Star Fashion 2026: ವಿಂಟರ್ ಟ್ರೆಂಚ್‌ಕೋಟ್ ಸೂಟ್‌ನಲ್ಲಿ ಮನೀಷಾ ಕೊಯಿರಾಲ ನ್ಯೂ ಲುಕ್
Manisha Koirala New Look: ಬಾಲಿವುಡ್ ನಟಿ ಮನೀಷಾ ಕೊಯಿರಾಲ ವಿಂಟರ್ ಟ್ರೆಂಚ್ ಕೋಟ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನ್ಯೂ ಲುಕ್ ನೀಡಿರುವ ಈ ಔಟ್‌ಫಿಟ್ ವಿಶೇಷತೆಯೇನು? ಫ್ಯಾಷನಿಸ್ಟಾಗಳ ರಿವ್ಯೂ ಏನು? ಇಲ್ಲಿದೆ ವಿವರ.
ಟ್ರೆಂಚ್ ಕೋಟ್ ಸೂಟ್‌ನಲ್ಲಿ ಬಾಲಿವುಡ್ ನಟಿ ಮನೀಷಾ ಕೊಯಿರಾಲ ಕಾಣಿಸಿಕೊಂಡು, ವಿಂಟರ್ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಅವರ ಈ ವೆಸ್ಟರ್ನ್ ವಿಂಟರ್ ಲುಕ್ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನು ಆಕರ್ಷಿಸಿದೆ.
ಮನೀಷಾ ಫ್ಯಾಷನ್ ಶೂಟ್
ಬಾಂಬೆ ಸಿನಿಮಾದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದ ಮನೀಷಾ ಕೊಯಿರಾಲ ಕೆಲಕಾಲ ಸಿನಿಮಾ ಕ್ಷೇತ್ರದಿಂದ ಮರೆಯಾಗಿದ್ದರು. ಈ ಮಧ್ಯೆ ಹಿಂದಿ ವೆಬ್ ಸಿರೀಸ್ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡ ಅವರು, ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ಮತ್ತೊಮ್ಮೆ ಸಕ್ರಿಯರಾಗಿದ್ದಾರೆ. ಅಷ್ಟೇಕೆ! ಆಗಾಗ್ಗೆ ತಮ್ಮ ಟ್ರಾವೆಲ್ ಫೋಟೋಗಳು ಹಾಗೂ ಫ್ಯಾಷನ್ ಫೋಟೋಶೂಟ್‌ಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ.
ಏನಿದು ಟ್ರೆಂಚ್‌ಕೋಟ್ ಸೂಟ್
ಟ್ರೆಂಚ್ ಕೋಟ್ ಸೆಟ್ಟನ್ನು ಟ್ರೆಂಚ್ ಕೋಟ್ ಸೂಟ್ ಎನ್ನಲಾಗುತ್ತದೆ. ನೋಡಲು ಬ್ಲೇಜರ್ ಇಲ್ಲವೇ ಜಾಕೆಟ್ ಸೂಟ್‌ಗಳಿಗಿಂತ ಉದ್ದವಾಗಿರುವ ಟ್ರೆಂಚ್ ಕೋಟ್ ಸೂಟ್ ನೋಡಲು ಥೇಟ್ ಟ್ರೆಂಚ್ ಕೋಟ್‌ನಂತೆಯೇ ಕಾಣಿಸುತ್ತದೆ. ಇದಕ್ಕೆ ಬ್ಲೇಜರ್‌ಗೆ ಬಳಸುವ ಸಾಫ್ಟ್ ಫ್ಯಾಬ್ರಿಕ್ ಬಳಸಲಾಗಿದೆ. ಕೋ ಆರ್ಡ್ ಸೆಟ್‌ನಂತೆಯೇ ವಿನ್ಯಾಸಗೊಳಿಸಿಲಾಗಿದೆ. ತಿಳಿಯ ವರ್ಣದ ಈ ಸೂಟ್ ಲೇಯರ್ ಲುಕ್ ನೀಡಿರುವುದರೊಂದಿಗೆ ಪರ್ಫೆಕ್ಟ್ ವಿಂಟರ್‌ಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಮನೀಷಾ ಕೊಯಿರಾಲ ಲೇಯರ್ ಲುಕ್
ಮನೀಷಾ ಕೊಯಿರಾಲರ ಈ ವಿಂಟರ್ ಲೇಯರ್ ಲುಕ್ ಕಾರ್ಪೋರೇಟ್ ಮಹಿಳೆಯರನ್ನು ಆಕರ್ಷಿಸಿದೆ. ವಯಸ್ಸಾದರೂ ಟ್ರೆಂಚ್ ಕೋಟ್‌ನಲ್ಲಿ ಚೆಂದವಾಗಿ ಕಾಣಿಸಬಹುದು ಎಂಬುದನ್ನು ಇವರ ಈ ಔಟ್‌ಫಿಟ್ ತೋರಿಸಿದೆ.
ಗ್ಲಾಮರಸ್ ಲುಕ್ ಅಲ್ಲದಿದ್ದರೂ ಈ ಸೀಸನ್‌ಗೆ ಹೇಳಿ ಮಾಡಿಸಿದ ಲುಕ್ ಇದು. ಅದನ್ನು ಮನೀಷಾ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.