ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಮೆನ್ಸ್ ಕಾರ್ಪೋರೇಟ್‌ ಲುಕ್‌ಗೆ ಜೆಕೆ ನೀಡುವ 5 ಸಿಂಪಲ್‌ ಟಿಪ್ಸ್

ಜೆಕೆ ಎಂದೇ ಖ್ಯಾತಿ ಗಳಿಸಿರುವ ಕಾರ್ತಿಕ್‌ ಜಯರಾಮ್ ಸ್ಕೈ ಬ್ಲ್ಯೂ ಬ್ಲೇಜರ್‌ ಸೂಟ್‌ನಲ್ಲಿ ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್‌ ಪಡೆಯುವುದು ಹೇಗೆ? ಖುದ್ದು ಜೆಕೆ 5 ಸಿಂಪಲ್‌ ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಕಾರ್ತಿಕ್‌ ಜಯರಾಮ್, ನಟ, ಮಾಡೆಲ್‌
1/5

ವಾವ್ಹ್‌ ಎನ್ನುವಂತೆ ಸಖತ್‌ ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡಿದ್ದಾರೆ ನಟ ಕಾರ್ತಿಕ್‌ ಜಯರಾಮ್‌. ಹೌದು, ಕಿರುತೆರೆಯಲ್ಲಿ ಜೆಕೆ ಎಂದೇ ಖ್ಯಾತಿ ಗಳಿಸಿರುವ ಕಾರ್ತಿಕ್‌ ಜಯರಾಮ್‌ ಅವರು ಸೆಲೆಬ್ರಿಟಿ ಡಿಸೈನರ್‌ ಸಮಂತಾ ಅವರ ಡಿಸೈನ್‌ನ ಆಕಾಶ ನೀಲಿ ವರ್ಣದ ಬ್ಲೇಜರ್‌ ಸೂಟ್‌ನಲ್ಲಿ ನೋಡಲು ಅತ್ಯಾಕರ್ಷಕವಾಗಿ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಕಾರ್ಪೋರೇಟ್‌ ಲುಕ್‌ಗೆ ಫ್ಯಾಷನ್‌ ಪ್ರಿಯ ಪುರುಷರು ಕೂಡ ಸೈ ಎಂದಿದ್ದಾರೆ.

ಇವರ ಈ ಕಾರ್ಪೋರೇಟ್‌ ಲುಕ್‌ ಪಡೆಯುವುದು ಹೇಗೆ? ಎಂದು ವಿಶ್ವವಾಣಿ ನ್ಯೂಸ್‌ ಅವರನ್ನು ಪ್ರಶ್ನಿಸಿದಾಗ ಖುದ್ದು ಅವರೇ 5 ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

2/5

ಸೂಕ್ತ ಬ್ಲೇಜರ್‌ ಸೂಟ್‌ ಆಯ್ಕೆ

ಯುವಕರು ಮೊದಲು ತಮ್ಮ ದೇಹಕ್ಕೆ ಫಿಟ್‌ ಎಂದೆನಿಸುವ ಸೂಕ್ತ ಬ್ಲೇಜರ್‌ ಸೂಟ್‌ ಆಯ್ಕೆ ಮಾಡಬೇಕು. ಅದಕ್ಕಾಗಿ ನಿಮ್ಮ ದೇಹವೂ ಕೂಡ ಹೊಂದಬೇಕು. ಫಿಟ್‌ ಆಗಿರುವ ದೇಹ ಬ್ಲೇಜರ್‌ನಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಬಲ್ಲದು.

3/5

ಬ್ಲೇಜರ್‌ ಧರಿಸಿದವರಲ್ಲಿ ಆತ್ಮವಿಶ್ವಾಸ ಅಗತ್ಯ

ನೀವು ಬ್ಲೇಜರ್‌ ಧರಿಸಿದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚಿರಬೇಕು. ನಿಮ್ಮ ಕಾನ್ಫಿಡೆಂಟ್‌ ನಿಮ್ಮ ಲುಕ್ಕನ್ನು ಮತ್ತಷ್ಟು ಪರ್ಫೆಕ್ಟ್ ಆಗಿಸಬಲ್ಲದು.

ನಿಮಗೆ ಹೊಂದುವ ವಿನ್ಯಾಸಕ್ಕೆ ಆದ್ಯತೆ

ಯುವಕರೇ ನಿಮ್ಮ ಸ್ಕಿನ್‌ಟೋನ್‌ ಹಾಗೂ ನಿಮಗೆ ಹೊಂದುವಂತಹ ವಿನ್ಯಾಸಕ್ಕೆ ಆದ್ಯತೆ ನೀಡಿ. ಇದು ಕೂಡ ನೀವು ಅತ್ಯಾಕರ್ಷಕವಾಗಿ ಕಾಣಿಸಲು ಸಹಕಾರಿಯಾಗುತ್ತದೆ.

4/5

ಮನೋಭಾವದೊಂದಿಗೆ ಆದ್ಯತೆ

ನೂರು ಜನರ ಮಧ್ಯೆಯೂ ಆಕರ್ಷಕವಾಗಿ ಕಾಣಿಸುತ್ತೇನೆ ಎಂಬ ಮನೋಭಾವವಿರಲಿ. ಹಾಗಾಗಿ ಮೊದಲು ನೀವು ನಿಮ್ಮನ್ನು ಪ್ರೀತಿಸಿ.

5/5

ಮುಖದ ಮೇಲೊಂದು ನಗುವಿರಲಿ

ಕೇವಲ ಎಕ್ಸ್‌ಕ್ಲೂಸೀವ್‌ ಔಟ್‌ಫಿಟ್‌ ಧರಿಸಿದರೇ ಸಾಲದು. ಮುಖದ ಮೇಲೆ ಆಟಿಟ್ಯೂಡ್‌ ಜತೆಜತೆಗೆ ಒಂದು ಸ್ಮೈಲ್‌ ಇರಲೇ ಬೇಕು. ಆಗಷ್ಟೇ ನೀವು ಸಖತ್ತಾಗಿ ಕಾಣಿಸುವಿರಿ.

ಶೀಲಾ ಸಿ ಶೆಟ್ಟಿ

View all posts by this author