Star Fashion 2026: ಎಮರಾಲ್ಡ್ ಸಿಕ್ವಿನ್ಸ್ ಗೌನ್‌ನಲ್ಲಿ ಗ್ಲಾಮರಸ್ ಆಗಿ ಕಂಡ ಇಶಾ ಕೊಪ್ಪಿಕರ್
Star Fashion: ಬಹುಭಾಷಾ ತಾರೆ ಇಶಾ ಕೊಪ್ಪಿಕರ್ ಇವೆಂಟ್‌ವೊಂದರಲ್ಲಿ ಎಮರಾಲ್ಡ್ ಶೇಡ್‌ನ ಫ್ರಂಟ್ ಜಾಲರಿಯಂತಿರುವ ಸಿಕ್ವಿನ್ಸ್ ಗೌನ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ಬಗ್ಗೆ ಫ್ಯಾಷನಿಸ್ಟಾಗಳು ಹೇಳುವುದೇನು? ಈ ಕುರಿತ ವಿವರ ಇಲ್ಲಿದೆ.
ಎಮರಾಲ್ಡ್ ಸಿಕ್ವಿನ್ಸ್ ಗೌನ್‌ನಲ್ಲಿ ನಟಿ ಇಶಾ ಕೊಪ್ಪಿಕರ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಜಾಲರಿಯಂತಹ ಗೌನ್ ಕಟೌಟ್ ಡಿಸೈನ್
ಹೌದು, ಗೌನ್‌ನ ಫ್ರಂಟ್ ಡಿಸೈನ್ ಕಟೌಟ್ ಜಾಲರಿಯಂತಿದ್ದು, ಇದು ಅವರ ಬಾಡಿ ಮಾಸ್ ಇಂಡೆಕ್ಸ್ ಹೈಲೈಟ್ ಮಾಡಿದೆ. ಅಶ್ಫಕ್ ಅಹಮದ್ ಡಿಸೈನ್ ಸ್ಟುಡಿಯೋ ಡಿಸೈನರ್‌ವೇರ್ ಇದಾಗಿದೆ. ಮಧ್ಯ ವಯಸ್ಸಿನ ಇಶಾರ ಈ ಗೌನ್ ಲುಕ್ ಫ್ಯಾಷನ್ ಪ್ರಿಯರನ್ನು ನಿಬ್ಬೆರಗಾಗಿಸಿದೆ.
ಇದ್ಯಾವ ಬಗೆಯ ಗೌನ್?
ಅಂದಹಾಗೆ, ಈ ಗೌನ್ ವಿಶೇಷತೆಯೆಂದರೆ ಇದು ನೋಡಲು ಬಾಡಿಕಾನ್ ಗೌನ್‌ನಂತಿದೆ. ಅಲ್ಲದೇ, ಸಿಕ್ವಿನ್ಸ್ ಡಿಸೈನ್ ಇದ್ದಾಗ್ಯೂ ಕೂಡ ಬ್ಯಾಕ್‌ಲೆಸ್ ಕಟೌಟ್ ವಿನ್ಯಾಸ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಫ್ರಂಟ್ ನೆಕ್‌ಲೈನ್ ಬದಲು ಕ್ಲಿವೇಜ್ ಇರುವ ಜಾಗದಲ್ಲಿ ಕಟೌಟ್ ಜಾಲರಿ ವಿನ್ಯಾಸ ಹೊಂದಿದೆ. ಇದು ನೆಟ್ ಹಾಗೂ ಬೀಡ್ಸ್‌ನಿಂದ ಆವೃತಗೊಂಡಿದೆ. ಅಲ್ಲದೇ, ಬಾಡಿ ಶೇಡ್ ಎದ್ದು ಕಾಣಿಸುವಂತೆ ಬಿಂಬಿಸಿದೆ. ಇನ್ನು, ಗೌನ್‌ನ ಕೆಳಭಾಗ ಡ್ರೇಪ್ಡ್ ಸ್ಕರ್ಟ್‌ನಂತ ಡಿಸೈನ್ ಹೊಂದಿದ್ದು, ಸ್ಲಿಟ್ ವಿನ್ಯಾಸ ಒಳಗೊಂಡಿದೆ. ಒಟ್ಟಾರೆ, ಈ ಗೌನ್ ಮೂರ್ನಾಲ್ಕು ಬಗೆಯ ಡಿಸೈನ್ ಹೊಂದಿದ್ದು, ಇಶಾ ಅವರನ್ನು ಈ ಜನರೇಷನ್ ನಟಿಯಂತೆ ಬಿಂಬಿಸಲು ಯತ್ನಿಸಿದೆ ಎಂದಿದ್ದಾರೆ ಫ್ಯಾಷನಿಸ್ಟಾಗಳು.
ಮರಳಿ ಲೈಮ್‌ಲೈಟ್‌ಗೆ ಇಶಾ ಕೊಪ್ಪಿಕರ್
ಇನ್ನು, ಇಶಾ ಕೊಪ್ಪಿಕರ್ ಕೇವಲ ಬಾಲಿವುಡ್ ಮಾತ್ರವಲ್ಲ, ಕನ್ನಡದ ಡಾ. ವಿಷ್ಣುವರ್ಧನ್ ಅವರೊಂದಿಗೆ ಸೂರ್ಯವಂಶ ಹಿಟ್ ಸಿನಿಮಾದಲ್ಲೂ ನಟಿಸಿ ಜನಪ್ರಿಯರಾಗಿದ್ದರು. ನಂತರ ಕೆಲವು ವರ್ಷಗಳ ಕಾಲ ತೆರೆಯ ಹಿಂದೆ ಸರಿದಿದ್ದರು. ಇದೀಗ ಮತ್ತೊಮ್ಮೆ ಇವೆಂಟ್‌ಗಳಲ್ಲಿ ನಾನಾ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯ
ಅಲ್ಲದೇ, ಇಶಾ ಸೋಷಿಯಲ್ ಮೀಡಿಯಾದಲ್ಲೂ ಮೊದಲಿಗಿಂತ ಹೆಚ್ಚಾಗಿ ಸಕ್ರಿಯರಾಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.