ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಫಾಲೋವರ್ಸ್ ಕಣ್ಣು ಕುಕ್ಕಿದ ಕೃತಿ ಸನೂನ್‌ ಶಿಫ್ಟ್ ಮಿನಿ ಡ್ರೆಸ್‌

Kriti Sanon: ಇತ್ತೀಚೆಗೆ ಸಿನಿಮಾ ಇವೆಂಟ್‌ವೊಂದರಲ್ಲಿ ಬಾಲಿವುಡ್‌ ನಟಿ ಕೃತಿ ಸನೂನ್‌ ಧರಿಸಿದ್ಧ, ಎ ಲೈನ್‌ ಶಿಫ್ಟ್ ಮಿನಿ ಡ್ರೆಸ್ ಫಾಲೋವರ್‌ಗಳ ಕಣ್ಣು ಕುಕ್ಕಿದೆ. ಇದ್ಯಾವ ಬಗೆಯ ಡ್ರೆಸ್? ಏನಿದರ ಸ್ಪೆಷಾಲಿಟಿ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಕೃತಿ ಸನೂನ್‌, ಬಾಲಿವುಡ್‌ ನಟಿ
1/5

ಶಿಫ್ಟ್ ಮಿನಿ ಡ್ರೆಸ್‌ ಹೊಸ ರೂಪದಲ್ಲಿ ಮರಳಿದೆ. ಹೌದು, ಬಾಲಿವುಡ್‌ ನಟಿ ಕೃತಿ ಸನೂನ್‌ ಇತ್ತೀಚೆಗೆ ಸಿನಿಮಾ ಇವೆಂಟ್‌ವೊಂದರಲ್ಲಿ ವೈಬ್ರೆಂಟ್‌ ಶೇಡ್‌ನ ಶಿಫ್ಟ್ ಮಿನಿ ಡ್ರೆಸ್ ಧರಿಸಿದ್ಧು, ಈ ಉಡುಗೆ ಫಾಲೋವರ್‌ಗಳ ಕಣ್ಣು ಕುಕ್ಕಿದೆ.

2/5

ಕೃತಿ ಸನೂನ್‌ ಧರಿಸಿದ್ಧ ಶಿಫ್ಟ್ ಮಿನಿ ಡ್ರೆಸ್

ಎದ್ದು ಕಾಣಿಸುವಂತಹ ಹಸಿರು ಕಲರ್‌ನ ಈ ಶಿಫ್ಟ್ ಮಿನಿ ಡ್ರೆಸ್‌ ಲಕ್ಷುರಿ ಬ್ರ್ಯಾಂಡ್‌ ಎಂದೆನಿಸಿಕೊಂಡಿರುವ ಅಲೆಕ್ಸಿಸ್‌ ಅರವೈನ್‌ ಬ್ರ್ಯಾಂಡ್‌ನದ್ದಾಗಿದೆ. ಎ ಲೈನ್‌ ಶಿಫ್ಟ್ ಮಿನಿ ಡ್ರೆಸ್ ಇದಾಗಿದೆ. ವೈಬ್ರೆಂಟ್‌ ಶೇಡ್‌ ಇದರ ವಿಶೇಷತೆಯಾಗಿದ್ದು, ನೆಕ್‌ಲೈನ್‌ ಹಾಗೂ ಡ್ರೆಸ್‌ನ ಕೆಳಗೆ ಬಬ್ಬಲ್‌ ರೀತಿಯಲ್ಲಿ ಕಾಣಿಸುವಂತಹ ತ್ರೀ ಡಿ ಡಿಸ್ಕ್‌ ಎಂಬಾಲೀಶ್‌ಮೆಂಟ್‌ ಡಿಸೈನ್‌ಗಳನ್ನು ಈ ಉಡುಗೆ ಹೊಂದಿದೆ.

3/5

ಶಿಫ್ಟ್ ಮಿನಿ ಡ್ರೆಸ್ ಸ್ಪೆಷಾಲಿಟಿ

ಅಂದಹಾಗೆ, ಶಿಫ್ಟ್ ಮಿನಿ ಡ್ರೆಸ್‌ಗಳು ಲೂಸಾಗಿರುವ ಸ್ಟಿಚ್ಚಿಂಗ್‌ ಹೊಂದಿರುತ್ತವೆ. ಎ ಲೈನ್‌ ವಿನ್ಯಾಸ ಹೊಂದಿರುವುದರಿಂದ ವೇಸ್ಟ್‌ಲೈನ್‌ ಕೂಡ ಲೂಸಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಪರಿಣಾಮ, ಇವು ರೆಟ್ರೊ ಲುಕ್‌ ಕಲ್ಪಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್‌.

4/5

ಸಮ್ಮರ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿದ್ದ ಶಿಫ್ಟ್ ಡ್ರೆಸ್‌

ಬಹುತೇಕ ಶಿಫ್ಟ್ ಡ್ರೆಸ್‌ ಗಳು ಸಮ್ಮರ್‌ ಸೀಸನ್‌ನಲ್ಲಿ ಮಾತ್ರ ಲಗ್ಗೆ ಇಡುತ್ತವೆ. ಈ ಬಾರಿ ಜೆನ್‌ ಜಿ ಹುಡುಗಿಯರಿಗೂ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಸಮ್ಮರ್‌ ಮುಗಿಯುತ್ತಾ ಬಂದರೂ ಮತ್ತೊಮ್ಮೆ ಎಂಟ್ರಿ ನೀಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಶಿಫ್ಟ್ ಮಿನಿ ಡ್ರೆಸ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್

  • ಇವನ್ನು ಕೇಪ್ರೀಸ್‌ನೊಂದಿಗೂ ಧರಿಸಬಹುದು.
  • ಬೇಕಿದ್ದಲ್ಲಿ ಶರ್ಟ್ ಒಳಗೆ ಧರಿಸಿ ಲೇಯರ್‌ ಲುಕ್‌ ನೀಡಬಹುದು.
  • ವೀಕೆಂಡ್‌ ಪಾರ್ಟಿಗಳಿಗೆ ಬೆಸ್ಟ್ ಚಾಯ್ಸ್.
  • ಸೆಕೆಗೆ ಇವು ಹೇಳಿ ಮಾಡಿಸಿದ ಉಡುಗೆಗಳು.
  • ಹೆಚ್ಚು ಸ್ಟೈಲಿಂಗ್‌ ಮಾಡುವುದು ಬೇಕಾಗಿಲ್ಲ. ಸಿಂಪಲ್ಲಾಗಿ ಕಾಣಿಸುತ್ತವೆ.

ಶೀಲಾ ಸಿ ಶೆಟ್ಟಿ

View all posts by this author