Star Fashion 2025: ಕಾರ್ಸೆಟ್ ಡ್ರೇಪ್ ಸ್ಕರ್ಟ್ನಲ್ಲಿ ಮಿರಮಿರ ಮಿನುಗಿದ ಶಿಲ್ಪಾ ಶೆಟ್ಟಿ
Shilpa Shetty: ಐವರಿ ಶೇಡ್ನ ಡಿಸೈನರ್ ಕಾರ್ಸೆಟ್ ಡ್ರೇಪ್ ಸ್ಕರ್ಟ್ನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಿರಮಿರ ಮಿನುಗಿದ್ದಾರೆ. ಹಾಗಾದಲ್ಲಿ, ಏನಿದು ಕಾರ್ಸೆಟ್ ಡ್ರೇಪ್ ಸ್ಕರ್ಟ್? ಇದರ ವಿಶೇಷತೆ ಏನು? ಫ್ಯಾಷನಿಸ್ಟಾಗಳು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಚಿತ್ರಗಳು: ಶಿಲ್ಪಾ ಶೆಟ್ಟಿ, ಬಾಲಿವುಡ್ ನಟಿ -
ಐವರಿ ಶೇಡ್ನ ಡಿಸೈನರ್ ಕಾರ್ಸೆಟ್ ಡ್ರೇಪ್ ಸ್ಕರ್ಟ್ನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಿರಮಿರ ಮಿನುಗಿದ್ದಾರೆ. ವಿಶೇಷವೆಂದರೆ ಇದರ ಮೇಲೊಂದು ಜಾಕೆಟ್ ಕೂಡ ಧರಿಸಿ, ವಿಂಟರ್ ಫ್ಯಾಷನ್ಗೆ ಸೈ ಎಂದಿದ್ದಾರೆ.
ಶಿಲ್ಪಾ ಶೆಟ್ಟಿಯನ್ನು ಥಳಕು ಬಳುಕಾಗಿಸಿದ ಔಟ್ಫಿಟ್
ಹೌದು, ಫಿಟ್ ದೇಹವನ್ನು ತೋರ್ಪಡಿಸುವ ಈ ಕಾರ್ಸೆಟ್ ಡ್ರೇಪ್ ಸ್ಕರ್ಟ್ನಲ್ಲಿ ಕಾಣಿಸಿಕೊಂಡಿರುವ ಶಿಲ್ಪಾ ಶೆಟ್ಟಿ, ತಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಥಳಕು ಬಳುಕಾಗಿ ಕಾಣಿಸಿಕೊಂಡಿದ್ದಾರೆ. ಸೀಸನ್ ಹೆಸರಲ್ಲಿ ಮೇಲೊಂದು ಹೆಸರಿಗೆ ಜಾಕೆಟ್ ಧರಿಸಿದ್ದಾರೆ. ಇದು ವಿಂಟರ್ ಲುಕ್ಗೆ ಸಾಥ್ ನೀಡಿದೆ ಎಂದಿದ್ದಾರೆ ಫ್ಯಾಷನ್ ಎಕ್ಸ್ಪರ್ಟ್ಸ್.
ಏನಿದು ಕಾರ್ಸೆಟ್ ಡ್ರೇಪ್ ಸ್ಕರ್ಟ್
ಪಾಶ್ವಿಮಾತ್ಯ ರಾಷ್ಟ್ರಗಳ ಫ್ಯಾಷನ್ ಲಿಸ್ಟ್ನಲ್ಲಿದ್ದ ಕಾರ್ಸೆಟ್ ಇದೀಗ ನಮ್ಮಲ್ಲೂ ಟ್ರೆಂಡಿಯಾಗಿದೆ. ಅಚ್ಚರಿ ಎಂದರೆ ಇಲ್ಲಿನ ಡಿಸೈನರ್ಗಳು ಈ ಕಾರ್ಸೆಟ್ಗೆ ಕಂಪ್ಲೀಟ್ ನಮ್ಮ ನೆಲದ ಟಚ್ ನೀಡಿ, ಅದನ್ನು ಎಥ್ನಿಕ್ವೇರ್ ಆಗಿಸಿದ್ದಾರೆ. ದೇಹದ ಮೇಲ್ಭಾಗದ ಭಾಗವನ್ನು ಬಾಡಿಫಿಟ್ ಆಗಿರುವಂತೆ ಬಿಂಬಿಸುವ ಉಡುಪೇ ಈ ಕಾರ್ಸೆಟ್. ಆಯಾ ಡಿಸೈನ್ಗೆ ತಕ್ಕಂತೆ ಬದಲಾಗುತ್ತದೆಯಾದರೂ ನೋಡಲು ಮಾತ್ರ ಒಂದೇ ತರಹದ್ದಾಗಿ ಕಾಣಿಸುತ್ತದೆ.
ಡ್ರೇಪ್ ಸ್ಕರ್ಟ್ ವಿಶೇಷತೆ
ಇನ್ನು, ಶಿಲ್ಪಾ ಶೆಟ್ಟಿಯ ಡ್ರೇಪ್ ಸ್ಕರ್ಟ್ ಕಂಪ್ಲೀಟ್ ಎಥ್ನಿಕ್ ಲುಕ್ ಹೊಂದಿದೆ. ವೇಸ್ಟ್ಲೈನ್ ಮಾತ್ರವಲ್ಲ, ಪಾದದವರೆಗೂ ಶೇಪ್ ನೀಡುವ ಈ ಔಟ್ಫಿಟ್ ಇತ್ತೀಚೆಗೆ ಟ್ರೆಂಡಿಯಾಗಿದೆ ಕೂಡ. ಡಿಸೈನರ್ಗಳು ಇದಕ್ಕೂ ಟ್ರೆಡಿಷನಲ್ ಟಚ್ ನೀಡಿದ್ದಾರೆ. ಒಟ್ಟಾರೆ ಕಾರ್ಸೆಟ್ ಜತೆಗೆ ಇದನ್ನು ಮ್ಯಾಚ್ ಮಾಡಿರುವುದರಿಂದ ಇದು ಶಿಲ್ಪಾ ಶೆಟ್ಟಿಯವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಐವರಿ ಶೇಡ್ನ ಡಿಸೈನರ್ ಕಾರ್ಸೆಟ್ ಡ್ರೇಪ್ ಸ್ಕರ್ಟ್ನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಿರಮಿರ ಮಿನುಗಿದ್ದಾರೆ.