ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಸುತ್ತುಕೊಂಡಂತಿರುವ ಮೃಣಾಲ್‌ ಠಾಕೂರ್‌ ಧರಿಸಿದ ಡ್ರೇಪ್ಡ್ ಮಿನಿ ಡ್ರೆಸ್‌

Mrunal Thakur: ಎದ್ದು ಕಾಣಿಸುವಂತಹ ಆರೆಂಜ್‌ ಶೇಡ್‌ನ ಡ್ರೇಪ್ಡ್‌ ಮಿನಿ ಡ್ರೆಸ್‌ ನಟಿ ಮೃಣಾಲ್‌ ಠಾಕೂರರನ್ನು ಆವರಿಸಿಕೊಂಡಿದೆ. ನೋಡಲು ಸುತ್ತುಕೊಂಡಂತಿರುವ ಈ ಫ್ಯಾಷನ್‌ವೇರ್‌ ಯಾವುದು? ಈ ಬಗ್ಗೆ ಫ್ಯಾಷನಿಸ್ಟಾಗಳು ಹೇಳುವುದೇನು? ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಮೃಣಾಲ್‌ ಠಾಕೂರ್‌, ಬಾಲಿವುಡ್‌ ನಟಿ
1/5

ಮೈಯನ್ನು ಸುತ್ತುಕೊಂಡಂತಿರುವ ಆರೆಂಜ್‌ ಕಲರ್‌ನ ಡ್ರೇಪ್ಡ್ ಮಿನಿ ಡ್ರೆಸ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌.

2/5

ಹೊದ್ದುಕೊಂಡಂತೆ ಕಾಣಿಸುವ ಮಿನಿ ಡ್ರೆಸ್‌

ಹೌದು, ನೋಡಿದರೇ ಕಣ್ಣಿಗೆ ಎದ್ದು ಕಾಣಿಸುವಂತಹ ಆರೆಂಜ್‌ ಶೇಡ್‌ನ ಡ್ರೇಪ್ಡ್‌ ಮಿನಿ ಡ್ರೆಸ್‌ನಲ್ಲಿ ನಟಿ ಮೃಣಾಲ್‌ ಠಾಕೂರ್‌ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಫ್ಯಾಷನ್‌ವೇರನ್ನೇ ಸುತ್ತುಕೊಂಡಂತೆ ಇಲ್ಲವೇ, ಹೊದ್ದುಕೊಂಡಂತೆ ಕಾಣಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಫ್ಯಾಷನ್‌ ಪ್ರಿಯರು.

3/5

ಮೃಣಾಲ್‌ ಠಾಕೂರ್‌ ಮಿನಿ ಡ್ರೆಸ್‌ ಡಿಟೇಲ್ಸ್

ಅಂದಹಾಗೆ, ಮೃಣಾಲ್‌ ಠಾಕೂರ್‌ ಧರಿಸಿರುವ ಈ ಡ್ರೇಪ್ಡ್ ಡ್ರೆಸ್‌, ದಿ ನ್ಯೂ ಅರೈವಲ್ಸ್ ಬ್ರ್ಯಾಂಡ್‌ನ ಉಡುಪಾಗಿದ್ದು, ಹೆಚ್ಚಾಗಿ ಶ್ರೀಮಂತರು ಹಾಗೂ ಸೆಲೆಬ್ರೆಟಿಗಳ ಧರಿಸುವ ಬ್ರ್ಯಾಂಡ್‌ ಎನ್ನಲಾಗಿದೆ. ಆರೆಂಜ್‌ ಎನ್ನುವುದಕ್ಕಿಂತಲೂ ಅಂಬೆರಿಕಾ ಕಲರ್‌ (ಇಂಗ್ಲೀಷ್‌ ಕಲರ್‌) ಎನ್ನಲಾಗುವ ಈ ವಿಶೇಷ ವರ್ಣದ ಉಡುಪಿನ ಸ್ಟೈಲಿಂಗನ್ನು ಖಾರ ಡ್ರೇಪ್ಡ್ ಮಿನಿ ಡ್ರೆಸ್‌ ವಿನ್ಯಾಸದಲ್ಲಿ ಮಾಡಲಾಗಿದೆ ಎಂದಿದ್ದಾರೆ ಸ್ಟೈಲಿಸ್ಟ್‌ಗಳು.

4/5

ಇದ್ಯಾವ ಬಗೆಯ ಡ್ರೇಪ್ಡ್ ಮಿನಿ ಡ್ರೆಸ್‌

ಸ್ಟ್ರಾಪ್‌ಲೆಸ್‌ ಕಾರ್ಸೆಟ್‌ನಂತೆ ವಿನ್ಯಾಸ ಮಾಡಿರುವ ಬಾಡಿಕಾನ್‌ ಡ್ರೇಪ್ಡ್ ಮಿನಿ ಡ್ರೆಸ್‌ ಇದಾಗಿದ್ದು, ಈ ಡ್ರೆಸ್‌ನ ಎಡಗಡೆ ದುಪಟ್ಟಾ ರೀತಿಯ ಒಂದು ಸೈಡ್‌ ಕೇಪ್‌ ನೀಡಲಾಗಿದೆ. ಕಂಪ್ಲೀಟ್‌ ವೆಸ್ಟರ್ನ್‌ ಶೈಲಿಯ ಔಟ್‌ಫಿಟ್‌ ಆಗಿರುವ ಈ ಉಡುಗೆಯನ್ನು ಮೃಣಾಲ್‌ ಕೂಡ ಅಷ್ಟೇ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

5/5

ಒಟ್ಟಿನಲ್ಲಿ, ಮೃಣಾಲ್‌ ಠಾಕೂರ್‌ ಅವರ ಈ ಉಡುಗೆ ಹೊಸ ಪ್ರಯೋಗ ಮಾಡ ಬಯಸುವ ಯುವತಿಯರಿಗೆ ಪ್ರೇರಣೆ ನೀಡುವಂತಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author