ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಜೆನ್‌ ಜಿ ಫ್ಯಾಷನ್‌ಗೆ ಸೆಡ್ಡು ಹೊಡೆದ ಮಾಧುರಿ ದೀಕ್ಷಿತ್‌ ಸ್ಟೈಲಿಂಗ್‌

Madhuri Dixit: ಜೆನ್‌ ಜಿ ಯುವತಿಯರ ಟ್ರೆಂಡ್‌ ಲಿಸ್ಟ್‌ನಲ್ಲಿರುವ ಬಾಕ್ಸಿ ಕ್ರಾಪ್ಡ್ ನೀಲಿ ಕೋ ಆರ್ಡ್ ಸೆಟ್‌ನಲ್ಲಿ ಮಾಧುರಿ ದೀಕ್ಷಿತ್‌ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಔಟ್‌ಫಿಟ್‌? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಮಾಧುರಿ ದೀಕ್ಷಿತ್‌, ಬಾಲಿವುಡ್‌ ನಟಿ
1/5

ಜೆನ್‌ ಜಿ ಯುವತಿಯರ ಟ್ರೆಂಡ್‌ ಲಿಸ್ಟ್‌ನಲ್ಲಿರುವ ಬಾಕ್ಸಿ ಕ್ರಾಪ್ಡ್ ನೀಲಿ ಕೋ ಆರ್ಡ್ ಸೆಟ್‌ನಲ್ಲಿ ಮಾಧುರಿ ದೀಕ್ಷಿತ್‌ ಯಂಗ್‌ ಆಗಿ ಕಾಣಿಸಿಕೊಂಡಿದ್ದಾರೆ. ವೆಬ್‌ ಸೀರೀಸ್‌ ಇವೆಂಟ್‌ವೊಂದರಲ್ಲಿ ಈ ಜೆನ್‌ ಜಿ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿರುವ ಮಾಧುರಿ ಅಪಾರ ಫ್ಯಾನ್‌ ಫಾಲೋವರ್‌ಗಳ ಮನ ಗೆದ್ದಿದ್ದಾರೆ.

2/5

ಬಾಕ್ಸಿ ಕ್ರಾಪ್ಡ್ ಕೋ ಆರ್ಡ್ ಸೆಟ್‌ ಔಟ್‌ಫಿಟ್‌

ಒಂದೇ ಕಲರ್‌ನ ಮಾನೋಕ್ರೋಮ್‌ ವಿನ್ಯಾಸದ ಈ ಕೋ ಆರ್ಡ್‌ ಸೆಟ್‌ ವಿಶೇಷತೆ ಎಂದರೇ, ಟಾಪ್‌ ಬಾಕ್ಸಿ ಕ್ರಾಪ್ಡ್ ಡಿಸೈನ್‌ನಲ್ಲಿರುವುದು. ಜತೆಗೆ ಕ್ರಾಪ್ಡ್‌ ಜಾಕೆಟ್‌ನಂತಿರುವುದು.

3/5

ಬಾಕ್ಸಿ ಕ್ರಾಪ್ಡ್ ಕೋ ಆರ್ಡ್ ವಿಶೇಷತೆ

ಇದು ತಕ್ಷಣಕ್ಕೆ ನೋಡಲು ಜಾಕೆಟ್‌ನಂತೆ ಕಾಣಿಸುತ್ತದೆ. ಜಿಪ್‌ ಇರುವುದರಿಂದ ಹೈ ಫ್ಯಾಷನ್‌ ಲುಕ್‌ ನೀಡುತ್ತದೆ. ಇನ್ನು ಪ್ಯಾಂಟ್‌ ಕೊಂಚ ದೊಗಲೆಯಾಗಿರುವುದರಿಂದ ಸಮ್ಮರ್‌ ಸೀಸನ್‌ಗೂ ಹೊಂದುತ್ತದೆ. ಎಲ್ಲಾ ವರ್ಗದ ಮಹಿಳೆಯರಿಗೂ ಯುವತಿಯರಿಗೂ ಅತ್ಯಾಕರ್ಷಕವಾಗಿ ಕಾಣಿಸುವುದಲ್ಲದೇ ಯಂಗ್‌ ಲುಕ್‌ ನೀಡುತ್ತದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

4/5

ಮಾಧುರಿ ದೀಕ್ಷಿತ್‌ ಫ್ಯಾಷನ್‌ ಲವ್‌

ಮಾಧುರಿ ದೀಕ್ಷಿತ್‌ ಫ್ಯಾಷನ್‌ ಇತ್ತೀಚೆಗೆ ರಿಲವೆಂಟ್‌ ಆಗಿದೆ. ಈ ಜನರೇಷನ್‌ಗೆ ತಕ್ಕಂತೆ ತಮ್ಮ ಫ್ಯಾಷನ್‌ ಸ್ಟೈಲ್‌ ಸ್ಟೇಟ್‌ಮೆಂಟನ್ನು ಕೂಡ ಆಗಾಗ್ಗೆ ಬದಲಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ ಪ್ರಯೋಗಾತ್ಮಕ ಡಿಸೈನರ್‌ವೇರನ್ನು ಪ್ರಯೋಗಿಸುತ್ತಿರುತ್ತಾರೆ. ರೆಟ್ರೋ ಲುಕ್‌ನಿಂದಿಡಿದು ಮಾಡರ್ನ್‌ ಲುಕ್‌ವರೆಗೂ ಟ್ರೈ ಮಾಡುತ್ತಾರೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

5/5

ಬಾಕ್ಸಿ ಕ್ರಾಪ್ಡ್ ಕೋ ಆರ್ಡ್ ಸೆಟ್‌ ಸ್ಟೈಲಿಂಗ್‌ ಹೇಗೆ?

  • ಆದಷ್ಟೂ ಸೀಸನ್‌ಗೆ ಮ್ಯಾಚ್‌ ಆಗುವ ಕಲರ್‌ನದ್ದೇ ಆಯ್ಕೆ ಮಾಡಬೇಕು.
  • ಬಾಕ್ಸಿ ಕ್ರಾಪ್ಡ್ ಟಾಪ್‌ ಈ ಕೋ ಆರ್ಡ್ ಸೆಟ್‌ನ ಹೈಲೈಟ್‌.
  • ಮಿನಿಮಲ್‌ ಆಕ್ಸೆಸರೀಸ್‌ ಧರಿಸುವುದು ಉತ್ತಮ.
  • ಜಿಪ್‌ ಕ್ರಾಪ್ಡ್ ಟಾಪ್‌ ಅತ್ಯಾಕರ್ಷಕವಾಗಿ ಕಾಣಿಸುತ್ತದೆ.
  • ಹೈ ಫ್ಯಾಷನ್‌ ಲುಕ್‌ಗಾಗಿ ಮೇಕೋವರ್‌ ಚೆನ್ನಾಗಿರಲಿ.
  • ಹೈ ಹೀಲ್ಡ್ ಶೂಗಳು ಈ ಔಟ್‌ಫಿಟ್‌ಗೆ ಅಂದವಾಗಿ ಮ್ಯಾಚ್‌ ಆಗುತ್ತವೆ.
  • ಸಿಂಪಲ್‌ ಮೇಕಪ್‌ಗೆ ಆದ್ಯತೆ ನೀಡಿ.

ಶೀಲಾ ಸಿ ಶೆಟ್ಟಿ

View all posts by this author