮರ್ಶಿಸುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್‌ ಜಾನ್‌.

5/5

ಸೀರೆಯಲ್ಲೂ ಕರೀನಾ ಬೋಲ್ಡ್ ಲುಕ್‌

ಕರೀನಾಳ ಈ ಸೀರೆ ಸಭ್ಯಸಾಚಿ ಡಿಸೈನ್‌ನದ್ದಾಗಿದೆ. ಇವೆಂಟ್‌ವೊಂದರಲ್ಲಿ ಈ ವೈಲ್ಡ್ ಲುಕ್‌ನಲ್ಲಿ ಕರೀನಾ ಕಾಣಿಸಿಕೊಂಡಿರುವುದು, ಇಂತಹ ಸೀರೆಗಳು ಮತ್ತೊಮ್ಮೆ ಸೀಸನ್‌ನಲ್ಲಿ ಮರುಕಳಿಸಲು ಪ್ರೇರಣೆ ನೀಡಿದೆ. ಮತ್ತೊಮ್ಮೆ ಟ್ರೆಂಡಿಯಾಗಲು ಕಾರಣವಾಗಲಿದೆ ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್.

ಶೀಲಾ ಸಿ ಶೆಟ್ಟಿ

View all posts by this author