ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಡೆನಿಮ್‌ ಕೋ ಆರ್ಡ್ ಸ್ಕರ್ಟ್‌ನಲ್ಲಿ ರಾಧಿಕಾ ನಾರಾಯಣ್‌ ಸ್ಟೈಲಿಶ್‌ ಲುಕ್‌

Actress Radhika Narayan:‌ ಡೆನಿಮ್‌ ಕೋ ಆರ್ಡ್ ಸ್ಕರ್ಟ್‌ನಲ್ಲಿ ಸ್ಯಾಂಡಲ್‌ವುಡ್‌ ತಾರೆ ರಾಧಿಕಾ ನಾರಾಯಣ್‌ ಸ್ಟೈಲಿಶ್‌ ಆಗಿ ಜೆನ್‌ ಜಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಔಟ್‌ಫಿಟ್‌? ಅವರ ಲುಕ್‌ ಹೇಗಿದೆ? ಎಂಬುದನ್ನು ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

ಚಿತ್ರಗಳು: ರಾಧಿಕಾ ನಾರಾಯಣ್‌, ನಟಿ
1/5

ನಟಿ ರಾಧಿಕಾ ನಾರಾಯಣ್‌ ಡೆನಿಮ್‌ ಕೋ ಆರ್ಡ್ ಸ್ಕರ್ಟ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.

2/5

ರಾಧಿಕಾ ಜೆನ್‌ ಜಿ ಲುಕ್‌

ಹೌದು, ಸದಾ ಸ್ಟೈಲಿಶ್‌ ಆಗಿಯೇ ಕಾಣಿಸಿಕೊಳ್ಳುವ ಸ್ಯಾಂಡಲ್‌ವುಡ್‌ ತಾರೆ ರಾಧಿಕಾ ನಾರಾಯಣ್‌ ಫ್ಯಾಷನ್‌ ಫೋಟೋಶೂಟ್‌ವೊಂದರಲ್ಲಿ ಸಖತ್‌ ಸ್ಟೈಲಿಶ್‌ ಆಗಿ ಜೆನ್‌ ಜಿ ಹುಡುಗಿಯಂತೆ ಯಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

3/5

ರಾಧಿಕಾರ ಇಂಡಿಗೋ ಡೆನಿಮ್‌ ಕೋ ಆರ್ಡ್ ಸ್ಕರ್ಟ್ ಸೆಟ್‌

ಸದಾ ಒಂದಲ್ಲ ಒಂದು ಸ್ಟೈಲಿಶ್‌ ಆಗಿರುವ ಫೋಟೋಗಳನ್ನು ಅಪ್‌ಡೇಟ್‌ ಮಾಡುವ ನಟಿ ರಾಧಿಕಾ ನಾರಾಯಣ್‌, ಈ ಬಾರಿ ಲವ್‌ ಫ್ರಮ್‌ ಎಡಿಟ್‌ ಬ್ರಾಂಡ್‌ನ ಇಂಡಿಗೋ ಶೇಡ್‌ನ ಡೆನಿಮ್‌ ಸ್ಲಿವ್‌ಲೆಸ್‌ ಟಾಪ್‌ ಹಾಗೂ ಅದರೊಂದಿಗೆ ಮ್ಯಾಚ್‌ ಆಗುವಂತಹ ಸ್ಲಿಟ್‌ ಸ್ಕರ್ಟ್ ಧರಿಸಿ ಪೋಸ್‌ ನೀಡಿದ್ದಾರೆ.

4/5

ಹೀಗಿದೆ ರಾಧಿಕಾ ಔಟ್‌ಫಿಟ್‌ ವಿವರ

ಸ್ಲಿವ್‌ಲೆಸ್‌ ವೇಸ್‌ಕೋಟ್‌ನಂತಹ ಅಸ್ಸೆಮ್ಮಿಟ್ರಿಕಲ್‌ ಫ್ರಂಟ್‌ ಓವರ್‌ ಲ್ಯಾಪಿಂಗ್‌ ಇರುವಂತಹ ಈ ಟಾಪ್‌ ಮೇಲೆಲ್ಲಾ ಎಂಬ್ರಾಯ್ಡರಿ ಚಿತ್ತಾರವಿದೆ. ಇನ್ನು ಇದಕ್ಕೆ ಮ್ಯಾಚಿಂಗ್‌ನಂತಿರುವ ಮ್ಯಾಕ್ಸಿ ಲೆಂತ್‌ನ ಸ್ಕರ್ಟ್‌ಗೆ ಸೈಡ್‌ ಸ್ಲಿಟ್‌ ಇದ್ದು, ಎಂಬ್ರಾಯ್ಡರಿ ಸ್ಕರ್ಟ್ ಮೇಲೂ ಹರಡಿದೆ ಎನ್ನುವ ಫ್ಯಾಷನ್‌ ವಿಮರ್ಶಕರು, ರಾಧಿಕಾ ಈ ಉಡುಗೆಯಲ್ಲಿ ಗ್ಲಾಮರಸ್‌ ಆಗಿ ಕಾಣಿಸದಿದ್ದರೂ ಸಖತ್‌ ಎಲಿಗೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ನೋಡಲು ಥೇಟ್ ಜೆನ್‌ ಜಿ ಹುಡುಗಿಯಂತೆ ಪೋಸ್‌ ನೀಡಿದ್ದಾರೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

5/5

ಟ್ರೆಂಡಿಯಾಗಿರುವ ಡೆನಿಮ್‌ ಕೋ ಆರ್ಡ್ ಸೆಟ್ಸ್

ಅಂದಹಾಗೆ, ಈ ಸೀಸನ್‌ನಲ್ಲಿ ಸಾಕಷ್ಟು ಬಗೆಯ ಡೆನಿಮ್‌ ಕೋ ಆರ್ಡ್ ಸೆಟ್‌ಗಳು ಟ್ರೆಂಡಿಯಾಗಿವೆ. ಇವು ನಯಾ ವಿನ್ಯಾಸದಲ್ಲಿ ಬಂದಿವೆ ಎನ್ನುವ ಸ್ಟೈಲಿಸ್ಟ್‌ಗಳು, ರಾಧಿಕಾರ ಈ ಲುಕ್ಕನ್ನು ಎಂತಹವರು ಸುಲಭವಾಗಿ ಪಡೆದುಕೊಳ್ಳಬಹುದು ಎನ್ನುತ್ತಾರೆ.

ಶೀಲಾ ಸಿ ಶೆಟ್ಟಿ

View all posts by this author