ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion 2026: ವೈಬ್ರೆಂಟ್‌ ಕಲರ್‌ಗೆ ತಿರುಗಿದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌

ಇದುವರೆಗೂ ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ಗೆ ಸೀಮಿತವಾಗಿದ್ದ ಸ್ಟ್ರೈಪ್ಡ್ ಡ್ರೆಸ್‌ ಫ್ಯಾಷನ್‌ ಇದೀಗ ಕಲರ್‌ಫುಲ್‌ ಆಗಿದೆ. ಟ್ರೆಂಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಮೃಣಾಲ್‌ ಠಾಕೂರ್‌ ಧರಿಸಿದ ನೆವ್ವಿ ಬ್ಲ್ಯೂ ಸ್ಟ್ರೈಪ್ಡ್ ಡ್ರೆಸ್‌ ಸದ್ಯ ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

ಚಿತ್ರಗಳು: ಮೃಣಾಲ್‌ ಠಾಕೂರ್‌, ಬಾಲಿವುಡ್‌ ನಟಿ
1/5

ಬ್ಲ್ಯಾಕ್‌ ಮತ್ತು ವೈಟ್‌ ಸ್ಟ್ರೈಪ್ಡ್ ಡ್ರೆಸ್‌ಗಳು ಇದೀಗ ವೈಬ್ರೆಂಟ್‌ ಕಲರ್‌ಗೆ ತಿರುಗಿವೆ.

2/5

ಫಂಕಿ ಲುಕ್‌ಗೆ ಸಾಥ್‌

ಹೌದು, ರೆಟ್ರೊ ಲುಕ್‌ಗೆ ಸಾಥ್‌ ನೀಡುತ್ತಿದ್ದ ಪಕ್ಕಾ ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ನ ಸ್ಟ್ರೈಪ್ಡ್ ಕಲರ್‌ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಕಲರ್‌ಫುಲ್‌ ಆಗಿವೆ. ನೋಡಲು ಫಂಕಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ.

3/5

ಮೃಣಾಲ್‌ ಠಾಕೂರ್‌ ಧರಿಸಿದ ಕಲರ್‌ ಸ್ಟ್ರೈಪ್ಡ್ ಡ್ರೆಸ್

ಅಂದಹಾಗೆ, ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ಮೃಣಾಲ್‌ ಠಾಕೂರ್‌ ಧರಿಸಿದ ನೇವಿ ಬ್ಲೂ ಸ್ಟ್ರೈಪ್ಡ್ ಶೋಲ್ಡರ್‌ಲೆಸ್‌ ಅಂದರೆ, ಆಫ್‌ ಶೋಲ್ಡರ್‌ ಡ್ರೆಸ್‌, ಇದೀಗ ಫ್ಯಾಷನ್‌ಲೋಕದಲ್ಲಿ ಚಾಲ್ತಿಗೆ ಬಂದಿವೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಡ್ರೆಸ್‌ನ ಫೋಟೋಗಳು ಕಾಣಿಸಿಕೊಂಡ ನಂತರ, ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ದಿಯಾ.

4/5

ಟ್ರೆಂಡಿಯಾಗಿರುವ ಕಲರ್‌ ಕಲರ್‌ ಸ್ಟ್ರೈಪ್ಡ್ ಡ್ರೆಸ್‌

ನೇವಿ ಬ್ಲೂ ಸ್ಟ್ರೈಪ್ಡ್ ಮಿಡಿ ಡ್ರೆಸ್‌, ಆಫ್‌ ಶೋಲ್ಡರ್‌ ಬ್ಲೂ ಸ್ಟ್ರೈಪ್ಡ್ ಡ್ರೆಸ್, ರೆಡ್‌ ಮತ್ತು ಪಿಂಕ್‌ ಸ್ಟ್ರೈಪ್ಡ್ ಮಿನಿ ಡ್ರೆಸ್‌, ಆರೆಂಜ್‌, ಸ್ಕಾರ್ಲೆಟ್‌ ಸ್ಟ್ರೈಪ್ಡ್ ಡ್ರೆಸ್‌ಗಳು ಸದ್ಯ ಮಾರುಕಟ್ಟೆಯಲ್ಲಿ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಕಲರ್‌ ಸ್ಟ್ರೈಪ್ಡ್ ಕಲರ್‌ ಡ್ರೆಸ್‌ಗಳ ವಿಶೇಷತೆ

  • ಈ ಡ್ರೆಸ್‌ಗಳು ಹೊಸ ಲುಕ್‌ ನೀಡುತ್ತವೆ.
  • ಪ್ಲಂಪಿಯಾಗಿರುವವರನ್ನು ಉದ್ದನಾಗಿ ಕಾಣಿಸುವಂತೆ ಬಿಂಬಿಸುತ್ತವೆ.
  • ಧರಿಸಿದಾಗ ಮಾಡೆಲ್‌ ಲುಕ್‌ ನೀಡುತ್ತವೆ.
  • ಫ್ಯಾಷನೆಬಲ್‌ ಆಗಿ ಕಾಣಿಸುವುದರೊಂದಿಗೆ ಕುಳ್ಳಗಿರುವವರನ್ನು ಉದ್ದನಾಗಿರುವಂತೆ ಇಲ್ಯೂಷನ್‌ ಕ್ರಿಯೇಟ್‌ ಮಾಡುತ್ತವೆ.

ಶೀಲಾ ಸಿ ಶೆಟ್ಟಿ

View all posts by this author