ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಮನಸೂರೆಗೊಂಡ ಚಿತ್ರಾಂಗದ ಸಿಂಗ್‌ ಬಳುಕಾಡುವ ಸೀರೆ!

Chitrangada Singh: ನಟಿ ಚಿತ್ರಾಂಗದ ಸಿಂಗ್‌ ಇವೆಂಟ್‌ವೊಂದರಲ್ಲಿ ಬಳುಕಾಡುವ ಬಳ್ಳಿಯಂತೆ ಕಾಣಿಸಿಕೊಂಡಿದ್ದಾರೆ. ಅವರು ಉಟ್ಟ ಸಾಫ್ಟ್ ಸೀರೆ ಇದೀಗ ಕಾರ್ಪೋರೇಟ್‌ ಮಹಿಳೆಯರನ್ನು ಸೆಳೆದಿದೆ. ಇದ್ಯಾವ ಬಗೆಯ ಸೀರೆ? ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಚಿತ್ರಾಂಗದ, ಬಾಲಿವುಡ್‌ ನಟಿ
1/5

ನಟಿ ಚಿತ್ರಾಂಗದ ಸಿಂಗ್‌ ಸಾಫ್ಟ್ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಹೆಜ್ಜೆ ಇಟ್ಟರೇ ಸಾಕು ಬಳುಕಾಡುವಂತಹ ಸೀರೆಯಲ್ಲಿ ಅವರು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರನ್ನು ಸೆಳೆದಿದೆ.

2/5

ಚಿತ್ರಾಂಗದ ಫ್ಯಾಷನ್‌ ಲೈಫ್‌

ಅಂದಹಾಗೆ, ಚಿತ್ರಾಂಗದ ಮೊದಲಿನಿಂದಲೂ ಫ್ಯಾಷನೆಬಲ್‌ ನಟಿ. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರೂ ಎಲ್ಲದರಲ್ಲೂ ಗುರುತಿಸಿಕೊಂಡಂತಹ ನಟಿ. ಸಿನಿಮಾಗಳಿಗಿಂತ ಹೆಚ್ಚಾಗಿ ಫ್ಯಾಷನ್‌ ಇವೆಂಟ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಚಿತ್ರವೊಂದರಲ್ಲಿ ಸಲ್ಮಾನ್‌ ಖಾನ್‌ ಜತೆಗೂ ಕಾಣಿಸಿಕೊಳ್ಳಲಿದ್ದಾರೆ.

3/5

ಚಿತ್ರಾಂಗದ ಉಟ್ಟ ಸೀರೆಯ ಜಾದೂ

ಚಿತ್ರಾಂಗದ ಉಟ್ಟ ಸೀರೆ ಅಂತಹ ಹೆವ್ವಿ ಡಿಸೈನ್‌ನದ್ದಲ್ಲ! ಬದಲಿಗೆ ಸ್ಯಾಟಿನ್‌ನಂತೆ ಕಾಣಿಸುವ ಸಿಲ್ಕ್‌ನದ್ದು. ಪರ್ಲ್‌ ಹಾಗೂ ಗೋಲ್ಡನ್‌ ಬೀಡ್ಸ್‌ನ ಲೇಸ್‌ ಬಾರ್ಡರ್‌ನಿಂದ ವಿನ್ಯಾಸಗೊಳಿಸಲಾಗಿದೆ.

4/5

ತಿಳಿ ವರ್ಣದ ಈ ಸೀರೆ ಪಾಸ್ಟೆಲ್‌ ತಿಳಿ ವರ್ಣದ್ದಾಗಿದೆ. ಸಾಫ್ಟ್ ಫ್ಯಾಬ್ರಿಕ್‌ ಆಗಿರುವುದರಿಂದ ಅವರ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಫ್ಲೋ ಆಗಿದೆ. ಹಾಗಾಗಿ ಅವರ ಲುಕ್‌ ಗ್ಲಾಮರಸ್‌ ಆಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಹೈಲೈಟಾದ ಸೀರೆಯ ಬ್ಲೌಸ್‌

ಇಡೀ ಸೀರೆಯನ್ನು ಚಿತ್ರಾಂಗದ ಧರಿಸಿದ ಬ್ಲೌಸ್‌ ಹೈ ಲೈಟ್‌ ಮಾಡಿದೆ. ಹಾಲ್ಟರ್‌ ನೆಕ್‌ನ ಈ ಬ್ಲೌಸ್‌ ವೆಸ್ಟರ್ನ್‌ ಟಾಪ್‌ ಅಥವಾ ಹಾಲ್ಟರ್‌ ನೆಕ್‌ಲೈನ್‌ನ ಬಿಕಿನಿ ಬ್ಲೌಸನ್ನು ನೆನಪಿಸುವಂತಿದೆ ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author