ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಟಾಪ್‌ ಟ್ರೆಂಡ್‌ ಲಿಸ್ಟ್ ಸೇರಿರುವ ಸಲ್ಮಾನ್‌ ಖಾನ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಿವು!

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಿನಿಮಾಗಳಲ್ಲಿನ ಅವರ ಒಂದೊಂದು ಸ್ಟೈಲ್‌ ಹಾಗೂ ಫ್ಯಾಷನ್‌ ಸಾಕಷ್ಟು ಬಾರಿ ಟ್ರೆಂಡ್‌ ಸೃಷ್ಟಿಸಿ, ಟಾಪ್‌ ಲಿಸ್ಟ್ ಸೇರಿವೆ. ಸಲ್ಮಾನ್‌ರ 60ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಕೆಲವು ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳ ಸಂಕ್ಷಿಪ್ತ ವಿವರ ಇಲ್ಲಿ ನೀಡಲಾಗಿದೆ.

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಚಿತ್ರಕೃಪೆ: ಸಲ್ಮಾನ್‌ ಖಾನ್‌ ಇನ್ಸ್ಟಾ ಖಾತೆ
1/5

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳು ಇಂದಿಗೂ ಟ್ರೆಂಡ್‌ನಿಂದ ಹೊರ ಬಿದ್ದಿಲ್ಲ! ಹಾಗೆನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ಪ್ರತಿ ಸಿನಿಮಾದಲ್ಲೂ ಟ್ರೆಂಡ್‌ ಸೆಟ್‌

ಹೌದು, ಬಾಲಿವುಡ್‌ನ ಸೂಪರ್‌ ಸ್ಟಾರ್‌ ಎಂದೇ ಕರೆಯಲ್ಪಡುವ ಸಲ್ಮಾನ್‌ ಖಾನ್‌ ಅವರದ್ದು ನಿಜ ಜೀವನದಲ್ಲಿ ತೀರಾ ಸಿಂಪಲ್‌ ಫ್ಯಾಷನ್‌ ಹಾಗೂ ಲೈಫ್‌ಸ್ಟೈಲ್‌! ಆದರೆ, ಅವರು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಅವರ ಒಂದೊಂದು ಸ್ಟೈಲ್‌ ಹಾಗೂ ಫ್ಯಾಷನ್‌ ಸಾಕಷ್ಟು ಬಾರಿ ಟ್ರೆಂಡ್‌ ಸೃಷ್ಟಿಸಿದೆ. ಅವರ ಫ್ಯಾನ್‌ ಫಾಲೋವಿಂಗ್ ಜನರನ್ನು ಇಂದಿಗೂ ಆವರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ ಜೆನ್‌.

3/5

ಸಲ್ಮಾನ್‌ ಖಾನ್‌ ಯೂನಿಕ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್

ಅಂದಹಾಗೆ, ಸಲ್ಮಾನ್‌ ಖಾನ್‌ ಅವರ ಯೂನಿಕ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲಿ ಅವರ ಪ್ರತಿನಿತ್ಯದ ಬಿಯಿಂಗ್‌ ಹ್ಯೂಮನ್‌ ಬ್ರಾಂಡ್‌ನ ಬ್ಲ್ಯಾಕ್‌ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್‌ ಸೇರಿದೆ. ಜತೆಗೆ ಪ್ರಿಶಿಯಸ್‌ ಸ್ಟೋನ್‌ ಹೊಂದಿರುವ ಪ್ಲಾಟಿನಂ ಬ್ರೇಸ್‌ಲೆಟ್‌ ಸದಾ ಅವರ ಕೈಗಳಲ್ಲಿರುತ್ತದೆ.

4/5

ಟ್ರೆಂಡ್‌ ಹುಟ್ಟುಹಾಕಿದ ಫ್ಯಾಷನ್‌ ಸ್ಟೇಟ್‌ಮೆಂಟ್ಸ್

  • ಮೈನೆ ಪ್ಯಾರ್‌ ಕೀಯಾ ಸಿನಿಮಾದ ಮಾನೋಕ್ರೋಮಾಟಿಕ್‌ ಲುಕ್‌, ಪ್ರೇಮ್‌ ಪಾತ್ರದ ಶರ್ಟ್ ಮೇಲಿನ ಸ್ವೆಟರ್‌ ಲುಕ್‌ ಅಂದಿನ ಕ್ಲಾಸ್‌ ಲುಕ್‌ ಬಯಸುವ ಯುವಕರನ್ನು ಬಹುಕಾಲ ಆವರಿಸಿಕೊಂಡಿತ್ತು.
  • ತೇರೆ ನಾಮ್‌ ಸಿನಿಮಾದ ಸೆಂಟರ್‌ ಕ್ರಾಪ್‌ ಲಾಂಗ್‌ ಹೇರ್‌ಸ್ಟೈಲ್‌ ಮತ್ತು ಲೆದರ್‌ ಜಾಕೆಟ್‌, ಠಪೋರಿ ವರ್ಗದಲ್ಲಿ ಮಾಸ್‌ ಟ್ರೆಂಡ್‌ ಹುಟ್ಟು ಹಾಕಿತ್ತು.
  • ಸಿನಿಮಾವೊಂದರಲ್ಲಿನ ಶರ್ಟ್‌ಲೆಸ್‌ ಲುಕ್‌ ಫಿಟ್ನೆಸ್‌ ಫ್ರೀಕ್‌ಗಳಿಗೆ ಪ್ರೋತ್ಸಾಹ ನೀಡಿತ್ತು.
  • ಹಮ್‌ ಅಪ್ಕೆ ಹೇ ಕೌನ್‌ ಸಿನಿಮಾದಲ್ಲಿ ಧರಿಸಿದ್ದ ಬ್ಲೇಜರ್‌ ಲುಕ್‌, ಸಾಕಷ್ಟು ವರ್ಷಗಳ ಕಾಲ ಯುವಕರ ಫೇವರೇಟ್‌ ಆಗಿತ್ತು.
  • ಭಜರಂಗಿ ಬಾಯ್‌ಜಾನ್‌ ಹಾಗೂ ಕೆಲವು ಸಿನಿಮಾಗಳಲ್ಲಿನ ಧರಿಸಿದ್ದ ಪಟಾನಿ ಸೂಟ್‌ ಟ್ರೆಡಿಷನಲ್‌ ಲುಕ್‌ ಪ್ರಿಯರನ್ನು ಸೆಳೆದಿತ್ತು.
  • ಇನ್ನು, ಬಹಳಷ್ಟು ಸಿನಿಮಾಗಳಲ್ಲಿ ಸಲ್ಮಾನ್‌ ಧರಿಸಿರುವ ಕಿವಿಯ ರಿಂಗ್‌ ಇಂದಿಗೂ ಟ್ರೆಂಡ್‌ನಲ್ಲಿದೆ.
5/5

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಿನಿಮಾಗಳಲ್ಲಿನ ಅವರ ಒಂದೊಂದು ಸ್ಟೈಲ್‌ ಹಾಗೂ ಫ್ಯಾಷನ್‌ ಸಾಕಷ್ಟು ಬಾರಿ ಟ್ರೆಂಡ್‌ ಸೃಷ್ಟಿಸಿ, ಟಾಪ್‌ ಲಿಸ್ಟ್ ಸೇರಿವೆ.

ಶೀಲಾ ಸಿ ಶೆಟ್ಟಿ

View all posts by this author