ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಸೀರೆಯುಟ್ಟು ಹಿಮ ರಾಶಿಯ ನಡುವೆ ಸಂಭ್ರಮಿಸಿದ ಶುಭಾ ರಕ್ಷಾ

Shubha Raksha: ಶಿಮ್ಲಾ ಪ್ರವಾಸದಲ್ಲಿ ಮೈ ಕೊರೆಯುವ ಹಿಮದ ನಡುವೆ ಬಿಂದಾಸ್‌ ಆಗಿ ಬಾಲಿವುಡ್‌ ನಾಯಕಿಯಂತೆ ಸಂಭ್ರಮಿಸಿದ್ದಾರೆ ನಟಿ ಶುಭಾ ರಕ್ಷಾ. ಈ ಬಗ್ಗೆ ಖುದ್ದು ಶುಭಾ ರಕ್ಷಾ ಮಾತನಾಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಶುಭಾ ರಕ್ಷಾ, ನಟಿ
1/5

ಬಾಲಿವುಡ್‌ ಕ್ವೀನ್‌ನಂತೆ ಮಿಂಚಿದ ಸ್ಯಾಂಡಲ್‌ ನಟಿ

ಮೈ ಕೊರೆಯುವ ಚಳಿ-ಗಾಳಿ ಹಾಗೂ ಹಿಮದ ರಾಶಿಯ ನಡುವೆ ಸ್ಯಾಂಡಲ್‌ವುಡ್‌ ನಟಿ ಶುಭಾ ರಕ್ಷಾ ಬಾಲಿವುಡ್‌ ಕ್ವೀನ್‌ನಂತೆ ಸಂಭ್ರಮಿಸಿದ್ದಾರೆ. ಹಸಿರು ಸೇರೆ ಉಟ್ಟು ಭರ್ಜರಿ ಫೋಟೊ ಶೂಟ್‌ ಮಾಡಿಸಿಕೊಂಡಿದ್ದಾರೆ.

2/5

ಸ್ನೋ ಫಾಲ್‌ನಲ್ಲೂ ಸೀರೆ

ಹೌದು, ನಟಿ ಶುಭಾ ರಕ್ಷಾ ಸದ್ಯ ಶಿಮ್ಲಾ ಪ್ರವಾಸದಲ್ಲಿದ್ದು, ಈ ನಡುವೆಯೇ ಅದರಲ್ಲೂ ಮೈ ಕೊರೆಯುವ ಹಿಮದ ರಾಶಿಯಲ್ಲಿ, ಹಾಟ್‌ ಲುಕ್‌ ನೀಡುವ ನಿಯಾನ್‌ ಹಸಿರು ಸೀರೆಯುಟ್ಟು, ಎಂಜಾಯ್‌ ಮಾಡಿದ್ದಾರೆ. ಈ ಕುರಿತಂತೆ ʼವಿಶ್ವವಾಣಿ ನ್ಯೂಸ್‌ʼ ಮಾತನಾಡಿಸಿದಾಗ ಖುದ್ದು ಅವರೇ ತಮ್ಮ ಈ ಸೀರೆ ಕ್ರೇಝ್‌ ಬಗ್ಗೆ ಹೇಳಿದರು.

3/5

ಬಾಲಿವುಡ್‌ ಸ್ಟೈಲ್‌ ಸೀರೆ ಕ್ರೇಝ್‌

ʼʼಮೊದಲಿನಿಂದಲೂ ನನಗೆ ಬಾಲಿವುಡ್‌ ಸ್ಟೈಲ್‌ನಲ್ಲಿ ಸೀರೆಯನ್ನು ಹಾರಾಡಿಸುತ್ತಾ ಹಿಮದ ನಡುವೆ ಸಂಭ್ರಮಿಸುವ ಆಸೆಯಿತ್ತು. ಅದನ್ನು ಈಡೇರಿಸಿಕೊಂಡೆʼʼ ಎನ್ನುತ್ತಾರೆ ಶುಭಾ ರಕ್ಷಾ. ʼʼಆ ಹಿಮದ ರಾಶಿಯಲ್ಲಿ ಸೀರೆಯಲ್ಲಿ ಕ್ಷಣ ಕಾಲವೂ ಇರಲು ಸಾಧ್ಯವಾಗುವುದಿಲ್ಲ! ಆ ಮಟ್ಟಿಗೆ ಚಳಿ ನಮ್ಮನ್ನು ನಡುಗಿಸುತ್ತದೆ. ಕೊರೆಯುವ ಹಿಮದ ನಡುವೆ ಒಂದು ಕ್ಷಣ ನಿಲ್ಲಲು ಕಷ್ಟವಾಗುತ್ತದೆ. ಕೆಲವು ಕ್ಷಣಗಳಿಗೆ ಮಾತ್ರ ನಾನು ಈ ಗ್ಲಾಮರಸ್‌ ಸೀರೆಯಟ್ಟು ಸಂಭ್ರಮಿಸಿದೆʼʼ ಎನ್ನುತ್ತಾರೆ.

4/5

ಹಿಮದ ನಡುವೆಯೂ ಗ್ಲಾಮರಸ್‌ ಲುಕ್‌

ಸ್ಲಿವ್‌ಲೆಸ್‌ ಬ್ಲೌಸ್‌ ಹಾಗೂ ನಿಯಾನ್‌ ತೆಳುವಾದ ಜಾರ್ಜೆಟ್‌ ಸಾದಾ ಸೀರೆಯುಟ್ಟಿದ್ದ ಶುಭಾ ರಕ್ಷಾ, ಈ ಸೀರೆಯ ಮೇಲೆ ಟ್ರೆಂಚ್‌ ಕೋಟ್‌ ಕೂಡ ಧರಿಸಿಲ್ಲ! ಹಾಗಾಗಿ ಅವರ ಈ ಲುಕ್‌ ಗ್ಲಾಮರಸ್‌ ಆಗಿ ಅವರನ್ನು ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್. ಒಟ್ಟಿನಲ್ಲಿ ಇತ್ತೀಚೆಗೆ ಹಿಮದ ನಡುವೆ ಸೀರೆಯುಟ್ಟು ಸಂಭ್ರಮಿಸುವ ನಾರಿಯರ ಸಾಲಿಗೆ ಇದೀಗ ಕನ್ನಡದ ನಟಿಮಣಿಯರು ಸೇರುತ್ತಿದ್ದಾರೆ.

5/5

ಹಿರಿ-ಕಿರು ತೆರೆಯಲ್ಲಿ ಬ್ಯುಸಿ

ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚುವ ಶುಭಾ ರಕ್ಷಾ ʼಮೂಕ ವಿಸ್ಮಿತʼ, ʼಮತ್ತೆ ಉದ್ಭವʼ, ʼಹೋಮ್‌ ಮಿನಿಸ್ಟರ್‌ʼ ಮುಂತಾದ ಸ್ಯಾಂಡಲ್‌ವುಡ್‌ ಚಿತ್ರಗಳ ಮೂಲಕ ಮೋಡಿ ಮಾಡಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author