Star Fashion 2026: ಚೀತಾ ಪ್ರಿಂಟೆಡ್ ಡ್ರೆಸ್‌ಗೆ ಹೊಸ ಲುಕ್ ನೀಡಿದ ಅನನ್ಯಾ ಪಾಂಡೆ
ರೆಟ್ರೋ ಫ್ಯಾಷನ್‌ನಲ್ಲಿದ್ದ ಅನಿಮಲ್ ಪ್ರಿಂಟ್ಸ್ ಫ್ಯಾಷನ್‌ನಲ್ಲಿ ಇದೀಗ ಚೀತಾ ಪ್ರಿಂಟ್ಸ್ ಡಿಸೈನರ್‌ವೇರ್ಸ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ, ನಟಿ ಅನನ್ಯಾ ಪಾಂಡೆ ಧರಿಸಿದ್ದ ಚೀತಾ ಡ್ರೆಸ್ ಇದೀಗ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಈ ಕುರಿತಂತೆ ಇಲ್ಲಿದೆ ವಿವರ.
ರೆಟ್ರೋ ಫ್ಯಾಷನ್‌ನಲ್ಲಿದ್ದ ಅನಿಮಲ್ ಪ್ರಿಂಟ್ಸ್‌ನಲ್ಲಿ ಇದೀಗ ಚೀತಾ ಪ್ರಿಂಟೆಡ್ ಡಿಸೈನರ್‌ವೇರ್‌ಗಳದ್ದೇ ಕಾರುಬಾರು ! ಹೌದು. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಧರಿಸಿದ್ದ, ಚೀತಾ ಡ್ರೆಸ್ ಫ್ಯಾಷನ್ ಲೋಕದಲ್ಲಿ ಮತ್ತೊಮ್ಮೆ ಟ್ರೆಂಡ್ ಹುಟ್ಟುಹಾಕಿದೆ.
ಅನನ್ಯಾ ಪಾಂಡೆಯ ಚೀತಾ ಪ್ರಿಂಟೆಡ್ ಸ್ಲಿಟ್ ಸ್ಕರ್ಟ್
ಹೌದು, ನಟಿ ಅನನ್ಯಾ ಪಾಂಡೆ ಇವೆಂಟ್ ವೊಂದರಲ್ಲಿ ಧರಿಸಿದ್ದ ಚೀತಾ ಪ್ರಿಂಟ್ಸ್‌ನ ಸ್ಲಿಟ್ ಸ್ಕರ್ಟ್ ಕೋ ಆರ್ಡ್ ಸೆಟ್ ಡ್ರೆಸ್ ಯಾವ ಮಟ್ಟಿಗೆ ಮತ್ತೊಮ್ಮೆ ಅನಿಮಲ್ ಪ್ರಿಂಟ್ಸ್ ಡ್ರೆಸ್‌ಗಳ ಟ್ರೆಂಡ್ ಹುಟ್ಟುಹಾಕಿದೆ ಎಂದರೇ, ಮತ್ತೊಮ್ಮೆ ಈ ಶೈಲಿಯ ವಿನ್ಯಾಸವನ್ನು ಇಷ್ಟಪಡುವಂತವರು ಇದರತ್ತ ವಾಲತೊಡಗಿದ್ದಾರೆ. ಹಳೆ ಕಾನ್ಸೆಪ್ಟ್‌ಗೆ ಇತಿಶ್ರೀ ಹಾಡಿ, ಹೊಸ ರೂಪದಲ್ಲಿ ಬಿಡುಗಡೆಗೊಂಡಿರುವ ಸ್ಕರ್ಟ್ ಕೋ ಆರ್ಡ್ ಸೆಟ್ ಧರಿಸತೊಡಗಿದ್ದಾರೆ. ಪರಿಣಾಮ, ಚೀತಾ ಪ್ರಿಂಟ್ಸ್‌ನ ಸ್ಕರ್ಟ್ ಸೂಟ್‌ಗಳು ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ರಿಯಾ.
