ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ಯುವಕರಿಗೆ ಇಷ್ಟವಾದ ಲೆನಿನ್‌ ಎಂಬ್ರಾಯ್ಡರಿ ಬ್ಲೇಜರ್‌

Lenin Embroidered Blazers: ಮೆನ್ಸ್ ಫ್ಯಾಷನ್‌ನ ಹಿಟ್‌ ಲಿಸ್ಟ್‌ನಲ್ಲಿ ಇದೀಗ ಲೆನಿನ್‌ ಎಂಬ್ರಾಯ್ಡರಿ ಬ್ಲೇಜರ್‌ಗಳು ಟಾಪ್‌ ಲಿಸ್ಟ್‌ನಲ್ಲಿವೆ. ಇವು ಯುವಕರಿಗೆ ಪ್ರಿಯವಾಗಿವೆ. ಇದ್ಯಾವ ಬಗೆಯ ಬ್ಲೇಜರ್‌? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಕೃಪೆ: ನೀಲ್‌ ನಿತಿನ್‌ ಮುಖೇಶ್‌, ನಟ
1/5

ಲೆನಿನ್‌ ಎಂಬ್ರಾಯ್ಡರಿ ಬ್ಲೇಜರ್‌ಗಳು ಈ ಸೀಸನ್‌ನ ಫ್ಯಾಷನ್‌ನಲ್ಲಿ ಆಗಮಿಸಿವೆ. ಎಲಿಗೆಂಟ್‌ ಲುಕ್‌ ಬಯಸುವ ಯುವಕರನ್ನು ಹಾಗೂ ಬಿಸ್‌ನೆಸ್‌ ಮೆನ್ಸ್ ವರ್ಗದ ಪುರುಷರನ್ನು ಸೆಳೆದಿವೆ.

2/5

ನೀಲ್‌ ನಿತಿನ್ ಮುಖೇಶ್‌ರ ಲೆನಿನ್‌ ಬ್ಲೇಜರ್‌

ಹೌದು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಬಾಲಿವುಡ್‌ ನಟ ನೀಲ್‌ ನಿತಿನ್‌ ಮುಖೇಶ್‌ ಧರಿಸಿದ್ಧ ಈ ಶೈಲಿಯ ಬ್ಲೇಜರ್‌ ಸೋಷಿಯಲ್‌ ಮೀಡಿಯಾ ಫಾಲೋ ಮಾಡುವ ಫ್ಯಾಷನ್‌ ಪ್ರಿಯ ಪುರುಷರನ್ನು ಸೆಳೆಯಿತು. ಧರಿಸಿದಾಗ ಹೈ ಫ್ಯಾಷನ್‌ವೇರ್‌ನಂತೆ ಕಾಣಿಸುವ ಈ ಬ್ಲೇಜರ್‌ ಸೂಟ್‌ ಸದ್ಯ ಟ್ರೆಂಡ್‌ ಲಿಸ್ಟ್‌ಗೆ ಸೇರಿ, ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ನಾಗ್‌.

3/5

ಲೆನಿನ್‌ ಎಂಬ್ರಾಯ್ಡರಿ ಬ್ಲೇಜರ್‌ ಲುಕ್‌ನ ವಿಶೇಷತೆ

ನೀಲ್‌ ನಿತಿನ್‌ ಮುಖೇಶ್‌ ಧರಿಸಿದ್ಧ ಭರತ್‌ ರೇಷ್ಮಾ ಡಿಸೈನರ್‌ ಬ್ರಾಂಡ್‌ನ ಈ ಲೆನಿನ್‌ ಎಂಬ್ರಾಯ್ಡರಿ ಬ್ಲೇಜರ್‌, ಪ್ರೀಮಿಯಮ್‌ ಲೆನಿನ್‌ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಲಾಗಿದೆ. ಕಾಂಟ್ರಸ್ಟ್ ಲೆಪೆಲ್‌ ಕಾಲರ್‌ ಜೊತೆಗೆ ಎಂಬ್ರಾಯ್ಡರಿ ಡಿಸೈನನ್ನು ಪಾಕೆಟ್‌ ಇರುವ ಜಾಗದಲ್ಲಿ ಡಿಸೈನ್‌ ಮಾಡಲಾಗಿದೆ. ಇನ್ನು, ಈ ಬ್ಲೇಜರ್‌ಗೆ ಧರಿಸಿದ್ಧ ಬ್ಲ್ಯಾಕ್‌ ಇನ್ನರ್‌ ಶರ್ಟ್ ಹೈ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡಿದೆ. ಒಟ್ಟಾರೆ, ನೀಲ್‌ ನಿತಿನ್‌ ಮುಖೇಶ್ ಭಾರಿ ದಿನಗಳ ನಂತರ ತಮ್ಮ ಈ ಫ್ಯಾಷನ್‌ ಸ್ಟೇಟ್‌ಮೆಂಟ್‌ನ ಮೂಲಕ ಟ್ರೆಂಡ್‌ ಸೆಟ್‌ ಮಾಡಿದ್ದಾರೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

4/5

ಲೆನಿನ್‌ ಎಂಬ್ರಾಯ್ಡರಿ ಬ್ಲೇಜರ್‌ ಸ್ಟೈಲಿಂಗ್‌

  • ಕಾರ್ಪೋರೇಟ್‌ ಮೀಟಿಂಗ್‌ಗಳಿಗೆ ಮಾತ್ರವಲ್ಲ, ನೈಟ್‌ ಪಾರ್ಟಿಗಳಲ್ಲೂ ಇವನ್ನು ಧರಿಸಬಹುದು.
  • ಕಾಂಟ್ರಾಸ್ಟ್ ಇನ್ನರ್‌ ಶರ್ಟ್‌ಗಳನ್ನು ಧರಿಸುವುದರಿಂದ ಆಕರ್ಷಕವಾಗಿ ಕಾಣಿಸಬಹುದು.
  • ಇಂತಹ ಬ್ಲೇಜರ್‌ ಧರಿಸಿದಾಗ ಆದಷ್ಟೂ ಫಂಕಿ ಜ್ಯುವೆಲರಿ ಧರಿಸಕೂಡದು.
5/5
  • ಫಂಕಿ ಹೇರ್‌ಸ್ಟೈಲ್‌ ಬೇಡ.
  • ಡಿಸೆಂಟ್‌ ಲುಕ್‌ಗಾಗಿ ಶೂಗಳನ್ನು ಧರಿಸಬಹುದು.
  • ಹೆಚ್ಚು ಆಕ್ಸೆಸರೀಸ್‌ ಧರಿಸುವುದು ಅಗತ್ಯವಿಲ್ಲ.
  • ಕೈಗೆ ವಾಚ್‌ ಇರಲಿ. ಕುತ್ತಿಗೆಗೆ ಚೈನ್‌ ಇರಲಿ.

ಶೀಲಾ ಸಿ ಶೆಟ್ಟಿ

View all posts by this author