ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಜಾಕೆಟ್‌ ಲೆಹೆಂಗಾದಲ್ಲಿ ವಿಂಟರ್‌ ಸೀಸನ್‌ಗೆ ಸೈ ಎಂದ ರಿಯಾ ಚರ್ಕವರ್ತಿ

Winter Season Fashion: ಬಾಲಿವುಡ್‌ ನಟಿ ರಿಯಾ ಚರ್ಕವರ್ತಿ ಧರಿಸಿದ ವೈಟ್‌ ಕಲರ್‌ನ ಜಾಕೆಟ್‌ ಲೆಹೆಂಗಾ ಯುವತಿಯರಿಗೆ ಪ್ರಿಯವಾಗಿದೆ. ವಿಂಟರ್‌ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಕೃಪೆ: ರಿಯಾ ಚರ್ಕವರ್ತಿ, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ರಿಯಾ ಚರ್ಕವರ್ತಿ ಶ್ವೇತ ವರ್ಣದ ಜಾಕೆಟ್‌ ಲೆಹೆಂಗಾ ಧರಿಸಿ ವಿಂಟರ್‌ ಸೀಸನ್‌ ಎಥ್ನಿಕ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ.

2/5

ಸೀಸನ್‌ ಎಥ್ನಿಕ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌

ವಿಂಟರ್‌ ಸೀಸನ್‌ಗೆ ಹೊಂದುವಂತಹ ಅವರ ಈ ವೈಟ್‌ ಜಾಕೆಟ್‌ ಲೆಹೆಂಗಾ ಈ ಸೀಸನ್‌ ಎಥ್ನಿಕ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನ ಟಾಪ್‌ ಲಿಸ್ಟ್‌ನಲ್ಲಿದೆ. ವಿಂಟರ್‌ ಸೀಸನ್‌ನ ಕೊನೆಯ ಫ್ಯಾಷನ್‌ ಕೆಟಗರಿಗೆ ಸೇರಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ರಿಯಾ ಫ್ಯಾಷನ್‌ ಶೂಟ್‌

ಅಂದಹಾಗೆ, ಈಗಾಗಲೇ ಬೆರಳೆಣಿಕೆ ಬಾಲಿವುಡ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಿಯಾ, ಈ ಹಿಂದೆ ದಿವಂಗತ ನಟ ಸುಶಾಂತ್‌ ಹೆಸರಿನೊಂದಿಗೆ ಥಳುಕು ಹಾಕಿಕೊಂಡ್ಡು ಕಾಂಟ್ರವರ್ಸಿಗೆ ಸಿಲುಕಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಇವೆಲ್ಲದರ ಮಧ್ಯೆ ಒಂದಿಷ್ಟು ವರ್ಷಗಳ ಕಾಲ ತೆರೆಮರೆಯಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಡೆ ಕೊಂಚ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಟ್ರಾವೆಲ್‌ ಹಾಗೂ ಫ್ಯಾಷನ್‌ ಫೋಟೋ ಶೂಟ್‌ಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲೂ ಕೂಡ ಸಕ್ರಿಯರಾಗಿದ್ದಾರೆ.

4/5

ರಿಯಾ ವೈಟ್‌ ಜಾಕೆಟ್‌ ಲೆಹೆಂಗಾ ವಿಶೇ‍ಷತೆ

ಇನ್ನು, ರಿಯಾ ಧರಿಸಿರುವ ವೈಟ್‌ ಜಾಕೆಟ್‌ ಲೆಹೆಂಗಾ ಮಾನೋಕ್ರೋಮ್‌ ಪ್ರಿಂಟ್ಸ್ ಹೊರತುಪಡಿಸಿದಲ್ಲಿ ಹೆಚ್ಚೇನೂ ಡಿಸೈನ್‌ ಹೊಂದಿಲ್ಲ. ಟ್ವಿರ್ಲಿಂಗ್‌ ಮಾಡಿದರೇ ಮನಮೋಹಕವಾಗಿ ಕಾಣಿಸುವಂತಹ ಡಿಸೈನ್‌ ಹೊಂದಿದೆ.

5/5

ಅಲ್ಲದೇ ಸೈಡಿನಲ್ಲಿ ಕಟ್ಟುವಂತಹ ಟ್ಯಾಸೆಲ್ಸ್ ಹೊಂದಿದೆ. ಬಿಕಿನಿ ಸ್ಟೈಲ್‌ ಬ್ಲೌಸ್‌ ಅದರ ಮೇಲೊಂದು ಜಾಕೆಟ್‌ ಈ ವಿಂಟರ್‌ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ. ಇದು ರಿಯಾರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author