ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ನೀಡಿದ ಫಾರ್ಶಿ ಸಲ್ವಾರ್‌ ಸೂಟ್‌

ಬಾಲಿವುಡ್‌ ಸಿನಿಮಾ ಇವೆಂಟ್‌ವೊಂದರಲ್ಲಿ ಕಾಜಲ್‌ ಅಗರ್ವಾಲ್‌, ಗ್ರ್ಯಾಂಡ್‌ ಲುಕ್‌ ನೀಡುವ ಫಾರ್ಶಿ ಸಲ್ವಾರ್‌ ಕೋ ಆರ್ಡ್‌ ಸೂಟ್‌ ಧರಿಸಿದ್ದು, ಈ ಸಲ್ವಾರ್‌ ಸೂಟ್‌ ಈಗಾಗಲೇ ಸಲ್ವಾರ್‌ ಪ್ರಿಯರನ್ನು ಆಕರ್ಷಿಸಿದ್ದು, ಬೇಡಿಕೆ ಹೆಚ್ಚಿಸಿಕೊಂಡಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ವಿಶೇಷತೆ ಏನು? ಇಲ್ಲಿದೆ ಡಿಟೇಲ್ಸ್‌.

ಚಿತ್ರಗಳು: ಕಾಜಲ್‌ ಅಗರ್ವಾಲ್‌, ನಟಿ
1/5

ನಟಿ ಕಾಜಲ್‌ ಅಗರ್ವಾಲ್‌ಗೆ ರಾಯಲ್‌ ಲುಕ್‌ ನೀಡಿರುವ ಐವರಿ ಕಲರ್‌ನ ಫಾರ್ಶಿ ಸಲ್ವಾರ್‌ ಸೂಟ್‌ ಈ ಸೀಸನ್‌ನ ಎಥ್ನಿಕ್‌ ಡಿಸೈನರ್‌ವೇರ್‌ಗಳ ಟಾಪ್‌ ಲಿಸ್ಟ್‌ಗೆ ಸೇರಿಕೊಂಡಿದೆ.

ಎಂಬ್ರಾಯ್ಡರಿ ಡಿಸೈನ್‌ನ ಫಾರ್ಶಿ ಸಲ್ವಾರ್‌ ಸೂಟ್‌

ಬಾಲಿವುಡ್‌ ಸಿನಿಮಾ ಇವೆಂಟ್‌ವೊಂದರಲ್ಲಿ ಕಾಜಲ್‌ ಅಗರ್ವಾಲ್‌, ಗ್ರ್ಯಾಂಡ್‌ ಲುಕ್‌ ನೀಡುವ ಫಾರ್ಶಿ ಸಲ್ವಾರ್‌ ಕೋ ಆರ್ಡ್‌ ಸೂಟ್‌ ಧರಿಸಿದ್ದು, ಈ ಸಲ್ವಾರ್‌ ಸೂಟ್‌ ಈಗಾಗಲೇ ಸಲ್ವಾರ್‌ ಪ್ರಿಯರನ್ನು ಸೆಳೆದಿದೆ. ಬೇಡಿಕೆ ಹೆಚ್ಚಿಸಿಕೊಂಡಿದೆ.

2/5

ಐವರಿ ಶೇಡ್‌ನ ಕುರ್ತಾ ವಿಶೇಷತೆ

ಕಾಜಲ್‌ ಅಗರ್ವಾಲ್‌ ಧರಿಸಿದ್ದ ಸಿಲ್ಕ್‌ ಕುರ್ತಾ ಲೂಸ್‌ ಫಿಟ್ಟಿಂಗ್‌ನದ್ದಾಗಿದ್ದು, ಸ್ಟ್ರೇಟ್‌ ಕಟ್‌ ಒಳಗೊಂಡಿದೆ. ಐವರಿ ಕಲರ್‌ನ ಫ್ಯಾಬ್ರಿಕ್‌ ಮೇಲಿನ ಎಂಬ್ರಾಯ್ಡರಿ ಡಿಸೈನ್‌ ಹಾಗೂ ಟ್ಯೂನಿಕ್‌ ಡಿಸೈನ್‌ನ ಕುರ್ತಾ ಎಥ್ನಿಕ್‌ ಲುಕ್‌ಗೆ ಸಾಥ್‌ ನೀಡಿತ್ತು. ಈ ಕುರ್ತಾ ಮೇಲಿನ ಹಸಿರು ಮತ್ತು ಕೆಂಪು ಥ್ರೆಡ್‌ ವರ್ಕ್‌ ಹಾಗೂ ವಿ ನೆಕ್‌ಲೈನ್‌ ಸುತ್ತಲೂ ಇರುವ ಎಂಬ್ರಾಯ್ಡರಿ ವಿನ್ಯಾಸ ಡ್ರೆಸ್ಸನ್ನು ಅತ್ಯಾಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

3/5

ಫಾರ್ಶಿ ಸಲ್ವಾರ್‌ ಎಂದರೇನು?

