ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ಸೀಸನ್‌ ಕೊನೆಯಲ್ಲಿ ವೈಬ್ರೆಂಟ್‌ ಪಿಂಕ್‌ ಲೆಹೆಂಗಾ ಹಂಗಾಮ

Actress Ishani Maheshwari: ಈ ಸೀಸನ್‌ನಲ್ಲಿ ವೈಬ್ರೆಂಟ್‌ ಪಿಂಕ್‌ ಲೆಹೆಂಗಾ ಸಖತ್‌ ಪಾಪುಲರ್‌ ಆಗಿದೆ. ಅದರಲ್ಲೂ ನಟಿ ಇಶಾನಿ ಮಹೇಶ್ವರಿ ಧರಿಸಿದ ನಂತರ ಮತ್ತಷ್ಟು ಟ್ರೆಂಡಿಯಾಗಿದ್ದು, ಲೋಕಲ್‌ ಬ್ರಾಂಡ್‌ನಲ್ಲೂ ಬಿಡುಗಡೆಗೊಳ್ಳಲಾರಂಭಿಸಿದೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಇಶಾನಿ ಮಹೇಶ್ವರಿ ನಟಿ
1/5

ವೈಬ್ರೆಂಟ್‌ ಶೇಡ್‌ನ ಪಿಂಕ್‌ ಲೆಹೆಂಗಾ ಈ ಸೀಸನ್‌ನಲ್ಲಿ ಸಖತ್‌ ಪಾಪುಲರ್‌ ಆಗಿದೆ.

2/5

ಸಮ್ಮೋಹನಗೊಂಡ ಪಿಂಕ್‌ ಲೆಹೆಂಗಾ ಪ್ರಿಯರು

ಹೌದು, ನಟಿ ಇಶಾನಿ ಮಹೇಶ್ವರಿ ಧರಿಸಿದ್ದ ಈ ಶೈಲಿಯ ಕಲರ್‌ನ ಲೆಹೆಂಗಾ, ಪಿಂಕ್‌ ಕಲರ್‌ ಪ್ರಿಯರನ್ನು ಸಮ್ಮೋಹನಗೊಳಿಸಿದೆ. ಟ್ರೆಂಡಿಯಾಗಲು ಕಾರಣವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ನಟಿ ಇಶಾನಿ ಮ್ಯಾಗ್ನೆಟಾ ಪಿಂಕ್‌ ಲೆಹೆಂಗಾ ಕಮಾಲ್‌

ಅಂದಹಾಗೆ, ನಟಿ ಇಶಾನಿ ಮಹೇಶ್ವರಿ ಧರಿಸಿರುವ ಈ ಲೆಹೆಂಗಾ ಎದ್ದು ಕಾಣುವಂತಹ ವೈಬ್ರೆಂಟ್‌ ಶೇಡ್‌ನ ಮ್ಯಾಗ್ನೆಟಾ ಪಿಂಕ್‌ ಶೇಡ್‌ನದ್ದು. ನೋಡಲು ಕ್ಯಾಂಡಿ ಪಿಂಕ್‌ ಅಥವಾ ಬಬ್ಬಲ್‌ಗಮ್‌ ಪಿಂಕ್‌ ಶೇಡ್‌ನವು ಎನ್ನಬಹುದು. ಮೊದಲೇ ಎದ್ದು ಕಾಣುವಂತಹ ಕಲರ್‌ನ ಈ ಲೆಹೆಂಗಾಗಳು ತೀರಾ ಸಿಂಪಲ್‌ ಡಿಸೈನ್‌ನದ್ದಾದರೂ ಕೂಡ ಎಂತಹವರಿಗೂ ಚೆನ್ನಾಗಿ ಕಾಣಿಸುತ್ತವೆ. ಹಾಗಾಗಿ ಅತಿ ಕಡಿಮೆ ಸಮಯದಲ್ಲಿ ಈ ಲೆಹೆಂಗಾ ಟ್ರೆಂಡಿಯಾಗಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

4/5

ಪಿಂಕ್‌ ಲೆಹೆಂಗಾ ವಿಶೇಷತೆ

ಇನ್ನು, ನಟಿ ಇಶಾನಿ ಧರಿಸಿರುವ ಈ ಲೆಹೆಂಗಾ ಅಚ್ಚೂ ಬ್ರ್ಯಾಂಡ್‌ನದ್ದಾಗಿದ್ದು, ನೋಡಲು ಸಿಂಪಲ್‌ ಆಗಿದೆ. ಅಂದಾಜು ಬೆಲೆ ಅರ್ಧ ಲಕ್ಷ ರೂ. ಬೆಲೆಯದ್ದಾಗಿದೆ. ಲೆಹೆಂಗಾ ಸ್ಕರ್ಟ್ ಹ್ಯಾಂಡ್‌ ಪೇಂಟೆಡ್‌ ಫ್ಲೋರಲ್‌ ಮೋಟಿಫ್ಸ್ ಒಳಗೊಂಡಿದೆ. ಇದರ ಕ್ರಾಪ್‌ ಬ್ಲೌಸ್‌ ನೋಡಲು ಟಾಪ್‌ನಂತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಲೈಟ್‌ ವೈಟ್‌ನಂತಿರುವ ಶೀರ್‌ ವಿನ್ಯಾಸದ ದುಪಟ್ಟಾ ಹ್ಯಾಂಡ್‌ ಪೇಂಟ್‌ನಿಂದ ಸಿಂಗಾರಗೊಂಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಲೋಕಲ್‌ ಬ್ರ್ಯಾಂಡ್‌ನಲ್ಲೂ ಬಂತು ಈ ಲೆಹೆಂಗಾ

ಒಟ್ಟಿನಲ್ಲಿ, ಬೆಲೆಬಾಳುವ ಈ ಪಿಂಕ್‌ ಲೆಹೆಂಗಾ ಇಮಿಟೇಷನ್‌ ಡಿಸೈನ್‌ನಲ್ಲಿ ಇದೀಗ ಲೋಕಲ್‌ ಮಾರುಕಟ್ಟೆಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ಲೋಕಲ್‌ ಡಿಸೈನರ್‌ ಬ್ರಾಂಡ್‌ಗಳಲ್ಲಿ ಬಿಡುಗಡೆಗೊಳ್ಳಲಾರಂಭಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಶೀಲಾ ಸಿ ಶೆಟ್ಟಿ

View all posts by this author