Star Fashion 2026: ಬಣ್ಣ ಬಣ್ಣದ ಪೋಲ್ಕಾ ಡಾಟ್ಸ್ ಸೀರೆ ಕ್ರೇಝ್ ಹುಟ್ಟುಹಾಕಿದ ತಮನ್ನಾ!
Tamannaah Bhatia: ಬಣ್ಣ ಬಣ್ಣದ ಪೋಲ್ಕಾ ಡಾಟ್ಸ್ ಸೀರೆಯಲ್ಲಿಯೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬಹುದು ಎಂಬುದನ್ನು ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಪ್ರೂವ್ ಮಾಡಿದ್ದಾರೆ. ಈ ಬಗ್ಗೆ ಸ್ಟೈಲಿಸ್ಟ್‌ಗಳು ಏನು ಹೇಳುತ್ತಾರೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಬಣ್ಣ ಬಣ್ಣದ ಪೊಲ್ಕಾ ಸೀರೆಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೇವಲ ತಮ್ಮ ಅಭಿಮಾನಿಗಳನ್ನು ಸೆಳೆದಿರುವುದು ಮಾತ್ರವಲ್ಲ! ಈ ರೆಟ್ರೊ ಶೈಲಿಯ ಸೀರೆಯಲ್ಲಿ ಗ್ಲಾಮರಸ್ ಆಗಿ ಅತ್ಯಾಕರ್ಷಕವಾಗಿಯೂ ಕಾಣಿಸಬಹುದು ಎಂಬುದನ್ನು ಪ್ರೂವ್ ಮಾಡಿದ್ದಾರೆ. ಸದ್ಯ ಕಲರ್‌ಫುಲ್ ಪೊಲ್ಕಾ ಡಾಟ್ಸ್ ಸೀರೆಯ ಕ್ರೇಝ್ ಹುಟ್ಟು ಹಾಕಿದ್ದಾರೆ.
ತಮನ್ನಾ ಉಟ್ಟ ಹಾಫ್ & ಹಾಫ್ ಕಲರ್ ಪೊಲ್ಕಾ ಡಾಟ್ಸ್ ಸೀರೆ :
ಅಂದಹಾಗೆ, ತಮನ್ನಾ ಬಾಟಿಯ ಉಟ್ಟಿರುವ ಸೀರೆ ಹಾಫ್ & ಹಾಫ್ ಕಲರ್‌ಫುಲ್ ಪೊಲ್ಕಾ ಡಾಟ್ಸ್ ಸೀರೆ. ಇದುವರೆಗೂ ರೆಟ್ರೊ ಲುಕ್ ಸೀರೆಗಳ ಟಾಪ್ ಲಿಸ್ಟ್ನಲ್ಲಿದ್ದ ಬ್ಲ್ಯಾಕ್ & ವೈಟ್ ಪೊಲ್ಕಾ ಡಾಟ್ಸ್ ಸೀರೆಗೆ ಇದೀಗ ಈ ಶೈಲಿಯ ಅರ್ಧಂಬರ್ಧ ವಿಭಿನ್ನ ಕಲರ್‌ನ ಹಾಫ್ & ಹಾಫ್ ಬಣ್ಣದ ಪೊಲ್ಕಾ ಡಾಟ್ಸ್ ಸೀರೆಗಳು ಸೆಡ್ಡು ಹೊಡೆದಿವೆ.
ಕರಣ್ ತೊರಾನಿ ಬ್ರ್ಯಾಂಡ್ ಸೀರೆಯಿದು :
ಸೆಲೆಬ್ರೆಟಿ ಡಿಸೈನರ್ ಕರಣ್ ತೊರಾನಿ ಬ್ರಾಂಡ್‌ನ ಈ ಪೊಲ್ಕಾ ಸೀರೆ ಪಿಂಕ್ ಹಾಗೂ ಹಳದಿ ಬಣ್ಣದ ಪೊಲ್ಕಾ ಡಾಟ್ಸ್ ಹೊಂದಿದ್ದು, ತಮನ್ನಾಗೆ ವಿಭಿನ್ನ ಲುಕ್ ನೀಡುವಲ್ಲಿ ಯಶಸ್ವಿಯಾಗಿದೆ.
ಪೊಲ್ಕಾ ಡಾಟ್ಸ್ ಸೀರೆಗೆ ಬಿಕಿನಿ ಸ್ಟೈಲ್ ಬ್ಲೌಸ್
ಈ ಪೊಲ್ಕಾ ಡಾಟ್ಸ್ ಸೀರೆಗೆ ಬಿಕಿನಿ ಸ್ಟೈಲ್‌ನ ಬ್ಲೌಸ್ ಡಿಸೈನ್ ಮಾಡಲಾಗಿದೆ. ಬ್ಲೌಸ್ ಹಿಂಭಾಗ ಹಳೆಯ ಸಿನಿಮಾ ಹೀರೋಯಿನ್‌ಗಳು ಹೆಚ್ಚಾಗಿ ಇಷ್ಟಪಟ್ಟು ಧರಿಸುತ್ತಿದ್ದ ಉದ್ದುದ್ದದ ಬೋ ವಿನ್ಯಾಸಗೊಳಿಸಲಾಗಿದೆ. ಇದು ಸೀರೆಯನ್ನು ಹೈಲೈಟ್ ಮಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಲರ್‌ಫುಲ್ ಪೊಲ್ಕಾ ಡಾಟ್ ಸೀರೆ ಟ್ರೆಂಡ್
ಒಟ್ಟಾರೆ, ತಮನ್ನಾ ಬಾಟಿಯಾ ತಮ್ಮದೇ ಆದ ಸ್ಟೈಲಿಂಗ್‌ನಲ್ಲಿ ಈ ಸೀರೆಯ ಕಳೆ ಹೆಚ್ಚಿಸುವುದರೊಂದಿಗೆ ಕಲರ್‌ಫುಲ್ ಪೊಲ್ಕಾ ಡಾಟ್ ಸೀರೆಯ ಟ್ರೆಂಡ್ ಹುಟ್ಟುಹಾಕಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕಿ ಮಿಂಚು.