Star Fashion 2026: ಟ್ರೆಂಡ್ ಸೆಟ್ ಮಾಡಿದ ರಚಿತಾರಾಮ್ ಬ್ಯೂಟಿಫುಲ್ ಶರಾರ
ಡಿಂಪಲ್ ಕ್ವೀನ್, ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಅವರ ಶರಾರ ಲುಕ್ ಎಥ್ನಿಕ್ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿರುವುದು ಮಾತ್ರವಲ್ಲ, ಟ್ರೆಂಡ್ ಸೆಟ್ ಮಾಡಿದೆ. ಈ ಬಗ್ಗೆ ಫ್ಯಾಷನ್ ವಿಮರ್ಶಕರು ಏನು ಹೇಳುತ್ತಾರೆ? ಇಲ್ಲಿದೆ ಡಿಟೇಲ್ಸ್.
ರಚಿತಾ ರಾಮ್ ಶರಾರ ಲುಕ್ ಫ್ಯಾಷನ್ ಪ್ರಿಯರನ್ನು ಸಮ್ಮೋಹನಗೊಳಿಸಿದೆ.
ಫ್ಯಾಷನ್ ಫಾಲೋವರ್ಸ್ ಸೆಳೆದ ರಚ್ಚು ಶರಾರ
ಹೌದು, ಫೇಸ್‌ಬುಕ್‌ನಲ್ಲಿ ಡಿಂಪಲ್ ಕ್ವೀನ್ ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಅವರು ಹಂಚಿಕೊಂಡಿರುವ ಶರಾರ ಫ್ಯಾಷನ್ ಲುಕ್‌ನ ಫೋಟೋಗಳು ಇದೀಗ ಫಾಲೋವರ್ಸ್ ಮೆಚ್ಚುಗೆ ಪಡೆದಿರುವುದಲ್ಲದೇ ಎಥ್ನಿಕ್ ಫ್ಯಾಷನ್ ಪ್ರಿಯರನ್ನು ಕೂಡ ಆಕರ್ಷಿಸಿದೆ. ಅಲ್ಲದೇ, ಇದ್ದಕ್ಕಿದ್ದಂತೆ ಶರಾರ ಫ್ಯಾಷನ್ ಟ್ರೆಂಡ್ ಸೆಟ್ ಮಾಡಿದೆ.
ಶರಾರದಲ್ಲಿ ರಚಿತಾ ಲುಕ್ ಹೇಗಿದೆ?
ಅಂದಹಾಗೆ, ಫ್ಯಾಷನ್ ವಿಮರ್ಶಕರಾದ ಮಿಂಚು ಪ್ರಕಾರ, ರಚಿತಾ ರಾಮ್ ಧರಿಸಿರುವ ವೈಬ್ರೆಂಟ್ ಆರೆಂಜ್ ಶೇಡ್‌ನ ಆರೆಂಜ್-ರೆಡ್ ಕಾಂಬಿನೇಷನ್‌ನ ಡಿಸೈನರ್ ಶರಾರ ರಚಿತಾಗೆ ಫೆಸ್ಟಿವ್ ಲುಕ್ ನೀಡಿದೆ. ಈಗ ಫೆಸ್ಟೀವ್ ಸೀಸನ್ ಅಲ್ಲದಿದ್ದರೂ ಅವರನ್ನು ಗ್ರ್ಯಾಂಡ್ ಲುಕ್‌ನಲ್ಲಿ ಬಿಂಬಿಸಿದೆ. ಸದಾ ಸೀರೆ, ಲೆಹೆಂಗಾ, ದಾವಣಿ-ಲಂಗ ಹಾಗೂ ಸಲ್ವಾರ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ರಚಿತಾ, ಈ ಬಾರಿ ಈ ಲುಕ್‌ನಲ್ಲಿರುವ ಫೋಟೋ ಹಾಕಿರುವುದು ಫ್ಯಾಷನ್ ಪ್ರಿಯರನ್ನು ಆಕರ್ಷಿಸಿರುವುದರೊಂದಿಗೆ, ಶರಾರವನ್ನು ಮತ್ತೊಮ್ಮೆ ಟ್ರೆಂಡಿಯಾಗಿಸಿದೆ.
ರಚಿತಾ ಧರಿಸಿದ ಶರಾರ ವಿಶೇಷತೆ
ಕೇವಲ ಫೇಸ್‌ಬುಕ್‌ನಲ್ಲಿ ಮಾತ್ರ ಈ ಫೋಟೋಗಳನ್ನು ಅಪ್‌ಲೋಡ್ ಮಾಡಿರುವ ರಚಿತಾ ರಾಮ್ ಅವರು ಧರಿಸಿರುವ ಶರಾರ ಕೇವಲ ಕಲರ್‌ನಿಂದ ಮಾತ್ರ ಹೈಲೈಟ್ ಆಗಿಲ್ಲ, ಬದಲಿಗೆ ಗೋಲ್ಡನ್ ವರ್ಕ್‌ನ ಶಾರ್ಟ್ ಡಿಸೈನರ್ ಕುರ್ತಾ ಹಾಗೂ ಫ್ಲೇರ್ಡ್ ಬಾರ್ಡರ್ ಶರಾರಗೆ ಮಾನೋಕ್ರೋಮ್ ಲುಕ್ ನೀಡಿದೆ.
ಶರಾರ ಟ್ರೆಂಡ್ ಸೆಟ್ ಮಾಡಿದ ರಚಿತಾ
ಒಟ್ಟಿನಲ್ಲಿ, ಕನ್ನಡದ ನಟಿಯೊಬ್ಬರು ನಾರ್ತ್ ಇಂಡಿಯನ್ ಉಡುಗೆ ಧರಿಸಿ, ಆ ಉಡುಗೆಯನ್ನು ಟ್ರೆಂಡ್ ಸೆಟ್ ಮಾಡಿರುವುದು ಇದೇ ಮೊದಲೆನ್ನಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.