Star Fashion 2026: ಸೋನಾಲ್ ಚೌಹಾನ್ ಕಟೌಟ್ ಮ್ಯಾಕ್ಸಿ ಡ್ರೆಸ್ ಹಂಗಾಮ
Sonal Chauhan: ನಟಿ ಸೋನಾಲ್ ಚೌಹಾನ್ ಧರಿಸಿದ್ದ ಕಟೌಟ್ ಮ್ಯಾಕ್ಸಿ ಡ್ರೆಸ್ ಸದ್ಯ ವೆಸ್ಟರ್ನ್ ಔಟ್‌ಫಿಟ್‌ಗಳ ಕೆಟಗರಿಯಲ್ಲಿ ಟಾಪ್ ಲಿಸ್ಟ್‌ಗೆ ಸೇರಿದೆ. ಈ ಡ್ರೆಸ್‌ವಿಶೇಷತೆಯಾದರೂ ಏನು? ಫ್ಯಾಷನಿಸ್ಟಾಗಳ ಅಭಿಪ್ರಾಯವೇನು? ಈ ಕುರಿತ ವಿವರ ಇಲ್ಲಿದೆ.
ಕಟೌಟ್ ಮ್ಯಾಕ್ಸಿ ಡ್ರೆಸ್ ನಟಿ ಸೋನಾಲಿ ಚೌಹಾನ್ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಸೋನಾಲ್ ಕಟೌಟ್ ಮ್ಯಾಕ್ಸಿ ಡ್ರೆಸ್
ಫ್ಯಾಷನ್ ಶೂಟ್‌ವೊಂದರಲ್ಲಿ ನಟಿ ಸೋನಾಲ್ ಚೌಹಾನ್ ಧರಿಸಿದ್ದ ಕಟೌಟ್ ಡ್ರೇಪ್ ಶೈಲಿಯ ಸಿಂಗಲ್ ಶೋಲ್ಡರ್ ಮ್ಯಾಕ್ಸಿ ಡ್ರೆಸ್, ಸದ್ಯ ವೆಸ್ಟರ್ನ್ ಔಟ್‌ಫಿಟ್‌ಗಳ ಕೆಟಗರಿಯ ಟಾಪ್ ಲಿಸ್ಟ್‌ಗೆ ಸೇರಿದೆ. ಫ್ಯಾಷನ್ ಪ್ರಿಯರ ವಾರ್ಡ್ರೋಬ್‌ಗೆ ಕಾಲಿಟ್ಟಿದೆ.
ಸೀಸನ್‌ನಲ್ಲಿ ಕಾಲಿಟ್ಟ ಕಟೌಟ್ ಮ್ಯಾಕ್ಸಿ ಡ್ರೆಸ್
ಪ್ರತಿ ಸೀಸನ್‌ನಲ್ಲೂ ನಾನಾ ಬಗೆಯ ವೆಸ್ಟರ್ನ್ ಔಟ್‌ಫಿಟ್‌ಗಳು ಕಾಲಿಡುತ್ತಲೇ ಇರುತ್ತವೆ. ಅವುಗಳಲ್ಲಿ ಇದೀಗ ಸೋನಾಲ್ ಧರಿಸಿರುವ ಡಿಫರೆಂಟ್ ಶೈಲಿಯ ಕಟೌಟ್ ಡ್ರೆಸ್ ಚಾಲ್ತಿಯಲ್ಲಿದೆ. ಕಟೌಟ್ ವಿನ್ಯಾಸವಿರುವ ಉಡುಗೆಗಳಲ್ಲಿ ಡ್ರೇಪ್ ಶೈಲಿಯವು ಹಾಗೂ ಮ್ಯಾಕ್ಸಿ ಶೈಲಿಯವು ಪ್ರಚಲಿತದಲ್ಲಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಇದ್ಯಾವ ಬಗೆಯ ಔಟ್‌ಫಿಟ್
ಅಸ್ಸೆಮ್ಮಿಟ್ರಿಕಲ್ ಕಟೌಟ್ ವಿನ್ಯಾಸವಿರುವ ಮ್ಯಾಕ್ಸಿ ಡ್ರೆಸ್‌ಗಳಿವು. ಹೌದು, ಎಲ್ಲರಿಗೂ ತಿಳಿದಿರುವಂತೆ ಕಟೌಟ್ ಡ್ರೆಸ್‌ಗಳು ಯಾವ ವಿನ್ಯಾಸದಲ್ಲಾದರೂ ಆಗಬಹುದು. ಅವುಗಳಲ್ಲಿ ನೋಡಲು ಮ್ಯಾಕ್ಸಿಯಂತೆ ಕಾಣಿಸುವ ಡ್ರೇಪ್ ಶೈಲಿಯವು ಅದರಲ್ಲೂ ಆಫ್ ಶೋಲ್ಡರ್ ಸಿಂಗಲ್ ಶೋಲ್ಡರ್‌ನವು ಟ್ರೆಂಡಿಯಾಗಿವೆ.
ಗ್ಲಾಮರಸ್ ಲುಕ್ ನೀಡುವ ಕಟೌಟ್ ಮ್ಯಾಕ್ಸಿ ಡ್ರೆಸ್
ಇನ್ನು, ಸೋನಾಲ್‌ಗೆ ಈ ಉಡುಗೆ ಕಂಪ್ಲೀಟ್ ಗ್ಲಾಮರಸ್ ಲುಕ್ ನೀಡಿದೆ. ಜೊತೆಗೆ ಈ ಸೀಸನ್‌ನಲ್ಲಿ ಟ್ರೆಂಡ್ ಹುಟ್ಟು ಹಾಕಿದೆ ಎನ್ನುವ ಸ್ಟೈಲಿಸ್ಟ್‌ಗಳ ಪ್ರಕಾರ, ಜೆನ್ ಜಿ ಯುವತಿಯರು ಪಾರ್ಟಿಗಳಲ್ಲಿ ಈ ಶೈಲಿಯ ಔಟ್‌ಫಿಟ್‌ಗಳನ್ನು ಪ್ರಿಫರ್ ಮಾಡುತ್ತಿದ್ದಾರೆ ಎನ್ನುತ್ತಾರೆ.