ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಕಲಾತ್ಮಕ ಪಾರದರ್ಶಕ ಲೆಹೆಂಗಾದಲ್ಲಿ ಕಾಣಿಸಿಕೊಂಡ ಖುಷಿ ಕಪೂರ್‌

ಬಾಲಿವುಡ್‌ ನಟಿ ಖುಷಿ ಕಪೂರ್‌ ಕಲಾತ್ಮಕ ಪಾರದರ್ಶಕ ಫುಲ್‌ ಸ್ಲೀವ್‌ ಲೆಹೆಂಗಾದಲ್ಲಿ ಕಂಪ್ಲೀಟ್‌ ಎಥ್ನಿಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲೆಹೆಂಗಾ ಸೂಕ್ಷ್ಮ ಹ್ಯಾಂಡ್‌ ವರ್ಕ್‌ ಹಾಗೂ ವಿಂಟೇಜ್‌ ಡಿಸೈನ್‌ಗಳನ್ನು ಒಳಗೊಂಡಿದೆ. ಇದ್ಯಾವ ಬಗೆಯ ಲೆಹೆಂಗಾ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಖುಷಿ ಕಪೂರ್‌, ಬಾಲಿವುಡ್‌ ನಟಿ
1/5

ಪಾರದರ್ಶಕ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್‌ ನಟಿ ಖುಷಿ ಕಪೂರ್‌.

2/5

ವೆಡ್ಡಿಂಗ್‌ ಇವೆಂಟ್‌ಗೆ ಧರಿಸಿದ ಶೀರ್‌ ಲೆಹೆಂಗಾ

ಹೌದು, ಸ್ನೇಹಿತೆಯೊಬ್ಬಳ ಮದುವೆಯಲ್ಲಿ ನಟಿ ಖುಷಿ ಕಪೂರ್‌ ಕಲಾತ್ಮಕ ವಿನ್ಯಾಸದ ಫುಲ್‌ ಸ್ಲೀವ್‌ ಪಾರದರ್ಶಕ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದು, ಈ ಲೆಹೆಂಗಾ ಸೂಕ್ಷ್ಮ ಹ್ಯಾಂಡ್‌ ವರ್ಕ್‌ ಹಾಗೂ ವಿಂಟೇಜ್‌ ಡಿಸೈನ್‌ಗಳನ್ನು ಒಳಗೊಂಡಿದೆ.

3/5

ಹೈ ಎಥ್ನಿಕ್‌ ಫ್ಯಾಷನ್‌ ಫಾಲೋ ಮಾಡುವ ಖುಷಿ ಕಪೂರ್‌

ಅಂದಹಾಗೆ, ಖುಷಿ ಕಪೂರ್‌ ಕೂಡ ತನ್ನ ಅಕ್ಕ ಜಾನ್ವಿ ಕಪೂರ್‌ಳಂತೆಯೇ ಯೂನಿಕ್‌ ಹಾಗೂ ಡಿಫರೆಂಟ್‌ ವಿನ್ಯಾಸದ ಔಟ್‌ಫಿಟ್‌ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಅಲ್ಲದೇ ಎಥ್ನಿಕ್‌ ಲುಕ್‌ ವಿಷಯಕ್ಕೆ ಬಂದಾಗ ಮನೀಶ್ ಮಲ್ಹೋತ್ರಾ, ತರುಣ್‌ ತೆಹ್ಲಯಾನಿ, ಸಭ್ಯಸಾಚಿಯವರಂತಹ ಸೆಲೆಬ್ರೆಟಿ ಡಿಸೈನರ್‌ಗಳ ಡಿಸೈನರ್‌ವೇರ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಅವರಿಬ್ಬರೂ ಧರಿಸುವ ಪ್ರತಿಯೊಂದು ಔಟ್‌ಫಿಟ್‌ ಡಿಫರೆಂಟ್‌ ಆಗಿರುತ್ತದೆ ಹಾಗೂ ಯೂನಿಕ್‌ ಲುಕ್‌ ಕಲ್ಪಿಸುತ್ತದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ಇದ್ಯಾವ ಬಗೆಯ ಶೀರ್‌ ಲೆಹೆಂಗಾ?

ಪಾರದರ್ಶಕ ಬ್ಲೌಸ್‌ ಹೊಂದಿರುವ ಈ ಲೆಹೆಂಗಾವನ್ನು ಶೀರ್‌ ಲೆಹೆಂಗಾ ಎನ್ನಲಾಗುತ್ತದೆ. ಕ್ರಾಪ್‌ ಟಾಪ್‌ನಂತೆ ಇರುವ ಈ ಲೆಹೆಂಗಾ ಬ್ಲೌಸ್‌ನ ಸ್ಲೀವ್‌ ಮಾತ್ರ ಲಾಂಗ್‌ ಇದೆ. ಅಲ್ಲದೇ, ಕಲಾತ್ಮಕವಾಗಿ ವಿನ್ಯಾಸ ಮಾಡಲಾಗಿದೆ. ಆರ್ಟಿಸ್ಟಿಕ್‌ ಲುಕ್‌ ನೀಡಿದೆ. ಬ್ಲೌಸ್ಗೆ ಲೈನಿಂಗ್‌ ಇಲ್ಲದೇ ಡಿಸೈನ್‌ ಮಾಡಿರುವುದರಿಂದ ಖುಷಿಯ ಶೋಲ್ಡರ್‌ ಹಾಗೂ ದೇಹದ ಮೇಲ್ಭಾಗ ಹೈಲೈಟಾಗಿದೆ. ಗ್ಲಾಮರಸ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

5/5

ಶೀರ್‌ ಅಥವಾ ಪಾರದರ್ಶಕ ಲೆಹೆಂಗಾ ಧರಿಸಿರುವ ಖುಷಿ ಕಪೂರ್‌ರ ಈ ಎಥ್ನಿಕ್‌ ಲುಕ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದೆ. ಲೆಹೆಂಗಾ ಬ್ಲೌಸನ್ನು ಹೀಗೂ ಡಿಸೈನ್‌ ಮಾಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶೀಲಾ ಸಿ ಶೆಟ್ಟಿ

View all posts by this author