ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ವಿಂಟರ್‌ನಲ್ಲಿ ಟ್ರೆಂಡಿಯಾದ ಮಾಧುರಿ ದೀಕ್ಷಿತ್‌ ಬ್ಲೇಜರ್‌ ಲೆಹೆಂಗಾ

Madhuri Dixit: ವಿದೇಶಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಧರಿಸಿದ್ದ ಬ್ಲೇಜರ್‌ ಲೆಹೆಂಗಾ ಇದೀಗ ಟ್ರೆಂಡಿಯಾಗಿದೆ. ಎಥ್ನಿಕ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ವಿಂಟರ್‌ ಎಥ್ನಿಕ್‌ವೇರ್ಸ್ ಕೆಟಗರಿಯ ಟಾಪ್‌ ಲಿಸ್ಟ್‌ನಲ್ಲಿದೆ. ಈ ಕುರಿತಂತೆ ಇಲ್ಲಿದೆ ವಿವರ.

ಚಿತ್ರಗಳು: ಮಾಧುರಿ ದೀಕ್ಷಿತ್‌, ಬಾಲಿವುಡ್‌ ನಟಿ
1/5

ಮಾಧುರಿ ದೀಕ್ಷಿತ್‌ ಧರಿಸಿದ್ದ ಬ್ಲೇಜರ್‌ ಲೆಹೆಂಗಾ ಇದೀಗ ಟ್ರೆಂಡಿಯಾಗಿದೆ.

2/5

ಇಂಡೋ-ವೆಸ್ಟರ್ನ್‌ ಫ್ಯೂಶನ್‌ ಲೆಹೆಂಗಾ

ಹೌದು, ವಿದೇಶಿ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಧರಿಸಿದ್ದ, ಈ ಇಂಡೋ-ವೆಸ್ಟರ್ನ್‌ ಫ್ಯೂಶನ್‌ನ ಬ್ಲೇಜರ್‌ ತ್ರೀ ಪೀಸ್‌ ಲೆಹೆಂಗಾ ಇದೀಗ ವಿಂಟರ್‌ ಎಥ್ನಿಕ್‌ವೇರ್ಸ್ ಕೆಟಗರಿಯ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದೆ. ಎಥ್ನಿಕ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

3/5

ವಿಂಟರ್‌ಗೆ ಹೇಳಿ ಮಾಡಿಸಿದ ಲೆಹೆಂಗಾ

ನೋಡಲು ಲಾಂಗ್‌ ಸ್ಕರ್ಟ್ ಜತೆ ಜಾಕೆಟ್‌ ಧರಿಸಿದಂತೆ ಕಾಣಿಸುವ ಈ ಬ್ಲೇಜರ್‌ ಲೆಹೆಂಗಾ ಈ ಚಳಿಗಾಲದ ಸೀಸನ್‌ನಲ್ಲಿ ಟಾಪ್‌ ಸ್ಥಾನ ಗಳಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ದೇಹವನ್ನು ಬೆಚ್ಚಗಿಡುವ ಲೆಹೆಂಗಾಗಳಿವ. ಇದಕ್ಕೆ ಕಾರಣವೂ ಇದೆ. ಚಳಿಗಾಲದಲ್ಲಿ ಹೊರಾಂಗಣ ಕಾರ್ಯಕ್ರಮಗಳಲ್ಲಿ ಸಾಕಷ್ಟು ಮಾನಿನಿಯರು ದೇಹವನ್ನು ಬೆಚ್ಚಗಿಡುವ ಲೆಹೆಂಗಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಹವರ ಅಭಿಲಾಷೆಗೆ ತಕ್ಕಂತೆ ಮಾಧುರಿ ದೀಕ್ಷಿತ್‌ ಧರಿಸಿದಂತಹ ಬ್ಲೇಜರ್‌ ಲೆಹೆಂಗಾಗಳ ನಾನಾ ವಿನ್ಯಾಸದ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ ಹಾಗೂ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಡೈಲಿಸ್ಟ್‌ಗಳು.

5/5

ಇದ್ಯಾವ ಬಗೆಯ ಲೆಹೆಂಗಾ?

ಬ್ಲೇಜರ್‌ ಜತೆಗೆ ನಾರ್ಮಲ್‌ ಲೆಹೆಂಗಾ ಹಾಗೂ ಬ್ಲೌಸ್‌ ಕಾಂಬಿನೇಷನ್‌ನಲ್ಲಿ ನಾನಾ ಡಿಸೈನ್‌ಗಳಲ್ಲಿ ಇವು ದೊರೆಯುತ್ತವೆ. ದುಪಟ್ಟಾ ಅಥವಾ ಚುನರಿ ಬದಲು ಲೆಹೆಂಗಾ ಜೊತೆಗೆ ಬ್ಲೇಜರ್‌ ಅಥವಾ ಜಾಕೆಟ್‌ ಧರಿಸಲಾಗುತ್ತದೆ. ಹಾಗಾಗಿ ಇವನ್ನು ಬ್ಲೇಜರ್‌ ಲೆಹೆಂಗಾ ಎನ್ನುತ್ತಾರೆ ಸ್ಟೈಲಿಸ್ಟ್‌ ಜೆನ್‌.

ಶೀಲಾ ಸಿ ಶೆಟ್ಟಿ

View all posts by this author