Star Fashion 2026: ʼದಿ ರಾಜಾಸಾಬ್ʼ ನಟಿ ನಿಧಿ ಅಗರ್‌ವಾಲ್ ಶೀರ್ ಸೀರೆ ಪ್ರೇಮ
ಇತ್ತೀಚೆಗೆ ರಿಲೀಸ್ ಆದ ತೆಲುಗಿನ ʼದಿ ರಾಜಾಸಾಬ್ʼ ಚಿತ್ರದಲ್ಲಿ ಪ್ರಭಾಸ್ ಜತೆಗೆ ಮಿಂಚಿದ ನಟಿ ನಿಧಿ ಅಗರ್‌ವಾಲ್ ಗ್ಲಾಮರಸ್ ಲುಕ್ ನೀಡುವ ಶೀರ್ ಸೀರೆಯ ಮೋಹಪಾಶಕ್ಕೆ ಒಳಗಾಗಿದ್ದಾರೆ. ಏನಿದು ಶೀರ್ ಸೀರೆ? ನೀವು ಅವರಂತೆ ಕಾಣಿಸಲು ಪಾಲಿಸಬೇಕಾದ್ದೇನು? ಈ ಕುರಿತಂತೆ ಫ್ಯಾಷನಿಸ್ಟಾಗಳು ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ.
ಸೀರೆ ಪ್ರೇಮ
ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನಿಧಿ ಅಗರ್‌ವಾಲ್‌ಗೆ ಶೀರ್ ಸೀರೆಯ ಮೇಲಿನ ಮೋಹ ಹೆಚ್ಚಾಗಿದೆ.
ನಿಧಿ ಉಟ್ಟ ಎರಡು ಶೀರ್ ಸೀರೆ
ಹೌದು, ಇದಕ್ಕೆ ಸಾಕ್ಷಿ ಎಂಬಂತೆ, ನಿಧಿ ಈಗಾಗಲೇ ಗ್ಲ್ಯಾಮರಸ್ ಲುಕ್ ನೀಡುವ ಈ ಶೀರೆ ಸೀರೆಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಒಂದಲ್ಲ ಎರಡೆರಡು ಬಾರಿ ಡಿಫರೆಂಟ್ ಡಿಸೈನರ್ ಸೀರೆಗಳಲ್ಲಿ ಕಾಣಿಸಿಕೊಂಡು ಸೀರೆ ಪ್ರಿಯರನ್ನು ಸೆಳೆದಿದ್ದಾರೆ.
ಏನಿದು ಶೀರ್ ಸೀರೆ?
ಸಿಂಪಲ್ಲಾಗಿ ಹೇಳುವುದಾದಲ್ಲಿ ಪಾರದರ್ಶಕ ಸೀರೆಯನ್ನು ಶೀರ್ ಸೀರೆ ಎನ್ನಲಾಗುತ್ತದೆ. ಇದನ್ನು ಟ್ರಾನ್ಸಪರೆಂಟ್ ಡಿಸೈನರ್ ಸೀರೆ ಕೂಡ ಎನ್ನಬಹುದು. ಮೈಕ್ರೋ ನೆಟ್ಟೆಡ್ ಫ್ಯಾಬ್ರಿಕ್‌ನಲ್ಲಿ ಇದನ್ನು ಸಿದ್ಧಪಡಿಸಲಾಗಿರುತ್ತದೆ. ಸೂಕ್ಷ್ಮ ಫ್ಯಾಬ್ರಿಕ್‌ನಲ್ಲೂ ಇಂತಹ ಸೀರೆಗಳನ್ನು ರೆಡಿ ಮಾಡಲಾಗಿರುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಶೀರ್ ಸೀರೆಯಲ್ಲಿ ನಿಧಿ ಅಗರ್‌ವಾಲ್ ಲುಕ್
ನಿಧಿ ಅಗರ್‌ವಾಲ್ ಶೀರ್ ಸೀರೆಯಲ್ಲಿ ಗೊಂಬೆಯಂತೆ ಕಾಣಿಸಿಕೊಂಡಿದ್ದರು. ಸಖತ್ ಆಗಿ ಫೋಟೋಶೂಟ್ ಕೂಡ ಮಾಡಿಸಿದ್ದರು. ಅವರು ಉಟ್ಟ ಎರಡೂ ಸೀರೆಯೂ ಡಿಫರೆಂಟ್ ಆಗಿತ್ತು. ಡಿಸೈನರ್ ಸೀರೆಯಾಗಿತ್ತು. ಸೂಕ್ಷ್ಮ ಫ್ಯಾಬ್ರಿಕ್‌ನ ಮೇಲೆ ಡಿಸೈನ್ ಮಾಡಲಾಗಿತ್ತು. ಹಾಗಾಗಿ ಇದು ಸೀರೆ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು ಎನ್ನುತ್ತಾರೆ ಸ್ಟೈಲಿಸ್ಟ್ ರಾಕಿ.
ಶೀರ್ ಸೀರೆಯಲ್ಲಿ ನಿಧಿಯಂತೆ ಕಾಣಿಸಲು ಇಲ್ಲಿವೆ 5 ಟಿಪ್ಸ್
- ಪಾರದರ್ಶಕ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
- ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಕಲರ್ ಚೂಸ್ ಮಾಡಬೇಕು.
- ಡಿಸೈನರ್ ಸೀರೆಗಳು ಸೌಂದರ್ಯ ಹೆಚ್ಚಿಸಬಲ್ಲವು.
- ಬ್ಲೌಸ್ ಕೂಡ ಗ್ಲ್ಯಾಮರಸ್ ಆಗಿ ಮ್ಯಾಚ್ ಆಗಬೇಕು.
- ಮೇಕೋವರ್ ಕೂಡ ಕ್ಲಾಸಿಯಾಗಿರಬೇಕು.