ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ನಭಾ ನಟೇಶ್ ರೀತಿ ರೋಸ್‌ ಪಿಂಕ್‌ ಲೆಹೆಂಗಾ ಲುಕ್‌ಗೆ 5 ಐಡಿಯಾ

Actress Nabha Natesh: ನಭಾ ನಟೇಶ್‌ ಧರಿಸಿರುವ ಪಾಸ್ಟೆಲ್‌ ಶೇಡ್‌ನ ಗ್ರ್ಯಾಂಡ್‌ ಲೆಹೆಂಗಾ ಸದ್ಯ ಲೆಹೆಂಗಾ ಪ್ರಿಯರನ್ನು ಆಕರ್ಷಿಸಿದೆ. ಅವರ ಈ ಲುಕ್‌ ಪಡೆಯಲು ಯುವತಿಯರು ಫಾಲೋ ಮಾಡಬೇಕಾದ್ದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ನಭಾ ನಟೇಶ್‌, ನಟಿ
1/5

ಸದ್ಯ ನಭಾ ನಟೇಶ್‌ರನ್ನು ಅತ್ಯಾಕರ್ಷಕವಾಗಿ ಬಿಂಬಿಸಿರುವ ರೋಸ್‌ ಪಿಂಕ್‌ ಲೆಹೆಂಗಾ ಗ್ರ್ಯಾಂಡ್‌ ಟ್ರೆಡಿಷನಲ್‌ ಲುಕ್‌ ಬಯಸುವವರನ್ನು ಸೆಳೆದಿದೆ. ಹಾಗಾದಲ್ಲಿ, ನಭಾರ ಈ ಲುಕ್‌ ಪಡೆದುಕೊಳ್ಳಲು ಬಯಸುವ ಯುವತಿಯರು ಮಾಡಬೇಕಾದ್ದೇನು? ಯಾವ ಫ್ಯಾಷನ್‌ ಹಾಗೂ ಸ್ಟೈಲಿಂಗ್‌ ರೂಲ್ಸ್ ಪಾಲಿಸಿದರೇ ಅವರಂತೆಯೇ ಕಾಣಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು 5 ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

2/5

ಗ್ರ್ಯಾಂಡ್‌ ಪಾಸ್ಟೆಲ್‌ ಶೇಡ್‌ ಲೆಹೆಂಗಾ ಆಯ್ಕೆ ಮಾಡಿ

ಬಹುತೇಕ ಪಾಸ್ಟೆಲ್‌ ಶೇಡ್‌ ಲೆಹೆಂಗಾಗಳು ಡಲ್‌ ಲುಕ್‌ ನೀಡುತ್ತವೆ. ಹಾಗಾಗಿ ನೀವು ಪಾಸ್ಟೆಲ್ ಶೇಡ್‌ ಲೆಹೆಂಗಾ ಆಯ್ಕೆ ಮಾಡುವಾಗ ದುಪಟ್ಟಾ ಅಥವಾ ಲಂಗ ಹೀಗೆ ಯಾವುದಾದರೂ ಒಂದನ್ನು ತೀರಾ ಗ್ರ್ಯಾಂಡ್‌ ಡಿಸೈನ್‌ ಇರುವಂತದ್ದನ್ನು ಆಯ್ಕೆ ಮಾಡಿದರೇ ಉತ್ತಮ.

ಗೋಲ್ಡನ್‌-ಸಿಲ್ವರ್‌ ವರ್ಕ್‌ ಲೆಹೆಂಗಾ

ಗೋಲ್ಡನ್‌ ಅಥವಾ ಸಿಲ್ವರ್‌ ಹ್ಯಾಂಡ್‌ ಎಂಬ್ರಾಯ್ಡರಿ ವರ್ಕ್‌ ಇರುವಂತಹ ಗ್ರ್ಯಾಂಡ್‌ ಲುಕ್‌ ಇರುವಂತಹ ಪಾಸ್ಟೆಲ್‌ ಶೇಡ್‌ನ ಲೆಹೆಂಗಾ ಆಯ್ಕೆ ಮಾಡಿ, ಧರಿಸಿ. ಈ ಹ್ಯಾಂಡ್‌ ಎಂಬ್ರಾಯ್ಡರಿ ವರ್ಕ್‌ ಇಡೀ ಲೆಹೆಂಗಾವನ್ನು ಹೈಲೈಟ್‌ ಮಾಡುತ್ತವೆ.

3/5

ಗ್ರ್ಯಾಂಡ್‌ ಶೀರ್‌ ದುಪಟ್ಟಾ ಧರಿಸಿ

ಲೆಹೆಂಗಾಗೆ ಆದಷ್ಟೂ ಗ್ರ್ಯಾಂಡ್‌ ಎಂಬ್ರಾಯ್ಡರಿ ವರ್ಕ್‌ ಇರುವಂತಹ ಶೀರ್‌ ದುಪಟ್ಟಾವನ್ನು ಆಯ್ಕೆ ಮಾಡಿ ಧರಿಸಿ. ಯಾಕೆಂದರೆ, ಇವು ನೋಡಲು ಗ್ಲಾಮರಸ್‌ ಲುಕ್‌ ನೀಡುವುದರೊಂದಿಗೆ ರಾಯಲ್‌ ಲುಕ್‌ ಕೂಡ ನೀಡುತ್ತವೆ.

4/5

ಜ್ಯುವೆಲರಿಗಳನ್ನು ಮ್ಯಾಚ್‌ ಮಾಡಿ

ಧರಿಸುವ ಲೆಹೆಂಗಾಗೆ ಜ್ಯುವೆಲರಿಗಳನ್ನು ಮ್ಯಾಚ್‌ ಮಾಡಿ. ಅದು ಪರ್ಲ್‌ ಆಗಬಹುದು ಅಥವಾ ಕ್ರಿಸ್ಟಲ್‌ ಸ್ಟೋನ್‌ನದ್ದಾಗಬಹುದು. ಲೆಹೆಂಗಾ ಜತೆಗೆ ಎದ್ದು ಕಾಣಿಸುವಂತಿರಬೇಕು.

5/5

ಮೇಕೋವರ್‌ ಹೀಗಿರಲಿ

ಪಾಸ್ಟೆಲ್‌ ಶೇಡ್‌ನ ಲೆಹೆಂಗಾಗೆ ಆದಷ್ಟೂ ಸಿಂಪಲ್‌ ಮೇಕಪ್‌ ಮತ್ತು ಹೇರ್‌ಸ್ಟೈಲ್‌ ಮಾಡಿ. ಇದು ಎಲಿಗೆಂಟ್‌ ಲುಕ್‌ ನೀಡುವುದು. ನಿಮ್ಮ ಸೌಂದರ್ಯ ಹೆಚ್ಚಿಸುವುದು.

ಶೀಲಾ ಸಿ ಶೆಟ್ಟಿ

View all posts by this author