Star Fashion 2026: ಲೋಕಲ್ ಬ್ರಾಂಡ್‌ನಲ್ಲೂ ಬಂತು ಜಾನ್ವಿಯ ಟಾಸೆಲ್ಸ್ ಸೀರೆ
ಇತ್ತೀಚೆಗೆ ತಮ್ಮ ಚಿತ್ರವೊಂದರ ಇವೆಂಟ್‌ನಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಉಟ್ಟಿಕೊಂಡಿದ್ದ ಇಂಡೋ-ವೆಸ್ಟರ್ನ್ ಲುಕ್ ನೀಡುವ ಶಿಫಾನ್ ಟಾಸೆಲ್ಸ್ ಸೀರೆ ಇದೀಗ ನಾನಾ ಲೋಕಲ್ ಬ್ರಾಂಡ್‌ಗಳಲ್ಲಿಯೂ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಬಾಲಿವುಡ್ ನಟಿ ಜಾನ್ವಿ ಕಪೂರ್ ಉಟ್ಟಿದ್ದ, ಗ್ಲಾಮರಸ್ ಲುಕ್ ನೀಡಿದ ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಡಿಸೈನ್‌ನ ಶಿಫಾನ್ ಟಾಸೆಲ್ಸ್ ಸೀರೆ, ಇದೀಗ ಲೋಕಲ್ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ.
ಲೋಕಲ್ ಮಾರುಕಟ್ಟೆಯಲ್ಲಿಯೂ ಲಭ್ಯ
ಹೌದು, ಪೆದ್ದಿ ಸಿನಿಮಾದ ಇವೆಂಟ್‌ವೊಂದರಲ್ಲಿ ನಟಿ ಜಾನ್ವಿ ಕಪೂರ್ ಉಟ್ಟಿದ್ದ, ಗ್ಲಾಮರಸ್ ಸೀರೆಯು ಇದೀಗ ಲೋಕಲ್ ಮಾರುಕಟ್ಟೆಯಲ್ಲೂ ಬಿಡುಗಡೆಗೊಂಡಿದ್ದು, ಮನೀಶ್ ಮಲ್ಹೋತ್ರಾ ಡಿಸೈನರ್ ಸೀರೆಯನ್ನು ಕೊಳ್ಳಲಾಗದವರು ಈ ಸೀರೆಯನ್ನು ಕೊಂಡು ಕೊಳ್ಳತೊಡಗಿದ್ದಾರೆ.
ನಾನಾ ಕಲರ್‌ನಲ್ಲಿ ಲಭ್ಯ
ಕೈಗೆಟಕುವ ಬೆಲೆಯಲ್ಲಿ ದೊರಕತೊಡಗಿರುವ ಇವು ನಾನಾ ಕಲರ್‌ನಲ್ಲೂ ಸಿಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಜಾನ್ವಿಯ ಗ್ಲಾಮರಸ್ ಲುಕ್‌ಗೆ ಸಾಥ್ ನೀಡಿದ ಸೀರೆಯಿದು
ನೋಡಲು ಗ್ರ್ಯಾಂಡ್ ಆಗಿಲ್ಲದಿದ್ದರೂ ಕಂಪ್ಲೀಟ್ ಹಾಟ್ ಲುಕ್ ನೀಡುವ ಸೀರೆ ಇದಾಗಿದ್ದು, ಫ್ರೆಂಚ್ ಶಿಫಾನ್‌ನ ಟಾಸೆಲ್ಸ್ ಸೀರೆಯನ್ನು ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಡಿಸೈನ್ ಮಾಡಲಾಗಿದೆ. ಪಲ್ಲುವಿನ ಅಂಚಿಗೆ ಟಾಸೆಲ್ಸ್ ವಿನ್ಯಾಸಗೊಳಿಸರುವುದು ಇಡೀ ಸೀರೆಯ ಲುಕ್ ಹೈಲೈಟ್ ಮಾಡಿದೆ. ಸೀರೆಯನ್ನು ಹೀಗೂ ಡಿಸೈನ್ ಮಾಡಬಹುದು ಎಂಬುದನ್ನು ತೋರ್ಪಡಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸೀರೆಗೂ ಬಂತು ದುಪಟ್ಟಾ
ಈ ಸೀರೆಯ ಇನ್ನೊಂದು ವಿಶೇಷತೆಯೆಂದರೇ ಈ ಸೀರೆಯ ಅದೇ ಕಲರ್‌ನ ದುಪಟ್ಟಾ. ಅದಕ್ಕೂ ಟಾಸೆಲ್ಸ್ ವಿನ್ಯಾಸ ನೀಡಿರುವುದು ಸೀರೆಯನ್ನು ಮತ್ತಷ್ಟು ಅತ್ಯಾಕರ್ಷಕವಾಗಿಸಿದೆ. ಸೀರೆ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.