ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಡಿಸೈನರ್‌ ಜಾಕೆಟ್‌ ಫ್ರಿಂಜ್‌ ಸ್ಕರ್ಟ್‌ನಲ್ಲಿ ಮಿನುಗಿದ ಕರೀಷ್ಮಾ ಕಪೂರ್‌

Bollywood Actress Karisma Kapoor: ಡ್ಯಾನ್ಸ್ ಇವೆಂಟ್‌ವೊಂದರಲ್ಲಿ ಬಾಲಿವುಡ್‌ ನಟಿ ಕರೀಷ್ಮಾ ಕಪೂರ್‌ ಬ್ಲ್ಯಾಕ್‌ ಕಲರ್‌ನ ಎಂಬ್ರಾಯ್ಡರಿ ಜಾಕೆಟ್‌ ಹಾಗೂ ಫ್ರಿಂಜ್‌ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಹೇಗಿತ್ತು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಕರೀಷ್ಮಾ ಕಪೂರ್‌, ನಟಿ
1/5

ಬ್ಲ್ಯಾಕ್‌ ಕಲರ್‌ನ ಡಿಸೈನರ್‌ ಎಂಬ್ರಾಯ್ಡರಿ ಜಾಕೆಟ್‌ ಮತ್ತು ಫ್ರಿಂಜ್‌ ಸ್ಕರ್ಟ್‌ನಲ್ಲಿ ಬಾಲಿವುಡ್‌ ನಟಿ ಕರೀಷ್ಮಾ ಕಪೂರ್‌ ಹಂಗಾಮ ಎಬ್ಬಿಸಿದ್ದಾರೆ.

2/5

ಕರೀಷ್ಮಾ ಬ್ಲ್ಯಾಕ್‌ ಡ್ರೆಸ್

ಹೌದು, ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದ ನಟಿ ಕರೀಷ್ಮಾ ಕಪೂರ್‌, ಬ್ಲ್ಯಾಕ್‌ ಕಲರ್‌ನ ಗ್ರ್ಯಾಂಡ್‌ ವೈಟ್‌ ಕಾಂಟ್ರಾಸ್ಟ್ ಶೇಡ್‌ನ ಎಂಬ್ರಾಯ್ಡರಿ ಮಾಡಿರುವ ಡಿಸೈನರ್‌ ಜಾಕೆಟ್‌ ಹಾಗೂ ಕಪ್ಪು ವರ್ಣದ ಫ್ರಿಂಜ್‌ ಸ್ಕರ್ಟ್‌ನಲ್ಲಿ ಮಿನುಗಿದ್ದಾರೆ. ಇವರ ಈ ಲುಕ್‌ ಮುಂಬರುವ ಮಾನ್ಸೂನ್‌ ಇಂಡೋ-ವೆಸ್ಟರ್ನ್‌ ಲುಕ್‌ಗೆ ನಾಂದಿ ಹಾಡಿದೆ.

3/5

ಇಂಡೋ-ವೆಸ್ಟರ್ನ್‌ ಮಾನ್ಸೂನ್‌ ಲುಕ್‌

ಕರೀಷ್ಮಾರ ಈ ಲುಕ್‌ ಇಂಡೋ-ವೆಸ್ಟರ್ನ್‌ ಮಾನ್ಸೂನ್‌ ಲುಕ್‌ಗೆ ಮ್ಯಾಚ್‌ ಆಗಿದೆ. ಅದರಲ್ಲೂ ಗ್ರ್ಯಾಂಡ್‌ ಎಂಬ್ರಾಯ್ಡರಿ ಪ್ರಿಯರು ಈ ಲುಕ್ಕನ್ನು ಪ್ರಯೋಗ ಮಾಡಲು ಸೂಕ್ತವಾಗಿದೆ ಎಂದಿರುವ ಫ್ಯಾಷನ್‌ ವಿಮರ್ಶಕರು, ಕರೀಷ್ಮಾ ಕಪೂರ್‌ ಕಂಪ್ಲೀಟ್‌ ಬ್ಲ್ಯಾಕ್‌ ಕಲರ್‌ ಚೂಸ್‌ ಮಾಡಲು ಕಾರಣವೂ ಇದೆ. ಈ ಸೀಸನ್‌ನಲ್ಲಿ ಬ್ಲ್ಯಾಕ್‌ ಶೇಡ್‌ ಡ್ರೆಸ್‌ಗಳು ಹೆಚ್ಚು ಹೈಲೈಟ್‌ ಆಗುತ್ತವೆ ಹಾಗೂ ಎಲಿಗೆಂಟ್‌ ಲುಕ್‌ ನೀಡುತ್ತವೆ. ಹಾಗಾಗಿ ಅವರು ಈ ಕಲರ್‌ ಚೂಸ್‌ ಮಾಡಿರಬಹುದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

4/5

ಎಂಬ್ರಾಯ್ಡರಿ ಜಾಕೆಟ್‌ನ ವಿಶೇ‍ಷತೆ

ಅಂದಹಾಗೆ, ಕರೀಷ್ಮಾ ಧರಿಸಿರುವ ಈ ಜಾಕೆಟ್‌ ಹೆವ್ವಿ ಡಿಸೈನ್‌ ಹೊಂದಿದೆ. ಗೋಲ್ಡನ್‌ ಮತ್ತು ಸಿಲ್ವರ್‌ ಕಲರ್‌ನ ಬೀಡ್ಸ್ ಹಾಗೂ ಸಿಕ್ವಿನ್ಸ್ ಹ್ಯಾಂಡ್‌ ಎಂಬ್ರಾಯ್ಡರಿಯಿಂದ ಅಲಂಕೃತಗೊಂಡಿದೆ. ಫುಲ್‌ ಸ್ಲೀವ್‌ ಇರುವುದರಿಂದ ಕಂಪ್ಲೀಟ್‌ ಎಲಿಗೆಂಟ್‌ ಲುಕ್‌ ನೀಡಿದೆ. ಇನ್ನು ಇದಕ್ಕೆ ಧರಿಸಿರುವ ಫ್ರಿಂಜ್‌ ಮಿಡಿ ಸ್ಕರ್ಟ್ ಇಡೀ ಲುಕ್‌ಗೆ ಮಾಡರ್ನ್‌ ಟಚ್‌ ನೀಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಪ್ರಯೋಗಾತ್ಮಕ ಡಿಸೈನರ್‌ವೇರ್‌

ಒಟ್ಟಾರೆ, ಕರೀಷ್ಮಾ ಧರಿಸಿರುವ ಈ ಡಿಸೈನರ್‌ವೇರ್‌ ಸದ್ಯ ಅವರ ಅಭಿಮಾನಿಗಳನ್ನು ಮಾತ್ರವಲ್ಲ, ಪ್ರಯೋಗಾತ್ಮಕ ಡಿಸೈನರ್‌ವೇರ್‌ ಧರಿಸಲು ಬಯಸುವ ಬ್ಲ್ಯಾಕ್‌ ಕಲರ್‌ ಪ್ರೇಮಿಗಳನ್ನು ಸೆಳೆದಿದೆ.

ಶೀಲಾ ಸಿ ಶೆಟ್ಟಿ

View all posts by this author