ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಮಾಧುರಿ ದೀಕ್ಷಿತ್‌ ಪಟೋಲಾ ಸೀರೆ ಲುಕ್‌ಗೆ 5 ಸ್ಟೈಲಿಂಗ್‌ ಐಡಿಯಾ

Madhuri Dixit: ಬಾಲಿವುಡ್‌ ತಾರೆ ಮಾಧುರಿ ದೀಕ್ಷಿತ್‌ ಉಟ್ಟಿದ್ದ ರೆಡ್‌ ಕಲರ್‌ನ ಪಟೋಲಾ ಇಕ್ಕತ್‌ ಬಾಂದನಿ ಸೀರೆ ಯಾರ‍್ಯಾರಿಗೆಲ್ಲಾ ಇಷ್ಟವಾಗಿದೆ? ಈ ಡಿಸೈನರ್‌ ಸೀರೆಯಲ್ಲಿ ನೀವೂ ಕೂಡ ಮಾಧುರಿಯಂತೆಯೇ ಕಾಣಿಸಬೇಕೆಂದುಕೊಂಡಿದ್ದೀರಾ! ಹಾಗಾದಲ್ಲಿ ಈ 5 ಸಿಂಪಲ್‌ ಸ್ಟೈಲಿಂಗ್‌ ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಚಿತ್ರಗಳು: ಮಾಧುರಿ ದೀಕ್ಷಿತ್‌, ಬಾಲಿವುಡ್‌ ನಟಿ
1/5

ಬಾಲಿವುಡ್‌ ತಾರೆ ಮಾಧುರಿ ದೀಕ್ಷಿತ್‌ ಉಟ್ಟಿದ್ದ ರೆಡ್‌ ಕಲರ್‌ನ ಪಟೋಲಾ ಇಕ್ಕತ್‌ ಬಾಂದನಿ ಸೀರೆ ಯಾರ‍್ಯಾರಿಗೆಲ್ಲಾ ಇಷ್ಟವಾಗಿದೆ? ಈ ಡಿಸೈನರ್‌ ಸೀರೆಯಲ್ಲಿ ನೀವೂ ಕೂಡ ಮಾಧುರಿಯಂತೆಯೇ ಕಾಣಿಸಬೇಕೆಂದುಕೊಂಡಿದ್ದೀರಾ! ಹಾಗಾದಲ್ಲಿ ಈ 5 ಸಿಂಪಲ್‌ ಸ್ಟೈಲಿಂಗ್‌ ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

2/5

ಟ್ರೆಡಿಷನಲ್‌ ಪಟೋಲಾ ಇಕ್ಕತ್‌ ಸೀರೆಯ ಆಯ್ಕೆ

ಆದಷ್ಟೂ ಟ್ರೆಡಿಷನಲ್‌ ಲುಕ್‌ ನೀಡುವ ಪಟೋಲಾ ಇಕ್ಕತ್‌ ಸೀರೆಯನ್ನೇ ಆಯ್ಕೆ ಮಾಡಿ. ಥೇಟ್‌ ಮಾಧುರಿ ದೀಕ್ಷಿತ್‌ ಉಟ್ಟಿರುವಂತಹ ಸೀರೆಯ ವಿನ್ಯಾಸದ್ದನ್ನೇ ಸೆಲೆಕ್ಟ್ ಮಾಡಿ, ಉಡಿ. ಆಗಷ್ಟೇ ನೀವೂ ಅವರಂತೆಯೇ ಕಾಣಲು ಸಾಧ್ಯ.

3/5

ಜರಿ ಬಾರ್ಡರ್‌ ಇರುವಂತಹ ಪಟೋಲಾ ಸೀರೆ

ಎಲ್ಲದಕ್ಕಿಂತ ಹೆಚ್ಚಾಗಿ ಗೋಲ್ಡನ್‌ ಜರಿ ಬಾರ್ಡರ್‌ ಇರುವಂತಹ ಸೀರೆಯನ್ನು ಆರಿಸಿಕೊಳ್ಳಿ. ಡ್ರೇಪ್‌ ಮಾಡಿ. ಇದು ಸೀರೆಯನ್ನು ಹೈಲೈಟ್‌ ಮಾಡುತ್ತದೆ.

ರೆಡ್‌ ಕಾಂಬಿನೇಷನ್‌ನ ಮಲ್ಟಿ ಕಲರ್‌ ಸೀರೆ

ಮಾಧುರಿ ದೀಕ್ಷೀತ್‌ ಲುಕ್‌ಗಾಗಿ ಮೊದಲು ರೆಡ್‌ ಕಾಂಬಿನೇಷನ್‌ ಇರುವಂತಹ ಮಲ್ಟಿ ಕಲರ್‌ ಸೀರೆ ಅಥವಾ ಗ್ರೀನ್‌ ಬ್ಲ್ಯಾಕ್‌, ಪೀಕಾಕ್‌ ಗ್ರೀನ್‌ ಹೀಗೆ ಕಾಂಬಿನೇಷನ್‌ ಕಲರ್‌ನ ಸೀರೆ ಆಯ್ಕೆ ಮಾಡಿ. ಸೆರಗನ್ನು ವನ್‌ ಪಿನ್‌ ಮಾಡಿ, ಉಡಿ.

4/5

ಚಾಂದ್‌ಬಾಲಿ ಇಯರಿಂಗ್‌

ಇನ್ನು, ಟ್ರೆಡಿಷನಲ್‌ ಲುಕ್‌ ನೀಡುವಂತಹ ಬಿಗ್‌ ಚಾಂದ್‌ಬಾಲಿ ಇಯರಿಂಗ್ಸ್ ಧರಿಸಿ. ಜೊತೆಗೆ ಫಿಂಗರ್‌ರಿಂಗ್ಸ್ , ಸಿಂಪಲ್‌ ನೆಕ್ಲೇಸ್‌ ಕೂಡ ಧರಿಸಿ.

5/5

ಮೇಕೋವರ್‌ ಆಕರ್ಷಕವಾಗಿರಲಿ

ನಿಮ್ಮ ಕೂದಲನ್ನು ಹಿಂಭಾಗಕ್ಕೆ ಬರುವಂತಹ ಯಾವುದಾದರೂ ಒಂದು ಹೇರ್‌ ಸ್ಟೈಲ್‌ ಮಾಡಿ. ದುಂಡು ಮಲ್ಲಿಗೆ ಹೂವನ್ನು ಮುಡಿಯಿರಿ. ರೆಡ್‌ ಲಿಪ್‌ಸ್ಟಿಕ್‌ ಹಚ್ಚಿ. ಬಿಂದಿಯಿಡಿ. ಕೊನೆಯಲ್ಲಿ ಮಾಧುರಿಯಂತೆ ಮುಗುಳ್ನಗೆ ಸೂಸಲು ಪ್ರಯತ್ನಿಸಿ.

ಶೀಲಾ ಸಿ ಶೆಟ್ಟಿ

View all posts by this author