Star Fashion 2026: ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದ ಜೆನ್ನಿಫರ್ ಲೋಪೆಜ್ ಗೋಲ್ಡನ್ ಡ್ರೆಸ್
ಡಾಲ್ಚೆ & ಗಬ್ಬಾನ ಆಲ್ಟಾ ಮೋಡಾ ಕಲೆಕ್ಷನ್‌ನ ಫ್ಯಾಷನ್ ಇವೆಂಟ್‌ನಲ್ಲಿ ಖ್ಯಾತ ಹಾಲಿವುಡ್ ನಟಿ, ಗಾಯಕಿ ಜೆನ್ನಿಫರ್ ಲೋಪೆಜ್ ಧರಿಸಿದ್ದ ಜೇಮ್ಸ್ ಸ್ಟೋನ್ಸ್‌ನಿಂದ ವಿನ್ಯಾಸಗೊಂಡ ಗೋಲ್ಡನ್ ಡ್ರೆಸ್ ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದೆ. ಇದ್ಯಾವ ಬಗೆಯ ಡ್ರೆಸ್? ಏನಿದರ ಸ್ಪೆಷಾಲಿಟಿ? ಫ್ಯಾಷನಿಸ್ಟಾಗಳು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ಖ್ಯಾತ ಹಾಲಿವುಡ್ ನಟಿ, ಗಾಯಕಿ ಜೆನ್ನಿಫರ್ ಲೋಫೆಜ್ ಧರಿಸಿದ್ಧ ಗೋಲ್ಡನ್ ಡ್ರೆಸ್ ಇದೀಗ ಜಾಗತೀಕ ಮಟ್ಟದ ಫ್ಯಾಷನ್ ಲೋಕದಲ್ಲಿ ಸುದ್ದಿಯಾಗಿದೆ. ಫ್ಯಾಷನ್ ಫಾಲೋವರ್‌ಗಳ ಹುಬ್ಬೇರಿಸಿದೆ.
ಡಾಲ್ಚೆ & ಗಬ್ಬಾನ ಆಲ್ಟಾ ಮೋಡಾ ಫ್ಯಾಷನ್ ಕಲೆಕ್ಷನ್
ಹೌದು, ಸಿಸ್ಲಿಯಲ್ಲಿ ನಡೆದ ಡಾಲ್ಚೆ & ಗಬ್ಬಾನಾ ಆಲ್ಟಾಮೋಡಾ ಕಲೆಕ್ಷನ್ ಫ್ಯಾಷನ್ ಇವೆಂಟ್‌ನಲ್ಲಿ ಜೆನ್ನಿಫರ್ ಲೋಫೆಜ್ ಧರಿಸಿದ್ದ, ಜೆಮ್ಸ್‌ಸ್ಟೋನ್ಸ್ ಹಾಗೂ ಗೋಲ್ಡನ್ ಎಂಬ್ರಾಯ್ಡರಿಯಿಂದ ಡಿಸೈನ್ ಮಾಡಲಾಗಿದ್ದ ಬಂಗಾರ ವರ್ಣದ ಜ್ಯುವೆಲ್ ಡ್ರೆಸ್ ಸದ್ಯ ಫ್ಯಾಷನ್ ಲೋಕದಲ್ಲೂ ಹಂಗಾಮ ಎಬ್ಬಿಸಿದೆ.
ಮಿನುಗಿದ ಜೆನ್ನಿಫರ್ ಗೋಲ್ಡನ್ ಡ್ರೆಸ್ ವಿಮರ್ಶೆ
ಅಂದಹಾಗೆ, ಜೆನ್ನಿಫರ್ ಲೋಫೆಜ್ ಧರಿಸಿದ್ದ ಈ ಗೋಲ್ಡನ್ ಡ್ರೆಸ್ ಥೇಟ್ ಜ್ಯುವೆಲರಿಯಂತೆ ಕಾಣಿಸುತ್ತಿತ್ತು. ಅದರಲ್ಲೂ ಪ್ರಿಶಿಯಸ್ ಸ್ಟೋನ್‌ಗಳನ್ನು ಬಳಸಿ, ಬಂಗಾರದ ಆಭರಣದಂತೆ ಡಿಸೈನ್ ಮಾಡಲಾಗಿತ್ತು. ತಕ್ಷಣಕ್ಕೆ ಆಭರಣವನ್ನೇ ಉಡುಗೆಯಾಗಿ ಧರಿಸಿದ್ದಾರೇನೋ ಎಂಬಂತೆ ಕಾಣಿಸುತ್ತಿತ್ತು. ಆ ಮಟ್ಟಿಗೆ ಜೆನ್ನಿಫರ್ ಡ್ರೆಸ್ ಸಾವಿರ ಜನರ ಮಧ್ಯೆಯೂ ಎದ್ದು ಕಾಣಿಸುತ್ತಿತ್ತು ಎಂದಿದ್ದಾರೆ ಸ್ಟೈಲಿಸ್ಟ್ ಹಾಗೂ ಡಿಸೈನರ್ ರೀಟಾ.
