Star Fashion 2026: ನೋರಾ ಫತೇಹಿ ಡಾಲ್ ಲುಕ್‌ಗೆ ಫ್ಯಾನ್ಸ್ ಫಿದಾ!
ಬ್ಲ್ಯಾಕ್ & ವೈಟ್ ಮೆರ್ಮೈಡ್ ಸ್ಕರ್ಟ್‌ನಲ್ಲಿ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಥೇಟ್ ಡಾಲ್‌ನಂತೆಯೇ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್‌ಗೆ ಸಾಥ್ ನೀಡಿದ ಔಟ್‌ಫಿಟ್ ಯಾವುದು? ಅವರ ಲುಕ್ ಹೇಗಿದೆ? ಇಲ್ಲಿದೆ ಡಿಟೇಲ್ಸ್.
ಬ್ಯೂಟಿಫುಲ್ ನೋರಾ ಫತೇಹಿ ಡಾಲ್ ಲುಕ್ ಸದ್ಯ ಅಭಿಮಾನಿಗಳನ್ನು ಬರಸೆಳೆದಿದೆ.
ಎಂದಿನಂತೆ ಕೊಂಚವೂ ಎಕ್ಸ್‌ಪೋಸ್ ಮಾಡದೇ ಮೈ ತುಂಬಾ ಡಿಸೈನರ್‌ವೇರ್ ಧರಿಸಿ ಪೋಸ್ ನೀಡಿರುವ ನೋರಾ ಫತೇಹಿ, ಇವೆಂಟ್‌ವೊಂದರಲ್ಲಿ ಸ್ಪೆಷಲ್ ಬ್ಲ್ಯಾಕ್ & ವೈಟ್ ಮೆರ್ಮೈಡ್ ಸ್ಕರ್ಟ್ ಡ್ರೆಸ್ ಧರಿಸಿದ್ದು, ಥೇಟ್ ಡಾಲ್‌ನಂತೆಯೇ ಕಾಣಿಸಿಕೊಂಡಿದ್ದಾರೆ.
ನೋರಾ ಫತೇಹಿ ಫ್ಯಾಷನ್ ಪ್ರೇಮ
ಎಲ್ಲರಿಗೂ ಗೊತ್ತಿರುವಂತೆ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಸಖತ್ ಗ್ಲಾಮರಸ್ ಚೆಲುವೆ. ಏನೇ ಧರಿಸಿದರೂ ಅತ್ಯಾಕರ್ಷಕವಾಗಿ ಹಾಟ್ ಲುಕ್‌ನಲ್ಲಿ ಕಾಣುವ ನಟಿ. ನಟನೆಗಿಂತ ಹೆಚ್ಚಾಗಿ ಐಟಂ ಸಾಂಗ್‌ಗಳಲ್ಲೆ ಕಾಣಿಸಿಕೊಳ್ಳುವ ನೋರಾಗೆ ಜಾಗತೀಕ ಮಟ್ಟದಲ್ಲಿ ಫ್ಯಾನ್ಸ್‌ಗಳಿದ್ದಾರೆ. ಆ ಮಟ್ಟಿಗೆ ಅವರ ಬಾಡಿ ಮಾಸ್ ಇಂಡೆಕ್ಸ್ ಕಾಪಾಡಿಕೊಂಡು ಬಂದಿದ್ದಾರೆ. ಫಿಟ್ನೆಸ್ ಹಾಗೂ ಸೌಂದರ್ಯ ಅವರ ಅಭಿಮಾನಿಗಳನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಡಾಲ್ ಲುಕ್ ನೀಡಿದ ಡ್ರೆಸ್
ಅಂದಹಾಗೆ, ನೋರಾಗೆ ಡಾಲ್ ಲುಕ್ ನೀಡಿದ ಈ ಟೂ ಪೀಸ್ ಡ್ರೆಸ್ ಬ್ಲ್ಯಾಕ್ ಮತ್ತು ವೈಟ್ ಕಲರ್‌ನದ್ದಾಗಿದೆ. ಟಾಪ್ ಶ್ವೇತ ವರ್ಣದ್ದಾಗಿದ್ದು, ಹೈ ನೆಕ್‌ಲೈನ್ ಹಾಗೂ ಬಲೂನ್ ಸ್ಲೀವ್ ಹೊಂದಿದೆ. ಇನ್ನು, ಇದಕ್ಕೆ ಧರಿಸಿರುವ ಮೆರ್ಮೈಡ್ ಬ್ಲ್ಯಾಕ್ ಕಲರ್‌ನ ಸ್ಕರ್ಟ್ ಇಡೀ ಬಾಡಿ ಶೇಪನ್ನು ಹೈಲೈಟ್ ಮಾಡಿದೆ ಎನ್ನುತ್ತಾರೆ.
ನೋರಾ ಮೇಕೋವರ್
ನೋರಾ ಯಾವತ್ತೂ ಓವರ್ ಮೇಕೋವರ್ ಮಾಡಿಕೊಂಡವರಲ್ಲ! ಎಲ್ಲವೂ ಸಿಂಪಲ್! ಆಕ್ಸೆಸರೀಸ್‌ನಿಂದಿಡಿದು ಹೇರ್‌ಸ್ಟೈಲ್ ಎಲ್ಲವೂ ಸಿಂಪಲ್. ಅವರ ಈ ಸಿಂಪಲ್ ಮೇಕೋವರ್ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಡಾಲ್‌ನಂತೆ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.