ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಸಮ್ಮರ್‌ ಮುಗಿಯದಿದ್ದರೂ ಲೇಯರ್‌ ಸೀರೆಗೆ ಸೈ ಎಂದ ಮಾಧುರಿ ದೀಕ್ಷಿತ್‌

Madhuri Dixit: ಬೇಸಿಗೆ ಇನ್ನೂ ಮುಗಿದಿಲ್ಲ! ಆಗಲೇ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಡಿಜಿಟಲ್‌ ಪ್ರಿಂಟ್ಸ್‌ನ ಬ್ಲ್ಯಾಕ್‌ & ವೈಟ್‌ ಲೇಯರ್‌ ಲುಕ್‌ ಸೀರೆಗೆ ಸೈ ಎಂದಿದ್ದಾರೆ. ಹಾಗಾದಲ್ಲಿ ಅವರ ಸೀರೆಯ ಸ್ಪೆಷಾಲಿಟಿಯಾದರೂ ಏನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಮಾಧುರಿ ದೀಕ್ಷಿತ್‌, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಡಿಜಿಟಲ್‌ ಪ್ರಿಂಟ್ಸ್‌ನ ಬ್ಲ್ಯಾಕ್‌ & ವೈಟ್‌ ಲೇಯರ್‌ ಲುಕ್‌ ನೀಡುವ ಸೀರೆಗೆ ಸೈ ಎಂದಿದ್ದಾರೆ.

2/5

ಸೀರೆಗೆ ಲೇಯರ್‌ ಲುಕ್‌

ಹೌದು, ಎಲ್ಲರಿಗೂ ಗೊತ್ತಿರುವಂತೆ, ಬೇಸಿಗೆ ಸೀಸನ್‌ ಇನ್ನೂ ಮುಗಿದಿಲ್ಲ! ಆಗಲೇ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಲೇಯರ್‌ ಲುಕ್‌ ನೀಡುವ ಸೀರೆಗೆ ಸೈ ಎಂದಿದ್ದಾರೆ. ಸೀರೆ ಪ್ರಿಯ ಮಹಿಳೆಯರನ್ನು ಎಂದಿನಂತೆ ಸೆಳೆದಿದ್ದಾರೆ.

3/5

ಸೀರೆ ಫೋಟೋಗಳನ್ನು ಹಂಚಿಕೊಂಡ ಮಾಧುರಿ

ಅಂದಹಾಗೆ, ಮಾಧುರಿ ದೀಕ್ಷಿತ್‌ ಪ್ರತಿ ಬಾರಿ ಸೀರೆ ಉಟ್ಟಾಗಲೂ ಫ್ಯಾಷನ್‌ ಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ನಂತರ ತಮ್ಮ ಫೋಟೋಗಳನ್ನು ಖುದ್ದಾಗಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ, ಮಹಿಳಾ ಅಭಿಮಾನಿಗಳನ್ನು ತಮ್ಮದೇ ಆದ ಪೋಸ್‌ಗಳ ಮೂಲಕ ಸೆಳೆಯುತ್ತಾರೆ. ಟ್ರೆಂಡ್‌ ಸೆಟ್‌ ಮಾಡುತ್ತಾರೆ.

4/5

ಮಾಧುರಿ ದೀಕ್ಷಿತ್‌ ಸೀರೆ ವಿಶೇಷತೆ

ಇನ್ನು, ಮಾಧುರಿ ದೀಕ್ಷಿತ್‌ ಈ ಬಾರಿ ಜಾರ್ಜೆಟ್‌ನ ಡಿಜಿಟಲ್‌ ಪ್ರಿಂಟ್ಸ್‌ನ ಬ್ಲ್ಯಾಕ್‌ & ವೈಟ್‌ ಸೀರೆ ಉಟ್ಟುಕೊಂಡಿದ್ದು, ವೈಟ್‌ ಸೀರೆಯ ಮೇಲೆ ಬ್ಲ್ಯಾಕ್‌ ಫ್ಲೋರಲ್‌ ಪ್ರಿಂಟ್ಸ್ ಇವೆ. ಇನ್ನು ಸೀರೆಯ ಸ್ಟೈಲಿಂಗ್‌ ವಿಶೇಷತೆ ಏನೆಂದರೇ, ಬ್ಲೌಸ್‌ ಮೇಲೆ ಕ್ರಾಪ್‌ ಬ್ಲ್ಯಾಕ್‌ ಕಾಲರ್‌ಲೆಸ್‌ ಜಾಕೆಟ್‌ ಧರಿಸಿರುವುದು ಎನ್ನುವ ಫ್ಯಾಷನ್‌ ವಿಮರ್ಶಕಿ ಮಿಂಚು ಪ್ರಕಾರ, ಮುಂಬರುವ ಮಾನ್ಸೂನ್‌ ಸೀಸನ್‌ಗೆ ಈ ರೀತಿಯ ಸ್ಟೈಲಿಂಗ್‌ ಮಾಡಬಹುದು ಎಂಬುದನ್ನು ಪ್ರದರ್ಶಿಸಿದ್ದಾರೆ. ಇದು ಮಾನ್ಸೂನ್‌ ಸೀರೆ ಸ್ಟೈಲಿಂಗ್‌ಗೆ ನಾಂದಿ ಹಾಡಬಹುದು ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

5/5

ನೀವೂ ಮಾಧುರಿಯಂತೆ ಸೀರೆಯಲ್ಲಿ ಕಾಣಿಸಿಕೊಳ್ಳಬಹುದು!

  • ಇದಕ್ಕಾಗಿ ಬ್ಲ್ಯಾಕ್‌ & ವೈಟ್‌ ಡಿಜಿಟಲ್‌ ಪ್ರಿಂಟೆಡ್‌ ಸೀರೆ ಉಟ್ಟುಕೊಳ್ಳಿ.
  • ಯಾವುದೇ ಬ್ಲ್ಯಾಕ್‌ ಶೇಡ್‌ನ ಕ್ರಾಪ್‌ ಜಾಕೆಟ್‌ ಧರಿಸಿ.
  • ಥೇಟ್‌ ಮಾಧುರಿಯಂತೆ ಸ್ಟೈಲಿಂಗ್‌ ಫಾಲೋ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author