ಇನ್ನು, ಸ್ಟೈಲಿಸ್ಟ್ ಜಾನ್ವಿಯ ಪ್ರಕಾರ, ಜೆನಿಫರ್ ಧರಿಸಿದ ಉಡುಗೆಗಳೆಲ್ಲವೂ ಸದಾ ಟ್ರೆಂಡಿಯಾಗುತ್ತವೆ. ಈ ಬಾರಿ ಅವರು ಧರಿಸಿದ ಈ ಬಂಗಾರ ವರ್ಣದ ಡಿಸೈನ್‌ನ ಡ್ರೆಸ್ ಮಹಿಳೆಯರನ್ನು ಮಾತ್ರವಲ್ಲ, ಜ್ಯುವೆಲ್ ಡಿಸೈನರ್‌ಗಳನ್ನು ಸೆಳೆಯಿತು ಎನ್ನುತ್ತಾರೆ. ಇನ್ನು, ಫ್ಯಾಷನ್ ಎಕ್ಸ್ಪರ್ಟ್ ಜೋಸೆಫ್ ಹೇಳುವಂತೆ. ಈ ಬ್ರಾಂಡ್‌ನ ಡ್ರೆಸ್ ರನ್‌ವೇಯಲ್ಲಿ ನೆರೆದಿದ್ದವರನ್ನು ಕೆಲಕಾಲ ವಿಸ್ಮಯಗೊಳಿಸಿತು ಎನ್ನುತ್ತಾರೆ.
ಗೋಲ್ಡನ್ ಮ್ಯಾಕ್ಸಿ ಗೌನ್
ಈ ಗೋಲ್ಡನ್ ಮ್ಯಾಕ್ಸಿ ಗೌನ್ ಮೇಲೆ ಜೆನಿಫರ್ ಧರಿಸಿದ್ದ ಬಂಗಾರ ವರ್ಣದ ಶಿಮ್ಮರಿಂಗ್ ಕೇಪ್, ಜೆನಿಫರ್ ಉಡುಗೆಯನ್ನು ಮತ್ತಷ್ಟು ಹೈಲೈಟ್ ಮಾಡಿತ್ತು. ಮ್ಯಾಕ್ಸಿ ಗೌನ್‌ನಂತಿರುವ ಆಫ್ ಶೋಲ್ಡರ್ ಡ್ರೆಸ್‌ನ ಕಳೆ ಹೆಚ್ಚಿಸಿತ್ತು.
ಸ್ಟೇಟ್‌ಮೆಂಟ್ ನೆಕ್ಲೇಸ್ ಸಾಥ್
ರೂಬಿ ಮತ್ತು ಡೈಮಂಡ್ ಸ್ಟೇಟ್‌ಮೆಂಟ್ ನೆಕ್ಲೇಸ್ ಹಾಗೂ ಮ್ಯಾಚಿಂಗ್ ಡ್ರಾಪ್ ಇಯರಿಂಗ್ಸ್ ಜೆನಿಫರ್ ಅವರ ಲುಕ್ಕ್‌ಗೆ ಮೆರಗು ನೀಡಿತ್ತು. ಇದರೊಂದಿಗೆ ಅವರು ಕೈಯಲ್ಲಿ ಹಿಡಿದಿದ್ದ ಮೆಟಾಲಿಕ್ ಗೋಲ್ಡ್ ಮಿನಿ ಹ್ಯಾಂಡ್‌ಬ್ಯಾಗ್ ಇಡೀ ಸ್ಟೈಲ್ ಸ್ಟೇಟ್‌ಮೆಂಟನ್ನು ಪರ್ಫೆಕ್ಟ್ ಆಗಿಸಿತ್ತು.
ಬನ್ ಹೇರ್‌ಸ್ಟೈಲ್‌ಗೂ ಜ್ಯುವೆಲರಿ
ಸುತ್ತುವರಿದ ಹೆಣೆದ ಜಡೆಯೊಂದಿಗೆ ವಿನ್ಯಾಸಗೊಳಿಸಲಾದ ಬನ್ ಹೇರ್‌ಸ್ಟೈಲ್‌ಗೆ ಹಾಕಿದ್ದ ಜ್ಯುವೆಲರಿ ಕಂಪ್ಲೀಟ್ ರಾಯಲ್ ಲುಕ್‌ಗೆ ಸಾಥ್ ನೀಡಿತ್ತು. ಒಟ್ಟಾರೆ, ಬಹಳ ದಿನಗಳ ನಂತರ ಜೆನಿಫರ್ ಫ್ಯಾಷನ್ ಸ್ಟೇಟ್‌ಮೆಂಟ್ ಅಭಿಮಾನಿಗಳನ್ನು ಮಾತ್ರವಲ್ಲ, ಫ್ಯಾಷನ್ ಪ್ರಿಯರ ಮನಮುಟ್ಟುವಲ್ಲಿಯೂ ಯಶಸ್ವಿಯಾಯಿತು ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.