ಸಿಂಪಲ್ಲಾಗಿ ಹೇಳುವುದಾದಲ್ಲಿ, ನೋಡಲು ಸ್ಟ್ರೈಟ್‌ ಕಟ್‌ನಂತಿದ್ದರೂ ಅಗಲವಾದ ವಿನ್ಯಾಸ ಹೊಂದಿರುವ ಆಂಕೆಲ್‌ ಲೆಂಥ್‌ವರೆಗೂ ಇರುವಂತಹ ಪ್ಯಾಂಟ್‌ಗಳಿವು. ಫ್ಲೋ ಆಗುವಂತಹ ಫ್ಯಾಬ್ರಿಕ್‌ನಲ್ಲಿ ಸಿದ್ಧಗೊಂಡಿರುತ್ತವೆ.

ಇವು ಮೊಗಲರ ಕಾಲದಿಂದಲೂ ಪ್ರಚಲಿತದಲ್ಲಿವೆ. ಕಾಲ ಬದಲಾದಂತೆ ಕೊಂಚ ರೂಪ ಬದಲಿಸಿಕೊಂಡಿವೆ ಅಷ್ಟೇ! ಎಥ್ನಿಕ್‌ ಡಿಸೈನ್‌ಗಳಿಂದ ವಿನ್ಯಾಸಗೊಂಡಿರುತ್ತವೆ ಎಂದು ವಿವರಿಸುತ್ತಾರೆ ಫ್ಯಾಷನಿಸ್ಟಾ ರುಕ್ಸಾನ. ಅವರ ಪ್ರಕಾರ, ಕಾಜಲ್‌ ಧರಿಸಿರುವ ಈ ಕುರ್ತಾಗೆ ಫಾರ್ಶಿ ಸಲ್ವಾರ್‌ ಮ್ಯಾಚ್‌ ಮಾಡಲಾಗಿದ್ದು, ಬಾರ್ಡರ್‌ನಲ್ಲಿ ಚಿಕ್ಕ ಚಿಕ್ಕ ಜೆಮೆಟ್ರಿಕ್‌ ಮೊಟಿಫ್‌ ಹೊಂದಿವೆ. ಸಲ್ವಾರ್‌ನ ಚೆಂದ ಹೆಚ್ಚಿಸಿವೆ ಎನ್ನುತ್ತಾರೆ.

4/5

ಫಾರ್ಶಿ ಸಲ್ವಾರ್‌ ಸೂಟ್‌ಗೆ ದುಪಟ್ಟಾ ಸಾಥ್‌

ಈ ಫಾರ್ಶಿ ಸಲ್ವಾರ್‌ಗೆ ಸಿಂಪಲ್‌ ಮ್ಯಾಚಿಂಗ್‌ ದುಪಟ್ಟಾ ಕುತ್ತಿಗೆಗೆ ಧರಿಸಿರುವುದು ಟ್ರೆಡಿಷನಲ್‌ ಲುಕ್‌ ಪಡೆಯಲು ಸಹಕಾರಿಯಾಗಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್‌.

5/5

ಫಾರ್ಶಿ ಸಲ್ವಾರ್‌ ಸೂಟ್‌ ಆಯ್ಕೆ ಹೀಗಿರಲಿ

  • ಈ ಶೈಲಿಯ ಸಲ್ವಾರ್‌ ಸೂಟ್‌ಗಳು ಆದಷ್ಟೂ ದೊಗಲೆಯಾಗಿರುತ್ತವೆ. ಹಾಗಾಗಿ ಟ್ರಯಲ್‌ ಮಾಡಿ, ನೋಡಿ ಕೊಳ್ಳಿ.
  • ಹೆಚ್ಚು ದೊಗಲೆಯಾಗಿರುವುದನ್ನು ಖರೀದಿಸಬೇಡಿ.
  • ಟ್ರೆಡಿಷನಲ್‌ ಮೇಕೋವರ್‌ ಮಾಡಿ.
  • ಎಲಿಗೆಂಟ್‌ ಲುಕ್‌ ನೀಡಲು ಆದಷ್ಟೂ ಐವರಿ, ವೈಟ್‌ ಇಲ್ಲವೇ ಲೈಟ್‌ ಶೇಡ್‌ನ ಫಾರ್ಶಿ ಸಲ್ವಾರ್‌ ಸೂಟ್‌ ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author