ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಬೆರಗು ಮೂಡಿಸಿದ ಮಿಲನ ಚಿತ್ರ ನಟಿ ಪಾರ್ವತಿಯ ಫ್ಯಾಷನ್‌

ವಿಭಿನ್ನ ಡಿಸೈನ್‌ನ ಮೆಟಾಲಿಕ್‌ ಸಿಲ್ವರ್‌ ಬ್ಲೌಸ್‌ ಹಾಗೂ ಡ್ರೇಪ್‌ ಸ್ಕರ್ಟ್‌ನಲ್ಲಿ ನಟಿ ಪಾರ್ವತಿ ತಿರುವೊತ್ತು (ಪಾರ್ವತಿ ಮೆನನ್) ಕಾಣಿಸಿಕೊಂಡಿದ್ದು, ಸದ್ಯ ಅವರ ಈ ಲುಕ್‌ ಫ್ಯಾಷನ್‌ ಪ್ರಿಯರಲ್ಲಿ ಬೆರಗು ಮೂಡಿಸಿದೆ. ಈ ಕುರಿತಂತೆ ಫ್ಯಾಷನ್‌ ವಿಶ್ಲೇಷಕರು ಹೇಳುವುದೇನು? ಇಲ್ಲಿದೆ ರಿವ್ಯೂ.

ಚಿತ್ರಗಳು: ಪಾರ್ವತಿ ತಿರುವೊತ್ತು, ನಟಿ., ಫೋಟೋಗ್ರಫಿ: ಯಶ್‌ ಬಿವಿ
1/5

ಬಹುಭಾಷಾ ತಾರೆ ಹಾಗೂ ಮಲಯಾಳಂ ನಟಿ ಪಾರ್ವತಿ ತಿರುವೊತ್ತು ಮೆಟಾಲಿಕ್‌ ಸಿಲ್ವರ್‌ ಬ್ಲೌಸ್‌ ಕಾಂಬಿನೇಷನ್‌ನ ಡ್ರೇಪ್‌ ಸ್ಕರ್ಟ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು, ಅಭಿಮಾನಿಗಳಲ್ಲಿ ಬೆರಗು ಮೂಡಿಸಿದ್ದಾರೆ.

2/5

ಪುನೀತ್‌ರೊಂದಿಗೆ ನಟಿಸಿದ್ದ ಪಾರ್ವತಿ

ಈ ಹಿಂದೆ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಕನ್ನಡ ಸಿನಿಮಾ ಮಿಲನ, ಪೃಥ್ವಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ, ಪಾರ್ವತಿ ತಿರವೊತ್ತು, ಸ್ಯಾಂಡಲ್‌ವುಡ್‌ನಲ್ಲಿ ಪಾರ್ವತಿ ಮೆನನ್‌ ಎಂದೇ ಗುರುತಿಸಿಕೊಂಡಿದ್ದರು. ಮೂಲತಃ ಮಲಯಾಳಂ ನಟಿಯಾಗಿರುವ ಇವರು ಇದೀಗ ಮತ್ತೊಮ್ಮೆ ಸಕ್ರಿಯರಾಗಿದ್ದಾರೆ.

3/5

ಇದ್ಯಾವ ಬಗೆಯ ಲುಕ್‌?

ಅಂದಹಾಗೆ, ಗಾರೋ ಬ್ರ್ಯಾಂಡ್‌ನದ್ದು ಎಂದು ಹೇಳಲಾಗುವ ಕಂಪ್ಲೀಟ್‌ ವೈಲ್ಡ್ ಲುಕ್‌ಗೆ ಸಾಥ್‌ ನೀಡುವಂತಹ ಮೆಟಾಲಿಕ್‌ ಸಿಲ್ವರ್‌ ಬ್ಲೌಸ್‌ ಜತೆಗೆ ಬ್ಲ್ಯಾಕ್‌ ಕಲರ್‌ನ ಡ್ರೇಪ್‌ ಸ್ಕರ್ಟ್ ಮ್ಯಾಚ್‌ ಮಾಡಿರುವ ಪಾರ್ವತಿಯ ಲುಕ್‌ ಈ ಬಾರಿ ವಿಭಿನ್ನವಾಗಿದೆ. ಅಭಿನವ್‌ ಅವರ ಸ್ಟೈಲಿಂಗ್‌ ಪಾರ್ವತಿಗೆ ಕ್ಯಾಟಲಾಗ್‌ನ ವೈಲ್ಡ್ ಲುಕ್‌ನಂತೆ ಬಿಂಬಿಸಿದೆ ಎಂಬುದು ಫ್ಯಾಷನ್‌ ವಿಮರ್ಶಕರ ಅಭಿಪ್ರಾಯ.

4/5

ವಿಭಿನ್ನ ಲುಕ್‌ನಲ್ಲಿ ಪಾರ್ವತಿ

ಪಾರ್ವತಿ ಧರಿಸಿರುವ ಅಪರೂಪದ ಡಿಸೈನ್‌ ಹೊಂದಿರುವ ಮೆಟಾಲಿಕ್‌ ಸಿಲ್ವರ್‌ ಬ್ಲೌಸ್‌ ತಕ್ಷಣಕ್ಕೆ ನೋಡಲು ಟ್ರೈಬಲ್‌ ಲುಕ್‌ನಂತೆ ಕಂಡರೂ ಆದಲ್ಲ! ಇದಕ್ಕೆ ಮ್ಯಾಚ್‌ ಮಾಡಿರುವ ಬ್ಲ್ಯಾಕ್‌ ಡ್ರೇಪ್‌ ಸ್ಕರ್ಟ್ ನೋಡಲು ಥೇಟ್‌ ಸಾದಾ ಪಂಚೆ ಸುತ್ತಿಕೊಂಡಂತೆ ಕಾಣಿಸುತ್ತಿದೆ ಎಂದಿರುವ ಫ್ಯಾಷನ್‌ ವಿಶ್ಲೇಷಕರು, ಪಾರ್ವತಿಯ ಹೊಸ ಲುಕ್‌ ಅವರಿಗೆ ಡಿಫರೆಂಟ್‌ ಇಮೇಜ್‌ ನೀಡಿದೆ ಎಂದಿದ್ದಾರೆ. ಇನ್ನು ಈ ಔಟ್‌ಫಿಟ್‌ಗೆ ಅವರು ಧರಿಸಿರುವ ಆಕ್ಸಿಡೈಸ್ಡ್ ಜ್ಯುವೆಲರಿಗಳಂತೂ ವಿಭಿನ್ನ ಲುಕ್‌ಗೆ ಸಾಥ್‌ ನೀಡುವಲ್ಲಿ ಯಶಸ್ವಿಯಾಗಿವೆ ಎಂದಿದ್ದಾರೆ.

5/5

ವಿಭಿನ್ನ ಡಿಸೈನ್‌ನ ಮೆಟಾಲಿಕ್‌ ಸಿಲ್ವರ್‌ ಬ್ಲೌಸ್‌ ಹಾಗೂ ಡ್ರೇಪ್‌ ಸ್ಕರ್ಟ್‌ನಲ್ಲಿ ನಟಿ ಪಾರ್ವತಿ ಮೆನನ್‌ ಕಾಣಿಸಿಕೊಂಡಿದ್ದು, ಸದ್ಯ ಅವರ ಈ ಲುಕ್‌ ಫ್ಯಾಷನ್‌ ಪ್ರಿಯರಲ್ಲಿ ಬೆರಗು ಮೂಡಿಸಿದೆ.

ಶೀಲಾ ಸಿ ಶೆಟ್ಟಿ

View all posts by this author