ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಯುವಕರನ್ನು ಸೆಳೆದ ಹೃತಿಕ್ ರೋಷನ್‌ ಲೇಯರ್ಡ್ ಕುರ್ತಾ

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ತನ್ನ ಸೋದರ ಸಂಬಂಧಿ ಮದುವೆಯಲ್ಲಿ ಧರಿಸಿದ್ದ, ಲೈಟ್‌ ಶೇಡ್‌ನ ಲೇಯರ್ಡ್ ಕುರ್ತಾ ಇದೀಗ ಟ್ರೆಂಡಿಯಾಗಿದ್ದು, ಯುವಕರನ್ನು ಸೆಳೆದಿದೆ. ಈ ಕುರ್ತಾ ಸ್ಪೆಷಾಲಿಟಿ ಏನು? ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಹೃತಿಕ್‌ ರೋಷನ್‌, ಬಾಲಿವುಡ್‌ ನಟ., ಫೋಟೋಗ್ರಫಿ: ಮಾನಸಿ ಸಾವಂತ್‌
1/5

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಧರಿಸಿದ್ದ, ಲೇಯರ್ಡ್ ಕುರ್ತಾ ಇದೀಗ ಟ್ರೆಂಡಿಯಾಗಿದೆ. ಎಥ್ನಿಕ್‌ ಫ್ಯಾಷನ್‌ ಇಷ್ಟಪಡುವ ಯುವಕರನ್ನು ಸೆಳೆದಿದೆ.

2/5

ಕಳೆದ ವಾರ, ತನ್ನ ಸೋದರ ಸಂಬಂಧಿಯ ಮದುವೆಯಲ್ಲಿ ಹೃತಿಕ್‌ ರೋಷನ್‌ ಧರಿಸಿದ್ದ ಉಡುಗೆಗಳಲ್ಲಿ, ಸಿಂಪಲ್‌ ಆದರೂ ಆಕರ್ಷಕವಾಗಿ ಕಾಣಿಸುತ್ತಿದ್ದ ಪೀಚ್‌ ವರ್ಣದ ಲೇಯರ್ಡ್ ಕುರ್ತಾ ಹಾಗೂ ಅದರೊಂದಿಗೆ ಧರಿಸಿದ್ಧ ದೊಗಲೆ ಅಲಿಗರೀ ಪ್ಯಾಂಟ್‌ ಅವರ ಅಭಿಮಾನಿಗಳನ್ನು ಮಾತ್ರವಲ್ಲ, ಎಥ್ನಿಕ್‌ ಲುಕ್‌ ಬಯಸುವ ಯುವಕರನ್ನೂ ಸೆಳೆದಿದೆ.

3/5

ಏನಿದು ಲೇಯರ್ಡ್ ಕುರ್ತಾ?

ಒಂದರ ಮೇಲೊಂದು ಲೇಯರ್‌ ವಿನ್ಯಾಸ ಹೊಂದಿರುವ ಕುರ್ತಾ ಇದು. ಸಾಮಾನ್ಯವಾಗಿ ಕುರ್ತಾ ಧರಿಸುವವರು ಲೇಯರ್‌ ಲುಕ್‌ಗಾಗಿ ವೇಸ್‌ಕೋಟ್‌ ಧರಿಸುತ್ತಾರೆ. ಆದರೆ, ಹೃತಿಕ್‌ ರೋಷನ್‌ ತಮ್ಮ ಕುರ್ತಾಗೆ ಡಬ್ಬಲ್‌ ಲಾಂಗ್‌ ಲೇಯರ್‌ ವಿನ್ಯಾಸ ಮಾಡಿಸಿದ್ದಾರೆ. ಇದು ಈ ಕುರ್ತಾದ ವಿಶೇಷತೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

4/5

ದೊಗಲೆ ಅಲಿಗರೀ ಪ್ಯಾಂಟ್‌

ಇನ್ನು, ಈ ಕುರ್ತಾಗೆ ದೊಗಲೆ ಅಲಿಗರೀ ಪ್ಯಾಂಟ್‌ ಮ್ಯಾಚ್‌ ಮಾಡಲಾಗಿದೆ. ಕಾಂಟ್ರಸ್ಟ್ ವರ್ಣದ ಬದಲು ಪೀಚ್‌ ಕಲರ್‌ನ ಕುರ್ತಾಗೆ ವೈಟ್‌ ಕಲರ್‌ನ ಪ್ಯಾಂಟ್‌ ಮ್ಯಾಚ್‌ ಮಾಡಿ ಸಿಂಪಲ್‌ ಲುಕ್‌ ಕ್ರಿಯೇಟ್‌ ಮಾಡಲಾಗಿದೆ. ಪರಿಣಾಮ, ಇದು ಈ ಜನರೇಷನ್‌ ಯುವಕರಿಗೆ ಇಷ್ಟವಾಗಿದೆ ಎಂಬುದು ಫ್ಯಾಷನ್‌ ವಿಮರ್ಶಕರ ಅಭಿಪ್ರಾಯ.

5/5

ಹೃತಿಕ್‌ ರೋಷನ್‌ ಸಿಂಪಲ್‌ ಫ್ಯಾಷನ್‌‌

ಎಲ್ಲರಿಗೂ ತಿಳಿದಿರುವಂತೆ, ಬಾಲಿವುಡ್‌ ಸ್ಟಾರ್‌ ಹೃತಿಕ್‌ ರೋಷನ್‌ ಸಾರ್ವಜನಿಕವಾಗಿ ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ. ಆದರೆ, ತಮ್ಮ ಸಂಬಂಧಿಯ ಮದುವೆಯಲ್ಲಿ ಈ ಲೇಯರ್ಡ್ ಕುರ್ತಾದಲ್ಲಿ ಕಾಣಿಸಿಕೊಂಡು, ಈ ಔಟ್‌ಫಿಟ್ಟನ್ನು ಟ್ರೆಂಡಿಯಾಗಿಸಿದ್ದಾರೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author