ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಯುವತಿಯರನ್ನು ಸೆಳೆದ ಪೆಪ್ಲಮ್‌ ಕೋ ಆರ್ಡ್ ಸೆಟ್‌ ಸೀಕ್ರೆಟ್ಸ್

ಡೆನಿಮ್‌ ಪೆಪ್ಲಮ್‌ ಕೋ ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ಜೆನ್‌ ಜಿ ಯುವತಿಯರನ್ನು ಸವಾರಿ ಮಾಡತೊಡಗಿವೆ. ಸದ್ಯ ಹುಡುಗಿಯರ ಫೇವರೇಟ್‌ ಲಿಸ್ಟ್‌ಗೆ ಸೇರಿರುವ ಈ ಔಟ್‌ಫಿಟ್‌ ಬಗ್ಗೆ ಸ್ಟೈಲಿಸ್ಟ್‌ಗಳು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ತಾಪ್ಸಿ ಪನ್ನು, ಬಾಲಿವುಡ್‌ ನಟಿ
1/5

ಡೆನಿಮ್‌ನ ಪೆಪ್ಲಮ್‌ ಕೋ ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ಯುವತಿಯರನ್ನು ಸವಾರಿ ಮಾಡತೊಡಗಿವೆ.

2/5

ತಾಪ್ಸಿ ಪನ್ನು ಧರಿಸಿದ ಆಕರ್ಷಕ ಪೆಪ್ಲಮ್‌ ಕೋ ಆರ್ಡ್

ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ತಾಪ್ಸಿ ಪನ್ನು, ಇತ್ತೀಚೆಗೆ ಧರಿಸಿದ್ಧ ಡೆನಿಮ್‌ ಪೆಪ್ಲಮ್‌ ಕೋ ಆರ್ಡ್ ಸೆಟ್‌, ಕಾಲೇಜು ಯುವತಿಯರನ್ನು ಆಕರ್ಷಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇದೇ ಶೈಲಿಯ ನಾನಾ ಶೇಡ್‌ನ ಡೆನಿಮ್‌ ಪೆಪ್ಲಮ್‌ ಕೋ ಆರ್ಡ್ ಸೆಟ್‌ಗಳು ಎಲ್ಲೆಡೆ ರಾರಾಜಿಸತೊಡಗಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

3/5

ಏನಿದು ಪೆಪ್ಲಮ್‌ ಕೋ ಆರ್ಡ್ ಸೆಟ್ಸ್

ಇನ್ನು, ಎಲ್ಲರಿಗೂ ತಿಳಿದಿರುವಂತೆ, ಪೆಪ್ಲಮ್‌ ಡಿಸೈನನ್ನು ಟಾಪ್‌ಗಳಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಅದು ಯಾವುದೇ ಉಡುಗೆಯ ಟಾಪ್‌ ಆಗಬಹುದು ಅಥವಾ ಬ್ಲೌಸ್‌ ಆಗಬಹುದು. ಮೇಲಿನಿಂದ ಟೈಟಾಗಿರುವ ಟಾಪ್‌, ಸೊಂಟದ ಕೆಳಗೆ ಫ್ರಿಲ್‌ನಿಂದ ಕೂಡಿರುತ್ತದೆ. ಇದನ್ನು ಪೆಪ್ಲಮ್‌ ಎನ್ನಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

4/5

ಸೀಸನ್‌ಗೆ ತಕ್ಕ ಪೆಪ್ಲಮ್‌ ಕೋ ಆರ್ಡ್ ಸೆಟ್‌

ಇನ್ನು, ಈ ಸಮ್ಮರ್‌ ಸೀಸನ್‌ಗೆ ಹೊಂದುವಂತೆ ಇವುಗಳ ನೆಕ್‌ಲೈನ್‌ ಅಗಲವಾಗಿ ಬಿಡುಗಡೆಗೊಂಡಿವೆ. ಟಾಪ್‌ ಹೊರತುಪಡಿಸಿದರೇ, ನ್ಯಾರೋ ಪ್ಯಾಂಟ್‌ಗಳು, ಸ್ಟ್ರೇಟ್‌ ಕಟ್‌ ಪ್ಯಾಂಟ್‌ಗಳು ಇವುಗಳ ಜತೆಯಾಗಿವೆ. ಪ್ಯಾಂಟ್‌ಗಳು ಟೈಟಾಗಿರದ ಕಾರಣ, ಈ ಸೀಸನ್‌ಗೆ ಸೂಕ್ತವಾಗಿವೆ. ನೋಡಲು ಮಾತ್ರವಲ್ಲ, ಧರಿಸಿದಾಗ ಗಾಳಿಯಾಡುತ್ತವೆ. ಕಂಫರ್ಟಬಲ್‌ ಫೀಲ್‌ ನೀಡುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್‌.

5/5

ಪೆಪ್ಲಮ್‌ ಆಯ್ಕೆಗೆ ಸಿಂಪಲ್‌ ಟಿಪ್ಸ್

  • ಪರ್ಸನಾಲಿಟಿಗೆ ತಕ್ಕಂತೆ ಪೆಪ್ಲಮ್‌ ಕೋ ಆರ್ಡ್ ಸೆಟ್‌ ಧರಿಸಿ.
  • ಕುಳ್ಳಗಿರುವವರಿಗೆ ಇವು ನಾಟ್‌ ಓಕೆ.
  • ಆದಷ್ಟೂ ಫಿಟ್‌ ಆಗಿರುವಂತಹ ಪೆಪ್ಲಮ್‌ ಟಾಪ್‌ ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author