Star Fashion 2026: ಗೋಲ್ಡ್ ಸೀರೆಯಲ್ಲಿ ಬಂಗಾರದ ಬೊಂಬೆಯಾದ ರಕುಲ್ ಪ್ರೀತ್ ಸಿಂಗ್
Rakul Preet Singh: ಸಿನಿಮಾ ಇವೆಂಟ್‌ಗಾಗಿ ನಟಿ ರಕುಲ್ ಪ್ರೀತ್ ಸಿಂಗ್ ಉಟ್ಟಿದ್ದ ಗೋಲ್ಡ್ ಟಿಶ್ಯೂ ಬ್ರೋಕೆಡ್ ಸೀರೆ ಸದ್ಯ ಜೆನ್ ಜಿ ಯುವತಿಯರನ್ನು ಸೆಳೆದಿದೆ. ಬಂಗಾರದ ಬೊಂಬೆಯಂತೆ ಬಿಂಬಿಸಿದೆ. ಇದ್ಯಾವ ಬಗೆಯ ಸೀರೆ? ಸೀರೆ ಎಕ್ಸ್‌ಪರ್ಟ್ಸ್ ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ಬಂಗಾರದ ಬೊಂಬೆಯಂತೆ ಕಾಣಿಸುತ್ತಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್‌ರ ಗೋಲ್ಡ್ ಟಿಶ್ಯೂ ಸೀರೆ ಸದ್ಯ ಸೀರೆ ಪ್ರಿಯ ಜೆನ್ ಜಿ ಯುವತಿಯರನ್ನು ಆಕರ್ಷಿಸಿದೆ.
ಜೆನ್ ಜಿ ಸೀರೆ ಪ್ರಿಯರನ್ನು ಸೆಳೆದ ರಕುಲ್ ಸೀರೆ
ಹೌದು, ನೋಡಲು ಥೇಟ್ ಬಂಗಾರದ ಗೊಂಬೆಯಂತೆ ಕಾಣಿಸಿಕೊಂಡಿರುವ ರಕುಲ್ ಈ ಸೀರೆಯನ್ನು ರಾಮಾಯಣ್ ಸಿನಿಮಾದ ಇವೆಂಟ್‌ನಲ್ಲಿ ಉಟ್ಟುಕೊಂಡಿದ್ದರು. ಅವರ ಈ ಸೀರೆ ಲುಕ್ ಕೇವಲ ಇವೆಂಟ್‌ನಲ್ಲಿ ಮಾತ್ರವಲ್ಲ, ಸೋಷಿಯಲ್ ಮೀಡಿಯಾದ ಸೀರೆ ಪ್ರಿಯ ಜೆನ್ ಜಿ ಯುವತಿಯರನ್ನು ಆಕರ್ಷಿಸಿದೆ.
ರಕುಲ್ ಸೀರೆಯ ಸ್ಪೆಷಾಲಿಟಿ
ಅಂದಹಾಗೆ, ನಟಿ ರಕುಲ್ ಪ್ರೀತ್ ಉಟ್ಟಿರುವ ಈ ಸೀರೆ ಲಕ್ಷಗಟ್ಟಲೇ ಬೆಲೆಬಾಳುವುದ್ದಾಗಿದ್ದೂ ಎಲ್ಲಿಯೂ ಈ ಸೀರೆಯ ಬೆಲೆ ಹೇಳಿಲ್ಲ! ಇದೊಂದು ಗೋಲ್ಡ್ ಶೇಡ್‌ನ ಪ್ಯೂರ್ ಬ್ರೋಕೆಡ್ ಟಿಶ್ಯೂ ಸೀರೆಯಾಗಿದೆ. ಜರ್ದೋಸಿ ಎಂಬ್ರಾಯ್ಡರಿ ಹಾಗೂ ಜಾಲರಿಯಂತಹ ವಿನ್ಯಾಸದ ಮಿರರ್ ಬ್ಲೌಸನ್ನು ಹೊಂದಿದೆ.
ಸೀರೆಯನ್ನು ಹೈಲೈಟ್ ಮಾಡಿರುವ ಆಕರ್ಷಕ ಬ್ಲೌಸ್
ಇನ್ನು, ಇಡೀ ಸೀರೆಯನ್ನು ಹೈಲೈಟ್ ಮಾಡಿರುವುದು ರಕುಲ್ ಧರಿಸಿರುವ ಮಿರರ್ ಬ್ಲೌಸ್. ಹ್ಯಾಂಡ್ ಎಂಬ್ರಾಯ್ಡರಿ ಹೊಂದಿರುವ ಈ ಬ್ಲೌಸ್ ಜಾಲರಿಯಂತಹ ವಿನ್ಯಾಸದ ಜೊತೆಗೆ ಮಿರರ್‌ಗಳನ್ನು ಹೊಂದಿದೆ. ಶೋಲ್ಡರ್‌ನಿಂದ ಡಿಸೈನರ್ ಫ್ರಿಂಜ್ ವಿನ್ಯಾಸವನ್ನು ಒಳಗೊಂಡಿದೆ ಎಂದು ವಿವರಿಸುತ್ತಾರೆ ಸೀರೆ ಎಕ್ಸ್‌ಪರ್ಟ್ಸ್.
ರಕುಲ್ ಸ್ಟೈಲಿಂಗ್ ಕಮಾಲ್
ರಕುಲ್‌ರ ಈ ಲುಕ್‌ಗೆ ಆಕಾಂಕ್ಷ ಹಾಗೂ ಆಮಿ ಪಟೇಲ್ ಸ್ಟೈಲಿಂಗ್ ಸಾಥ್ ನೀಡಿದೆ. ಅವರು ಧರಿಸಿರುವ ಒವರ್‌ಸೈಝ್ ಚಾಂದ್‌ಬಾಲಿ ಡಿಸೈನ್‌ನ ಜುಮ್ಕಾ ಹಾಗೂ ಕೈಬಳೆಗಳು ಅವರ ಇಡೀ ಲುಕ್ ಹೈಲೈಟ್ ಮಾಡಿವೆ. ರಕುಲ್‌ರನ್ನು ಗ್ರ್ಯಾಂಡ್ ಆಗಿ ಬಿಂಬಿಸಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಒಟ್ಟಾರೆ, ರಕುಲ್‌ರ ಈ ಗೋಲ್ಡ್ ಲುಕ್‌ಗೆ ಜೆನ್ ಜಿ ಫಾಲೋವರ್ಸ್ ಕೂಡ ಫಿದಾ ಆಗಿದ್ದಾರೆ.