ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಯುವತಿಯರನ್ನು ಸವಾರಿ ಮಾಡುತ್ತಿರುವ ಬಾಸ್‌ ಲೇಡಿ ಲುಕ್‌

Boss Lady Look: ಈ ಚಳಿಗಾಲದ ಸೀಸನ್‌ನಲ್ಲಿ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರಿಗೆ ಮಾತ್ರವಲ್ಲ, ಇತರೇ ವರ್ಕಿಂಗ್‌ ಮಾನಿನಿಯರಿಗೂ ಬಾಸ್‌ ಲೇಡಿ ಲುಕ್‌ ಪ್ರಿಯವಾಗುತ್ತಿವೆ. ಇದ್ಯಾವ ಬಗೆಯ ಲುಕ್‌? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ನಟಿ ಸುರ್ವೀನ್‌ ಚಾವ್ಲಾ (ಫೋಟೋಗ್ರಾಫಿ: ತೇಜಸ್‌ ನೇರೂರ್ಕರ್‌)
1/5

ಬಾಸ್‌ ಲೇಡಿ ಲುಕ್‌ ಈ ವಿಂಟರ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಹೌದು, ಈ ಚಳಿಗಾಲದ ಸೀಸನ್‌ನಲ್ಲಿ, ಕಾರ್ಪೋರೇಟ್‌ ಕ್ಷೇತ್ರದ ಯುವತಿಯರಿಗೆ ಮಾತ್ರವಲ್ಲ, ಇತರೇ ವರ್ಕಿಂಗ್‌ ಮಾನಿನಿಯರಿಗೂ ಬಾಸ್‌ ಲೇಡಿ ಲುಕ್‌ ಪ್ರಿಯವಾಗುತ್ತಿದೆ.

2/5

ಸೆಲೆಬ್ರೆಟಿಗಳ ಚಾಯ್ಸ್

ಇದಕ್ಕೆ ಪೂರಕ ಎಂಬಂತೆ, ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯಾ ರೈ ಸೇರಿದಂತೆ ನಾನಾ ಮಾಡೆಲ್‌ಗಳು ಹಾಗೂ ನಟಿಯರು ಇತ್ತೀಚೆಗೆ ಬಾಸ್‌ ಲೇಡಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇಕೆ? ನಟಿ ಸುರ್ವಿನ್‌ ಚಾವ್ಲಾ ಕೂಡ ಬಾಸ್‌ ಲೇಡಿ ಲುಕ್‌ನಲ್ಲಿ ಕಾಣಿಸಿಕೊಂಡು, ಫ್ಯಾಷನ್‌ ಪ್ರಿಯರ ಮನಗೆದ್ದಿದ್ದರು.

3/5

ಏನಿದು ಬಾಸ್‌ ಲೇಡಿ ಲುಕ್‌?

ಅಂದಹಾಗೆ, ಬ್ಲೇಜರ್‌, ಸೂಟ್‌, ಪವರ್‌ ಡ್ರೆಸ್ಸಿಂಗ್‌ ಹಾಗೂ ಲೇಡಿ ಬಾಸ್‌ ಲುಕ್‌ಗೆ ಸಾಥ್‌ ನೀಡುವಂತಹ ಕೋ ಆರ್ಡ್ ಸೂಟ್‌, ಬ್ಲೇಜರ್‌ ಸ್ಕರ್ಟ್‌ಗಳನ್ನು ಬಾಸ್ ಲೇಡಿ ಲುಕ್‌ಗೆ ಧರಿಸಲಾಗುತ್ತದೆ. ಒಟ್ಟಾರೆ, ಟಾಪ್‌ ಜಾಗದಲ್ಲಿ ಬ್ಲೇಜರ್‌ ಶೈಲಿಯ ಕೋಟ್‌, ಕ್ರಾಪ್‌ ಕೋಟ್‌ ಅಥವಾ ಜಾಕೆಟ್‌ ಧರಿಸಲಾಗುತ್ತದೆ. ಇವು ಧರಿಸಿದವರನ್ನು ಕ್ಲಾಸಿಯಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ ಶರ್ಮಾ.

4/5

ಪವರ್‌ ಸೂಟ್‌ / ಸೂಟ್‌ ಸ್ಕರ್ಟ್ / ಕೋ ಆರ್ಡ್ ಬ್ಲೇಜರ್‌ ಲುಕ್‌

ಇನ್ನು, ಯುವತಿಯರು ಮೇಲೆ ಹೆಸರಿಸಿದ ಎಲ್ಲಾ ಔಟ್‌ಫಿಟ್‌ಗಳಲ್ಲೂ ಬಾಸ್‌ ಲೇಡಿ ಲುಕ್‌ ಪಡೆಯಬಹುದು. ಆದರೆ, ಇದಕ್ಕೆ ಸೂಕ್ತವಾದ ಸ್ಟೈಲಿಂಗ್‌ ಕೂಡ ಮಾಡಬೇಕು. ಎಥ್ನಿಕ್‌ ಲುಕ್‌ ಮ್ಯಾಚ್‌ ಆಗದು ಎನ್ನುವ ಸ್ಟೈಲಿಸ್ಟ್ ರಾಶಿ ಒಂದಿಷ್ಟು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

5/5

ಬಾಸ್‌ ಲೇಡಿ ಲುಕ್‌ಗೆ 5 ಸಿಂಪಲ್‌ ಟಿಪ್ಸ್

  • ಪರ್ಸನಾಲಿಟಿಗೆ ತಕ್ಕ ಔಟ್‌ಫಿಟ್‌ ಆಯ್ಕೆ ಮಾಡಿ.
  • ಪವರ್‌ ಡ್ರೆಸ್ಸಿಂಗ್‌ ಕಾನ್ಸೆಪ್ಟ್‌ಗೆ ಮ್ಯಾಚ್‌ ಆಗುವಂತಹ ವಿನ್ಯಾಸವನ್ನು ಚೂಸ್‌ ಮಾಡಿ.
  • ಟ್ರೆಂಡಿಯಾಗಿರುವ ಕಲರ್ಸ್ ಆಯ್ಕೆ ನಿಮ್ಮದಾಗಲಿ.
  • ಇವುಗಳಲ್ಲೆ ಸ್ಲಿಮ್‌ ಫಿಟ್‌ ಔಟ್‌ಫಿಟ್‌ಗಳನ್ನು ಧರಿಸಿ.
  • ಕಂಪ್ಲೀಟ್‌ ಮೇಕೋವರ್‌ ಈ ಔಟ್‌ಫಿಟ್‌ಗೆ ಹೊಂದಲಿ.

ಶೀಲಾ ಸಿ ಶೆಟ್ಟಿ

View all posts by this author