Star Fashion 2026: ಸಾನ್ಯಾ ಮಲ್ಹೋತ್ರಾ ಮಿಕ್ಸ್ ಮ್ಯಾಚ್ ಮಿಡಿ ಸ್ಕರ್ಟ್‌ಗೆ ಬೇಡಿಕೆ
Sanya Malhotra: ನಟಿ ಸಾನ್ಯಾ ಮಲ್ಹೋತ್ರಾ ಧರಿಸಿರುವ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನ ಮಿಡಿ ಸ್ಕರ್ಟ್ ಈ ಸೀಸನ್‌ನಲ್ಲಿ ಈ ಜನರೇಷನ್ ಯುವತಿಯರನ್ನು ಮಾತ್ರವಲ್ಲ, ಸ್ಕರ್ಟ್ ಪ್ರಿಯ ನಾರಿಯರನ್ನು ಸವಾರಿ ಮಾಡತೊಡಗಿದೆ. ಬೇಡಿಕೆ ಹೆಚ್ಚಿಸಿಕೊಂಡಿದೆ. ಈ ಕುರಿತ ವಿವರ ಇಲ್ಲಿದೆ.
ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಧರಿಸಿರುವ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನ ಟ್ರೆಂಡಿಯಾಗಿರುವ ಮಿಡಿ ಸ್ಕರ್ಟ್ ಸದ್ಯ ಜೆನ್ ಹುಡುಗಿಯರನ್ನು ಮಾತ್ರವಲ್ಲ, ಇತರೇ ನಾರಿಯರನ್ನು ಸವಾರಿ ಮಾಡತೊಡಗಿದೆ. ಯಂಗ್ ಲುಕ್ ಬಯಸುವವರನ್ನು ಸವಾರಿ ಮಾಡತೊಡಗಿದೆ. ಪರಿಣಾಮ, ಬೇಡಿಕೆ ಹೆಚ್ಚಿಸಿಕೊಂಡಿದೆ.
ಸಾನ್ಯಾ ಅಂದ ಹೆಚ್ಚಿಸಿದ ಮಿಡಿ ಸ್ಕರ್ಟ್
ಸಾನ್ಯಾ ಧರಿಸಿರುವ ಈ ಮಿಡಿ ಸ್ಕರ್ಟ್ ರೆಟ್ರೊ ಲುಕ್ ನೀಡುವಂತದ್ದಾಗಿದೆ. ನೋಡಲು ತಕ್ಷಣಕ್ಕೆ ಇದ್ಯಾವ ಹೊಸ ಡಿಸೈನ್‌ನದ್ದು ಎಂದೆನಿಸದಿದ್ದರೂ, ಸದ್ಯ ಇರುವ ಮಿಡಿ ಸ್ಕರ್ಟ್ ಕಾನ್ಸೆಪ್ಟ್‌ಗಿಂತ ಭಿನ್ನವಾಗಿದೆ ಹಾಗೂ ಅಂದವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸಾನ್ಯಾ ಮಿಡಿ ಸ್ಕರ್ಟ್ ಸ್ಪೆಷಾಲಿಟಿ
ಅಂದಹಾಗೆ, ಸಾನ್ಯಾ ಧರಿಸಿರುವ ಈ ಮಿಡಿ ಸ್ಕರ್ಟ್‌ನ ಟಾಪ್ ಐವರಿ ಸ್ಟ್ರೈಪ್ಸ್‌ನ ಅರ್ಗಾನ್ಜಾ ಫ್ಯಾಬ್ರಿಕ್‌ನದ್ದಾಗಿದ್ದು, ವಿ ನೆಕ್‌ಲೈನ್ ವಿನ್ಯಾಸದಿಂದ ಕ್ಲಾಸಿ ಲುಕ್ ಹೊಂದಿದೆ.
ಇನ್ನು, ಈ ಟಾಪ್‌ಗೆ ಧರಿಸಿರುವ ಸ್ಕರ್ಟ್ ನೆವ್ವಿ ವರ್ಣದ ಹೈ ವೇಸ್ಟ್ ಲೈನ್ ಡಿಸೈನ್‌ದ್ದಾಗಿದ್ದು, ಡ್ರೇಪ್ ಶೈಲಿಯ ಪ್ಲೀಟ್ಸ್ ಹೊಂದಿದೆ.
ವೆಸ್ಟರ್ನ್ ಸ್ಟೈಲ್‌ನ ಮಿಡಿ ಸ್ಕರ್ಟ್
ಕಂಪ್ಲೀಟ್ ವೆಸ್ಟರ್ನ್ ಶೈಲಿಯನ್ನು ಹೊಂದಿರುವ ಸಾನ್ಯಾರ ಈ ಮಿಕ್ಸ್ ಮ್ಯಾಚ್‌ನ ಮಿಡಿ ಸ್ಕರ್ಟ್ ಅವರ ಲುಕ್ಕನ್ನು ಹೈಲೈಟ್ ಮಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸಾನ್ಯಾ ಮೇಕೋವರ್
ಇವೆಲ್ಲದರ ಜತೆಗೆ ಅವರ ಕರ್ಲಿ ಹೇರ್‌ಸ್ಟೈಲ್ ಹಾಗೂ ಸಿಂಪಲ್ ಸ್ಟಡ್ಸ್, ಸನ್‌ಗ್ಲಾಸ್ ಬಿಂದಾಸ್ ಹುಡುಗಿಯಂತೆ ಅವರನ್ನು ಪ್ರತಿಬಿಂಬಿಸಿದೆ. ಒಟ್ಟಾರೆ, ಸಾನ್ಯಾರ ಈ ಮೇಕೋವರ್ ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.