Star Fashion 2026: ಕಣ್ಣರಳಿಸುವ ವಿನ್ಯಾಸದ ಇವಿಲ್ ಐ ಡ್ರೆಸ್‌ಗಳ ಜಾದೂ
ಆಕ್ಸೆಸರೀಸ್‌ಗಳಲ್ಲಿ ಟ್ರೆಂಡಿಯಾಗಿದ್ದ ಇವಿಲ್ ಐ ಡಿಸೈನ್ ಹಾಗೂ ಪ್ರಿಂಟ್‌ಗಳು ಇದೀಗ ಡ್ರೆಸ್‌ಗಳನ್ನೂ ಆವರಿಸಿಕೊಂಡಿವೆ. ಇದುವರೆಗೂ ಪೆಂಡೆಂಟ್, ಬ್ರೇಸ್‌ಲೇಟ್, ಸರ, ಕಿವಿಯೊಲೆ ಸೇರಿದಂತೆ ನಾನಾ ಬಗೆಯ ಆಕ್ಸೆಸರೀಸ್‌ಗಳಲ್ಲಿ ಟ್ರೆಂಡಿಯಾಗಿದ್ದ ಇವಿಲ್ ಐ ನ ವೈವಿಧ್ಯಮಯ ಡಿಸೈನ್ಸ್ ಹಾಗೂ ಪ್ರಿಂಟ್‌ಗಳು ಇದೀಗ ವೆಸ್ಟರ್ನ್ ಡ್ರೆಸ್‌ಗಳನ್ನು ಆವರಿಸಿಕೊಂಡಿವೆ.
ಇವಿಲ್ ಐ ವಿನ್ಯಾಸ ಇದೀಗ ಡ್ರೆಸ್‌ಗಳನ್ನು ಆವರಿಸಿಕೊಳ್ಳತೊಡಗಿವೆ. ಹೊಸ ವಿನ್ಯಾಸಕ್ಕೆ ನಾಂದಿ ಹಾಡಿವೆ.
ಆಕ್ಸೆಸರೀಸ್‌ನಿಂದ ಉಡುಗೆಗೆ ಹಾರಿದ ಇವಿಲ್ ಐ
ಇದುವರೆಗೂ ಪೆಂಡೆಂಟ್, ಬ್ರೇಸ್‌ಲೇಟ್, ಸರ, ಕಿವಿಯೊಲೆ ಸೇರಿದಂತೆ ನಾನಾ ಬಗೆಯ ಆಕ್ಸೆಸರೀಸ್‌ಗಳಲ್ಲಿ ಟ್ರೆಂಡಿಯಾಗಿದ್ದ ಇವಿಲ್ ಐನ ವೈವಿಧ್ಯಮಯ ಡಿಸೈನ್ಸ್ ಹಾಗೂ ಪ್ರಿಂಟ್‌ಗಳು ಇದೀಗ ವೆಸ್ಟರ್ನ್ ಡ್ರೆಸ್‌ಗಳನ್ನು ಆವರಿಸಿಕೊಂಡಿವೆ. ಅಷ್ಟೇಕೆ? ಮುಂಬರುವ ದಿನಗಳಲ್ಲಿ ಟ್ರೆಂಡಿಯಾಗುವ ಮುನ್ಸೂಚನೆಯನ್ನು ನೀಡಿವೆ ಎಂದು ಹೇಳುವ ಫ್ಯಾಷನಿಸ್ಟಾ ರಾಜ್ ಶೈನ್ ಪ್ರಕಾರ, ಜೆನ್ ಜಿಯವರನ್ನು ಇವು ಈಗಾಗಲೇ ಸೆಳೆದಿವೆಯಂತೆ.
ಶ್ರೀಮುಖಿ ಧರಿಸಿದ ಗ್ಲಾಮರಸ್ ಇವಿಲ್ ಐ ಡ್ರೆಸ್
ಅಂದಹಾಗೆ, ನಟಿ ಶ್ರೀಮುಖಿ ಟಿವಿ ಚಾನೆಲ್‌ವೊಂದರ ಇವಿಲ್ ಐ ಪ್ರಿಂಟ್ಸ್ ಇರುವಂತಹ ಗ್ಲಾಮರಸ್ ಉಡುಪು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾಷನ್ ಪ್ರಿಯರನ್ನು ಸೆಳೆಯಿತು. ಅಲ್ಲದೇ ಹೀಗೂ ಇವಿಲ್ ಐ ಡಿಸೈನರ್‌ವೇರ್ ಡಿಸೈನ್ ಮಾಡಿಸಬಹುದು ಎಂಬುದನ್ನು ಫ್ಯಾಷನ್ ಪ್ರಿಯರಿಗೆ ಮನವರಿಕೆ ಮಾಡಿಸಿತು ಎನ್ನುತ್ತಾರೆ ಸ್ಟೈಲಿಸ್ಟ್.
ವಿಚಿತ್ರ ಇವಿಲ್ ಐ ಡ್ರೆಸ್
ಶ್ರೀಮುಖಿ ಧರಿಸಿದ್ದ ಇವಿಲ್ ಐ ಡ್ರೆಸ್ ಹೆಡ್‌ವೇರ್ ಒಳಗೊಂಡಿತ್ತು. ರಾಯಲ್ ಬ್ಲ್ಯೂ ಹಾಗೂ ವೈಟ್ ಕಾಂಬಿನೇಷನ್‌ನ ಸ್ಟ್ರೈಪ್ಸ್‌ನಲ್ಲಿ ವಿನ್ಯಾಸಗೊಂಡಿತ್ತು.
ಇವಿಲ್ ಐ ಪ್ರಿಯರಿಗೆ ಒಂದಿಷ್ಟು ಸಲಹೆ
- ಇವಿಲ್ ಐ ವೇರ್‌ಗಳು ಆನ್‌ಲೈನ್ ಶಾಪ್‌ಗಳಲ್ಲಿ ದೊರೆಯುತ್ತಿವೆ.
- ಆಕ್ಸೆಸರೀಸ್‌ಗಳು ಕೂಡ ಡ್ರೆಸ್‌ಗಳಿಗೆ ತಕ್ಕ ಡಿಸೈನ್‌ನಲ್ಲಿ ಲಭ್ಯ.
- ಕಂಪ್ಲೀಟ್ ವೆಸ್ಟರ್ನ್ ಲುಕ್ ನೀಡುತ್ತವೆ.