Star Fashion 2025: ಗೋಲ್ಡ್ ಟಿಶ್ಯೂ ಸೀರೆಯಲ್ಲೂ ಹಾಟ್ ಆಗಿ ಕಾಣಿಸಿಕೊಂಡ ದಿಶಾ ಪಟಾನಿ
Disha Patani Saree Look : ಸೆಕ್ಸಿ ನಟಿಯೆಂದೇ ಗುರುತಿಸಿಕೊಂಡಿರುವ ಬಾಲಿವುಡ್‌ನ ನಟಿ ದಿಶಾ ಪಟಾನಿ ಸೆಲೆಬ್ರೆಟಿ ಡಿಸೈನರ್‌ರ ಮನೀಶ್ ಮಲ್ಹೋತ್ರಾ ವಿನ್ಯಾಸದ ಗೋಲ್ಡ್ ಸೀರೆಯಲ್ಲೂ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೇಗಿತ್ತು ಅವರ ಈ ಲುಕ್? ಇಲ್ಲಿದೆ ಫ್ಯಾಷನ್ ರಿವ್ಯೂ.
ಸೀರೆಯಲ್ಲೂ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್ ನಟಿ ದಿಶಾ ಪಟಾನಿ.
ಈಗಾಗಲೇ ಸೆಕ್ಸಿ ನಟಿಯೆಂದೇ ಗುರುತಿಸಿಕೊಂಡಿರುವ ಪಡ್ಡೆ ಹುಡುಗರ ಫೇವರೇಟ್ ಸ್ಟಾರ್ ಎಂದೇ ಹೇಳಲಾಗುವ ಬಾಲಿವುಡ್‌ನ ನಟಿ ದಿಶಾ ಪಟಾನಿ, ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾರವರ ಡಿಸೈನರ್ ಗೋಲ್ಡ್ ಟಿಶ್ಯೂ ಸೀರೆಯಲ್ಲಿ, ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
ಹಾಟ್ ಲುಕ್ ಪ್ರಿಯೆ ದಿಶಾ ಪಟಾನಿ
ಮೊದಲಿನಿಂದಲೂ ಒಂದಲ್ಲ ಒಂದು ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ದಿಶಾ ಪಟಾನಿ, ಪಡ್ಡೆ ಹುಡುಗರ ಫೇವರೇಟ್ ನಟಿ. ಫೋಟೋಶೂಟ್‌ಗಳಲ್ಲಿ ತನ್ನದೇ ಆದ ಸೆಕ್ಸಿ ಪೋಸ್‌ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ತುಂಡು ಔಟ್‌ಫಿಟ್‌ಗಳಲ್ಲಿ ಬಿಚ್ಚಮ್ಮಳಾಗಿ ಗುರುತಿಸಿಕೊಂಡಿರುವವರ ಲಿಸ್ಟ್‌ನಲ್ಲಿದ್ದಾರೆ. ಇನ್ನು, ಫ್ಯಾಷನ್ ಶೋಗಳಲ್ಲೂ ಡಿಸೈನರ್ ಔಟ್‌ಫಿಟ್‌ಗಳಲ್ಲೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಹೇಗೋ ಸೆಕ್ಸಿಯಾಗಿಯೇ ಕಾಣಿಸಿಕೊಂಡು ಸುದ್ದಿಯಾಗುತ್ತಿರುತ್ತಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸೀರೆ ಪ್ರಿಯರನ್ನು ಸೆಳೆದ ದಿಶಾ ಉಟ್ಟ ಗೋಲ್ಡನ್ ಟಿಶ್ಯೂ ಸೀರೆ
ಅಂದಹಾಗೆ, ದಿಶಾ ಉಟ್ಟಿರುವ ಈ ಸೀರೆಯನ್ನು ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದು, ಸೀರೆ ತುಂಬೆಲ್ಲಾ ಪರ್ಲ್ ಹಾಗೂ ಗೋಲ್ಡನ್ ಬೀಡ್ಸ್ ವಿನ್ಯಾಸವಿದೆ. ಇದಕ್ಕೆ ಎಂಬ್ರಾಯ್ಡರಿ ಗೋಲ್ಡನ್ ಬ್ಲೌಸ್ ಸಾಥ್ ನೀಡಿದೆ. ದಿಶಾ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು, ಜ್ಯುವೆಲರಿಗಳಂತೂ ಮ್ಯಾಚಿಂಗ್ ಆಗಿದ್ದು, ಸೀರೆಯಲ್ಲಿ ಬ್ಯೂಟಿಫುಲ್ ನಾರಿ ಎಂಬಂತೆ ಕಾಣಿಸಿಕೊಂಡಿದ್ದಾರೆ.
ಗೋಲ್ಡನ್ ಸೀರೆಯಲ್ಲಿ ದಿಶಾ
ಒಟ್ಟಾರೆ, ದಿಶಾ ಮೈತುಂಬಾ ಹೊದ್ದುಕೊಂಡಂತಿರುವ ಈ ಡಿಸೈನರ್ ಗೋಲ್ಡನ್ ಸೀರೆಯಲ್ಲೂ ಸೆರಗನ್ನು ಕೊಂಚ ಇಳಿಸಿ, ಹಾಟ್ ಪೋಸ್ ನೀಡಿದ್ದಾರೆ. ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.