Star Fashion 2026: ಸಂಚಲನ ಮೂಡಿಸಿದ ಊರ್ಮಿಳಾ ಮಾತೊಂಡ್ಕರ್ ಗೋಲ್ಡನ್ ಲೆಹೆಂಗಾ
ಊರ್ಮಿಳಾ ಮಾತೊಂಡ್ಕರ್ ಧರಿಸಿದ್ದ ಗೋಲ್ಡನ್ ಕೇಪ್ ಲೆಹೆಂಗಾ ಇದೀಗ ಲೆಹೆಂಗಾ ಪ್ರಿಯರನ್ನು ಸೆಳೆದಿದೆ. ಎಥ್ನಿಕ್ವೇರ್ ಕೆಟಗರಿಯ ಹಿಟ್ ಲಿಸ್ಟ್ ಸೇರಿದೆ. ಇದ್ಯಾವ ಬಗೆಯ ಲೆಹೆಂಗಾ? ಊರ್ಮಿಳಾ ಲುಕ್ ಹೇಗಿದೆ? ಈ ಕುರಿತ ವಿವರ ಇಲ್ಲಿದೆ.
ಚಿತ್ರಗಳು: ಊರ್ಮಿಳಾ ಮಾತೊಂಡ್ಕರ್, ಬಾಲಿವುಡ್ ನಟಿ., ಫೋಟೋಗ್ರಫಿ: ರಫಿಯಾಲ ಫರ್ನೆಂಡೋ -
ಒಂದು ಕಾಲದಲ್ಲಿ ಬಾಲಿವುಡ್ನ ಹಾಟ್ ತಾರೆಯೆಂದೇ ಖ್ಯಾತಿ ಗಳಿಸಿದ್ದ ಊರ್ಮಿಳಾ ಮಾತೊಂಡ್ಕರ್ ಗೋಲ್ಡನ್ ಲೆಹೆಂಗಾ ಇದೀಗ ಫ್ಯಾಷನ್ಲೋಕದಲ್ಲಿ ಸಂಚಲನ ಮೂಡಿಸಿದೆ. ಹೌದು, ನಟಿ ಊರ್ಮಿಳಾ ಮಾತೊಂಡ್ಕರ್ ಧರಿಸಿರುವ ಈ ಕೇಪ್ ವಿನ್ಯಾಸದ ಗೋಲ್ಡನ್ ಲೆಹೆಂಗಾ ಫ್ಯಾಷನ್ ಪ್ರಿಯರನ್ನು ಅದರಲ್ಲೂ ಸದಾ ಲೆಹೆಂಗಾ ಧರಿಸಲು ಬಯಸುವ ಮಾನಿನಿಯರನ್ನು ಸೆಳೆದಿದೆ. ಸದ್ಯ ಎಥ್ನಿಕ್ವೇರ್ ಕೆಟಗರಿಯ ಹಿಟ್ ಲಿಸ್ಟ್ ಸೇರಿದೆ.
ಸೀಸನ್ ಎಥ್ನಿಕ್ವೇರ್ ಲಿಸ್ಟ್ನಲ್ಲಿ ಲೆಹೆಂಗಾ
ಅಂದಹಾಗೆ, ನಟಿ ಊರ್ಮಿಳಾ ಅಷ್ಟಾಗಿ ಎಥ್ನಿಕ್ವೇರ್ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಕೆಲವು ಫ್ಯಾಷನ್ ಶೂಟ್ಗಳಲ್ಲಿ ಈ ಶೈಲಿಯ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಧರಿಸುವ ಒಂದೊಂದು ಎಥ್ನಿಕ್ ಉಡುಗೆಯು ಕೂಡ ಟ್ರೆಂಡ್ ಲಿಸ್ಟ್ನಲ್ಲಿ ಸೇರಿದೆ. ಇದೀಗ ಅವರು ಧರಿಸಿರುವ ಕನೆಕ್ಟೆಡ್ ಫಾರ್ ಫ್ಯಾಷನ್ ಬ್ರಾಂಡ್ನ ಈ ಲೆಹೆಂಗಾ ವಿನ್ಯಾಸ ಮಾನಿನಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕೊಂಚ ಕುಳ್ಳಗಿರುವವರು ಕೂಡ ಈ ರೀತಿಯ ಲೆಹೆಂಗಾದಲ್ಲಿ ಆಕರ್ಷಕವಾಗಿ ಕಾಣಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಗೋಲ್ಡನ್ ಕೇಪ್ ಲೆಹೆಂಗಾ ವಿಶೇಷತೆ
ಊರ್ಮಿಳಾ ಧರಿಸಿರುವ ಈ ಲೆಹೆಂಗಾ ತಕ್ಷಣಕ್ಕೆ ನೋಡಲು ಇತರೇ ಲೆಹೆಂಗಾಗಳಂತೆಯೇ ಕಾಣಿಸುತ್ತದೆ. ಆದರೆ, ಈ ಲೆಹೆಂಗಾವು ಗೌನ್ಗಿರುವ ಕೇಪ್ನಂತೆ ಬ್ಲೌಸ್ನೊಂದಿಗೆ ಕೇಪ್ ವಿನ್ಯಾಸ ಒಳಗೊಂಡಿದೆ. ಇದು ಈ ಲೆಹೆಂಗಾ ವಿಶೇಷತೆ ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ಸ್.
ಬ್ಲ್ಯಾಕ್ ಬೀಡ್ಸ್ ಡಿಸೈನ್
ಲೆಹೆಂಗಾ ಬ್ಲೌಸ್ ಹಾಗೂ ಲಂಗದ ಮೇಲಿರುವ ಬ್ಲ್ಯಾಕ್ ಬೀಡ್ಸ್ನ ವರ್ಕ್ ಈ ಶೇಡ್ಗೆ ಮ್ಯಾಚ್ ಆಗುವಂತಿದೆ. ಇದು ಕೂಡ ಲೆಹೆಂಗಾ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗಿದೆ ಎಂಬುದು ಫ್ಯಾಷನ್ ಎಕ್ಸ್ಪರ್ಟ್ಗಳ ಅಭಿಪ್ರಾಯವಾಗಿದೆ.
ಊರ್ಮಿಳಾ ಮೇಕೋವರ್
ಇನ್ನು, ಊರ್ಮಿಳಾ ಅವರ ಮೇಕೋವರ್ ಕೂಡ ಅಷ್ಟೇ ಎಲಿಗೆಂಟ್ ಆಗಿದೆ. ಜತೆಗೆ ಎದ್ದು ಕಾಣುವಂತಿಲ್ಲ. ನೋಡಲು ಮನಮೋಹಕವಾಗಿದೆ ಎನ್ನುತ್ತಾರೆ ಎಕ್ಸ್ಪರ್ಟ್ಸ್.