ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಶರಾರದಲ್ಲಿ ಊರ್ಮಿಳಾ ಮಾತೋಂಡ್ಕರ್‌ರಂತೆ ಕಾಣಿಸಿಕೊಳ್ಳಲು ಇಲ್ಲಿವೆ ಟಿಪ್ಸ್

Urmila Matondkar: ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಧರಿಸಿರುವ ಸನ್‌ ಕಲರ್‌ನ ಶರಾರ ಸೂಟ್‌ ಈ ಸೀಸನ್‌ನ ವೆಡ್ಡಿಂಗ್‌ ಸೀಸನ್‌ ಲಿಸ್ಟ್‌ಗೆ ಸೇರಿದೆ. ಈ ಔಟ್‌ಫಿಟ್‌ನಲ್ಲಿ ಅವರಂತೆಯೇ ಆಕರ್ಷಕವಾಗಿ ಕಾಣಿಸುವುದು ಹೇಗೆ? ಇಲ್ಲಿವೆ ಟಿಪ್ಸ್.

ಚಿತ್ರಗಳು: ಊರ್ಮಿಳಾ ಮಾತೋಂಡ್ಕರ್‌, ಬಾಲಿವುಡ್‌ ನಟಿ
1/5

ಸಮ್ಮರ್‌ ಸೀಸನ್‌ನ ವೆಡ್ಡಿಂಗ್‌ ಫ್ಯಾಷನ್‌ವೇರ್‌ಗಳ ಲಿಸ್ಟ್‌ನಲ್ಲಿ ಇದೀಗ ಬಾಲಿವುಡ್‌ನ ರಂಗೀಲಾ ನಟ ಊರ್ಮಿಳಾ ಮಾತೊಂಡ್ಕರ್‌ ಧರಿಸಿದ್ಧ ಶರಾರ ಸೂಟ್‌ ಕೂಡ ಸೇರಿದೆ.

2/5

ಊರ್ಮಿಳಾ ಫ್ಯಾಷನ್‌ ಶೂಟ್‌

ಹೌದು, ರಂಗೀಲಾ ಸಿನಿಮಾದ ಮೂಲಕ ಹುಡುಗರ ನಿದ್ದೆ ಗೆಡಿಸಿದ್ದ ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌, ಡಿವೋರ್ಸ್‌ ಆದ ನಂತರ ಸಾಕಷ್ಟು ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಅದರಲ್ಲೂ ಫ್ಯಾಷನ್‌ ಶೂಟ್‌ಗಳಲ್ಲಿ ಪಾಲ್ಗೊಳ್ಳತೊಡಗಿದ್ದಾರೆ. ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ನ ಮೂನ್ಸೂಚನೆಯನ್ನು ಈಗಾಗಲೇ ನೀಡಿದ್ದಾರೆ.

3/5

ಊರ್ಮಿಳಾ ಧರಿಸಿದ ಸನ್‌ ಕಲರ್‌ ಶರಾರ

ಅಂದಹಾಗೆ, ಊರ್ಮಿಳಾ ಮಾತೊಂಡ್ಕರ್‌ ಧರಿಸಿದ ಸನ್‌ ಕಲರ್‌ ಅಂದರೇ ಹಳದಿ ವರ್ಣದ ಶರಾರ ಸೂಟ್‌ ಈ ಸೀಸನ್‌ನ ಟ್ರೆಂಡ್‌ ಲಿಸ್ಟ್‌ನಲ್ಲಿದೆ. ಸೀಸನ್‌ಗೆ ಹೊಂದುವಂತೆ ಸ್ಲಿವ್‌ಲೆಸ್‌ ವಿನ್ಯಾಸ ಹೊಂದಿದೆ. ಸ್ಟೈಟ್‌ ಕಟ್‌ ಟ್ಯೂನಿಕ್‌ ವಿನ್ಯಾಸ ಹೊಂದಿದ್ದು, ದೊಗಲೆಯಾಗಿರುವ ಈ ಶರಾರ ಪ್ಯಾಂಟ್‌ ಸೀಸನ್‌ಗೆ ತಕ್ಕಂತಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಶರಾರದಲ್ಲಿ ಆಕರ್ಷಕವಾಗಿ ಕಾಣಲು ಇಲ್ಲಿವೆ ಟಿಪ್ಸ್

  • ಆದಷ್ಟೂ ನೀವು ಧರಿಸುವ ಶರಾರ ಸೂಟ್‌ ಸ್ಲಿಮ್‌ ಫಿಟ್‌ ಆಗಿರಲಿ.
  • ಅತಿ ಹೆಚ್ಚು ಹೆವ್ವಿ ಡಿಸೈನ್‌ ಇರುವುದನ್ನು ಆವಾಯ್ಡ್ ಮಾಡಿ.
  • ಅಗಲವಾದ ನೆಕ್‌ ಲೈನ್‌ ಈ ಸೀಸನ್‌ನಲ್ಲಿ ಧರಿಸಿದಾಗ ಕಂಫರ್ಟಬಲ್‌ ಎಂದೆನಿಸುತ್ತದೆ.
5/5
  • ಲೈಟ್‌ ಹಾಗೂ ಸನ್‌ ಕಲರ್ಸ್ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಈ ಶೇಡ್‌ನವನ್ನೇ ಆಯ್ಕೆ ಮಾಡಿ.
  • ಆದಷ್ಟೂ ಲೈಟ್‌ವೈಟ್‌ ಫ್ಯಾಬ್ರಿಕ್‌ನ ಶರಾರ ಸೂಟ್‌ ಆಯ್ಕೆ ಮಾಡಿ ಸ್ಟೈಲಿಂಗ್‌ ಮಾಡಿ.
  • ಲೈಟ್‌ವೈಟ್‌ ಹಾಗೂ ಶೀರ್‌ ದುಪಟ್ಟಾ ಧರಿಸಿ. ನೋಡಲು ಆಕರ್ಷಕವಾಗಿ ಕಾಣಿಸುವುದಲ್ಲದೇ, ಸೆಕೆಯಾಗದು!
  • ಮೇಕಪ್‌ ಕೂಡ ತಿಳಿಯಾಗಿರಲಿ.
  • ಊರ್ಮಿಳಾ ಲುಕ್‌ಗೆ ಸಾಥ್‌ ನೀಡುವಂತಹ ಮೇಕೋವರ್‌ ಮಾಡಿಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author