ಚೀತಾ ಪ್ರಿಂಟ್ ಸ್ಕರ್ಟ್ ವಿಶೇಷತೆ
ಅಂದಹಾಗೆ, ಈ ಶೈಲಿಯ ಡ್ರೆಸ್‌ಗಳು, ಟ್ವೀಡ್ ಕೋ ಆರ್ಡ್ ಸೆಟ್ ವಿನ್ಯಾಸದಲ್ಲಿ ದೊರೆಯುತ್ತಿವೆ. ಪರಿಣಾಮ, ಈ ಜನರೇಷನ್ ಹುಡುಗಿಯರ ಹೈ ಫ್ಯಾಷನ್ ಲಿಸ್ಟ್‌ಗೆ ಸೇರಿಕೊಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರಿಟಿ ಲುಕ್‌ಗೆ ಸಾಥ್ ನೀಡುತ್ತಿವೆ. ಆದರೆ, ಬಹುತೇಕ ಚೀತಾ ಪ್ರಿಂಟ್ಸ್ ಡ್ರೆಸ್‌ಗಳು ಪಾಶ್ಚಿಮಾತ್ಯ ಡಿಸೈನ್‌ನಲ್ಲಿಯೇ ದೊರೆಯುತ್ತವೆ. ಇನ್ನು, ಇದುವರೆಗೂ ಕೇವಲ ಪ್ಯಾಂಟ್‌ಗಳ ಟಾಪ್‌ಗಳಲ್ಲಿ ಮಾತ್ರ ಲಭ್ಯವಿದ್ದ ಇವು, ಇದೀಗ ಶಾರ್ಟ್ಸ್ ಹಾಗೂ ಲಾಂಗ್ ಸ್ಕರ್ಟ್‌ಗಳಲ್ಲೂ ಸಿಗುತ್ತಿವೆ. ಹೈ ಫ್ಯಾಷನ್ ಕೆಟಗರಿಯಲ್ಲಿರುವ ಇವು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನ ಬ್ರಾಂಡೆಡ್ ಶಾಪ್‌ಗಳಲ್ಲಿ ವೈವಿಧ್ಯಮಯ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ. ಬೇಸಿಗೆಯ ಬೋಲ್ಡ್ ಫ್ಯಾಷನ್‌ಗೆ ಹೇಳಿ ಮಾಡಿಸಿದ ಔಟ್‌ಫಿಟ್‌ಗಳಿವು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಚೀತಾ ಫ್ಯಾಷನ್ ಪುರಾಣ
ಎಲ್ಲರಿಗೂ ಗೊತ್ತಿರುವಂತೆ, ಈ ಚೀತಾ ಪ್ರಿಂಟೆಡ್ ಡ್ರೆಸ್‌ಗಳ ಫ್ಯಾಷನ್ ಹೊಸತೇನಲ್ಲ, ನಿನ್ನೆ ಮೊನ್ನೆಯದ್ದೂ ಅಲ್ಲ! ರೆಟ್ರೋ ಸಿನಿಮಾಗಳ ಮೂಲಕ ಬ್ಲ್ಯಾಕ್ ಮತ್ತು ವೈಟ್ ಸಿನಿಮಾಗಳ ಕಾಲದಿಂದಲೇ ಈ ಫ್ಯಾಷನ್ ಹುಟ್ಟಿಕೊಂಡಿತ್ತು. ಆರಂಭದಲ್ಲಿ ಹಾಲಿವುಡ್ ಸಿನಿಮಾಗಳ ಮೂಲಕ ನಮ್ಮಲ್ಲಿ ಎಂಟ್ರಿ ನೀಡಿದ್ದವು . ಕಾಲ ಕಳೆದಂತೆ ಹೊಸ ರೂಪದೊಂದಿಗೆ ನಾನಾ ಅವತಾರಗಳನ್ನು ಪಡೆದು, ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತಾ, ಸಾಮಾನ್ಯ ಹುಡುಗಿಯರನ್ನು ತಲುಪಿ ಸೆಲೆಬ್ರಿಟಿ ಲುಕ್ ನೀಡುತ್ತಾ, ಇಲ್ಲಿಯವರೆಗೂ ಬಂದಿವೆ, ಮುಂದುವರೆದಿವೆ ಎನ್ನುತ್ತಾರೆ ಫ್ಯಾಷನಿಷ್ಟಾ ರಾಕಿ.
ಚೀತಾ ಪ್ರಿಂಟ್ಸ್‌ನಲ್ಲಿ ಅನನ್ಯಾ ಪಾಂಡೆ ಲುಕ್‌ಗಾಗಿ ಹೀಗೆ ಮಾಡಿ, ನೋಡಿ
- ಚೀತಾ ಪ್ರಿಂಟ್ಸ್ ಡ್ರೆಸ್‌ಗಳು ಮಾಡರ್ನ್ ಲುಕ್ ನೀಡುತ್ತವೆ.
- ಸಮ್ಮರ್‌ಗೆ ಟ್ರೆಂಡಿಯಾಗಿ ಕಾಣಿಸುವಂತೆ ಸ್ಟೈಲಿಂಗ್ ಮಾಡಿ.
- ವೆಸ್ಟರ್ನ್ ಲುಕ್‌ಗೆ ಸಾಥ್ ನೀಡುವ ಮೇಕಪ್ ಮಾಡಿ.
- ಹೇರ್‌ಸ್ಟೈಲ್ ಕೂಡ ಮ್ಯಾಚ್ ಆಗುವಂತಿರಲಿ.
- ಚೀತಾ ಪ್ರಿಂಟ್ಸ್ ಸ್ಕರ್ಟ್ ನಿಮ್ಮ ಪರ್ಸನಾಲಿಟಿಗೆ ಹೊಂದುವಂತಿರಲಿ.