Star Fashion 2026: ಶಿಲ್ಪಾ ಶೆಟ್ಟಿಯ ಪಿಂಕ್ ಪಲೆರ್ಮೊ ಜಂಪ್‌ಸೂಟ್‌ಗೆ ಫ್ಯಾನ್ಸ್ ಫಿದಾ
Shilpa Shetty: ಬಬ್ಬಲ್ ಗಮ್ ಪಿಂಕ್ ಕಲರ್‌ನ ಸ್ಯಾಟಿನ್ ಪಲೆರ್ಮೊ ಜಂಪ್‌ಸೂಟ್‌ನಲ್ಲಿ ಬಾಲಿವುಡ್ ನಟಿ ಹಾಗೂ ಫಿಟ್ನೆಸ್ ದಿವಾ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನೋಡಲು ಥೇಟ್ ಕೋ ಆರ್ಡ್ ಸೆಟ್‌ನಂತೆ ಕಾಣಿಸುವ ಈ ಡ್ರೆಸ್ ಸದ್ಯ ಯುವತಿಯರನ್ನು ಆಕರ್ಷಿಸಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪಿಂಕ್ ಕಲರ್‌ನ ಪಲೆರ್ಮೊ ಜಂಪ್‌ಸೂಟ್‌ಗೆ ಫ್ಯಾಷನ್ ಪ್ರಿಯರು ಹಾಗೂ ಫ್ಯಾನ್ಸ್ ಫಿದಾ ಆಗಿದ್ದಾರೆ. ನೋಡಲು ಥೇಟ್ ಕೋ ಆರ್ಡ್ ಸೆಟ್‌ನಂತೆ ಕಾಣಿಸುವ ಈ ಡ್ರೆಸ್ ಸದ್ಯ ಯುವತಿಯರನ್ನು ಆಕರ್ಷಿಸಿದೆ.
ಪಿಂಕ್ ಸ್ಯಾಟಿನ್ ಕೋ ಆರ್ಡ್ ಸೆಟ್
ಬಬ್ಬಲ್ ಗಮ್ ಪಿಂಕ್ ಶೇಡ್‌ನ ಈ ವೈಬ್ರೆಂಟ್ ಔಟ್‌ಫಿಟ್ ನೋಡಲು ಕೋ ಆರ್ಡ್ ಸೆಟ್‌ನಂತೆ ಕಂಡರೂ ಇದು ಅದಲ್ಲ! ಹಾಲ್ಟರ್ ನೆಕ್‌ಲೈನ್ ಹೊಂದಿರುವ ಟಾಪ್ ಅದರೊಂದಿಗೆ ಹೊಂದಿಕೊಂಡಂತೆ ಕಾಣಿಸುವ ವೈಡ್ ಲೆಗ್ ಪ್ಯಾಂಟ್, ಈ ಜಂಪ್‌ಸೂಟ್ ಡಿಸೈನ್‌ನ ವಿಶೇಷತೆ ಎನ್ನಬಹುದು.
ಶಿಲ್ಪಾ ಶೆಟ್ಟಿಗೆ ಪರ್ಫೆಕ್ಟ್ ಲುಕ್ ನೀಡಿದ ಡ್ರೆಸ್
ಈ ಡ್ರೆಸ್ ಶಿಲ್ಪಾ ಶೆಟ್ಟಿಯ ಬಾಡಿಮಾಸ್ ಇಂಡೆಕ್ಸ್ಗೆ ಪರ್ಫೆಕ್ಟಾಗಿ ಮ್ಯಾಚ್ ಆಗಿದೆ ಎನ್ನುವ ಫ್ಯಾಷನ್ ವಿಮರ್ಶಕಿ ಮಿಂಚು ಪ್ರಕಾರ, ಅವರ ಫಿಟ್ನೆಸ್ ಹೊಂದಿದ ದೇಹವನ್ನು ಈ ಔಟ್‌ಫಿಟ್ ಮತ್ತಷ್ಟು ಹೈಲೈಟ್ ಮಾಡಿದೆ ಎನ್ನುತ್ತಾರೆ.
ಲೈಟ್‌ವೈಟ್ ಡ್ರೆಸ್
ಸ್ಯಾಟಿನ್ ಫ್ಯಾಬ್ರಿಕ್‌ನಿಂದ ಸಿದ್ಧಗೊಂಡಿರುವುದರಿಂದ ಈ ಉಡುಗೆ ಲೈಟ್‌ವೈಟ್ ಆಗಿದೆ. ಧರಿಸಿದಾಗ ಹೆಚ್ಚು ಹೆವ್ವಿ ಎಂದೆನಿಸುವುದಿಲ್ಲ! ಜೊತೆಗೆ ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಹಾಗಾಗಿ ಯುವತಿಯರು ಈಗಾಗಲೇ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಹುಡುಕುವುದೂ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಆನ್‌ಲೈನ್ ಶಾಪ್‌ಗಳಲ್ಲಿ ರಾರಾಜಿಸುತ್ತಿರುವ ಔಟ್‌ಫಿಟ್ಸ್ :
ಶಿಲ್ಪಾ ಶೆಟ್ಟಿ ಅವರಿಗೆ ಮತ್ತಷ್ಟು ಯಂಗ್ ಲುಕ್ ನೀಡಿರುವ ಈ ಡ್ರೆಸ್ ಕೇವಲ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರವಲ್ಲ, ಲೋಕಲ್ ರಿಟೇಲ್ ಶಾಪ್‌ಗಳಲ್ಲಿಯೂ ಬಿಡುಗಡೆಗೊಂಡು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.