ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಮನಸೂರೆಗೊಂಡ ಕೃತಿ ಶೆಟ್ಟಿ ಟೈ- ಡೈ ಸ್ಯಾಟೀನ್‌ ಸೀರೆ

Kriti Shetty: ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದ ಲೈಮ್‌ ಗ್ರೀನ್‌ ಟೈ- ಡೈ ಸ್ಯಾಟೀನ್‌ ಸೀರೆ ಎಲ್ಲರ ಮನಸೂರೆಗೊಂಡಿದೆ. ಇದ್ಯಾವ ಬಗೆಯ ಸೀರೆ? ಇವರಂತೆಯೇ ಕಾಣಿಸುವುದು ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಕೃತಿ ಶೆಟ್ಟಿ, ನಟಿ
1/5

ಕೃತಿ ಶೆಟ್ಟಿಯ ಟೈ –ಡೈ ಸ್ಯಾಟೀನ್‌ ಸೀರೆ ಎಲ್ಲರ ಮನಸೂರೆಗೊಂಡಿದೆ.

2/5

ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಕೃತಿ ಶೆಟ್ಟಿ ಉಟ್ಟಿದ್ದ ಸೀಸನ್‌ ಟ್ರೆಂಡ್‌ನಲ್ಲಿರುವ ಶೇಡ್‌ನ ಲೈಮ್‌ ಗ್ರೀನ್‌ ಟೈ- ಡೈ ಸ್ಯಾಟೀನ್‌ ಸೀರೆಯು ಸದ್ಯ ಫಾಲೋವರ್‌ಗಳನ್ನು ಮಾತ್ರವಲ್ಲ, ಸೀರೆ ಪ್ರಿಯರ ಮನಸೂರೆಗೊಂಡಿದೆ. ಮೋಹಿತ್‌ ರೈ ಅವರ ಸ್ಟೈಲಿಂಗ್‌ ಕೃತಿಯವರನ್ನು ಮತ್ತಷ್ಟು ಮನಮೋಹಕವಾಗಿ ಕಾಣಿಸುವಂತೆ ಮಾಡಿದೆ.

3/5

ಟೈ-ಡೈ ಸ್ಯಾಟೀನ್‌ ಸೀರೆಯ ವಿಶೇಷತೆ

ಅಂದಹಾಗೆ, ಕೃತಿ ಶೆಟ್ಟಿ ಉಟ್ಟಿರುವ ಈ ಸೀರೆಯ ಕಲರ್‌ ಈಗಾಗಲೇ ಈ ಸೀಸನ್‌ನ ವೈಬ್ರೆಂಟ್‌ ಶೇಡ್‌ಗಳ ಟಾಪ್‌ ಲಿಸ್ಟ್‌ನಲ್ಲಿದೆ. ಅಕಾಂಕ್ಷಾ ಗಜ್ರಿಯಾ ಡಿಸೈನ್‌ ಮಾಡಿರುವ ಈ ಸೀರೆ ಹ್ಯಾಂಡ್‌ ಡೈ ಆಗಿದೆ. ಅಕ್ವಾ ಪ್ಯೂರ್‌ ಸ್ಯಾಟೀನ್‌ ಸಿಲ್ಕ್‌ ಸೀರೆ ಇದಾಗಿದ್ದು, ಲೈಮ್‌ ಗ್ರೀನ್‌ ಕಲರ್‌ನ ಸೀರೆಯ ಒಡಲೆಲ್ಲಾ ಹಳದಿ ಬಣ್ಣದಿಂದ ಡೈ ಮಾಡಲಾಗಿದೆ.

4/5

ಡಿಸೈನರ್‌ ಮಿರರ್‌ ಬ್ಲೌಸ್‌

ಈ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿರುವುದು ಈ ಸೀರೆಯ ಡಿಸೈನರ್‌ ಮಿರರ್‌ ಬ್ಲೌಸ್‌. ಕಸ್ಟಮ್‌ ಡಿಸೈನ್‌ನ ಈ ಬ್ಲೌಸ್‌ ಎಂಬ್ರಾಯ್ಡರಿಯಿಂದಲೇ ಮಿರರ್‌ ಸಿಂಗರಿಸಲಾಗಿದೆ ಎನ್ನುತ್ತಾರೆ ಡಿಸೈನರ್ಸ್.

5/5

ಟೈ-ಡೈ ಸ್ಯಾಟೀನ್‌ ಸೀರೆಯಲ್ಲಿ ಥೇಟ್‌ ಕೃತಿಯಂತೆ ಕಾಣಿಸುವುದು ಹೇಗೆ?

  • ಸ್ಯಾಟೀನ್‌ನಲ್ಲಿ ನಾನಾ ಬಗೆಯ ಸೀರೆ ದೊರೆಯುತ್ತದೆ. ವಿಶೇಷವಾಗಿ ಟೈ-ಡೈ ಮಾಡಿರುವುದನ್ನು ಆಯ್ಕೆ ಮಾಡಿ, ಉಟ್ಟಲ್ಲಿ ಥೇಟ್‌ ಕೃತಿಯಂತೆ ಕಾಣಿಸಬಹುದು.
  • ಸೀಸನ್‌ ಟ್ರೆಂಡ್‌ನಲ್ಲಿ ಈ ಕಲರ್‌ ಇರುವುದರಿಂದ ಆದಷ್ಟೂ ಇದೇ ಶೇಡ್‌ ಆಯ್ಕೆ ಮಾಡಿ, ಉಡಿ.
  • ಸಿಂಪಲ್‌ ಮೇಕಪ್‌ ಮಾಡಿದರೇ ಸಾಕು!
  • ಸ್ಲಿವ್‌ಲೆಸ್‌ ಡಿಸೈನರ್‌ ಬ್ಲೌಸ್‌ ಆಗಿದ್ದಲ್ಲಿ ಮಾತ್ರ ಗ್ಲಾಮರಸ್‌ ಆಗಿ ಕಾಣಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author