ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Ideas 2026: ಕೃತಿ ಕರಬಂಧ ಸ್ಯಾಟಿನ್‌ ಸೀರೆ ಲುಕ್‌ಗಾಗಿ 5 ಸ್ಟೈಲಿಂಗ್‌ ಟಿಪ್ಸ್

ಬಹುಭಾಷಾ ತಾರೆ ಕೃತಿ ಕರಬಂಧ ಉಟ್ಟಿರುವ ಸಾದಾ ಸ್ಯಾಟಿನ್‌ ಸೀರೆ ಇದೀಗ ಮಾಡರ್ನ್‌ ಲುಕ್‌ ಬಯಸುವ ಯುವತಿಯರನ್ನು ಸೆಳೆದಿದೆ. ಅವರ ಈ ಲುಕ್‌ ಫಾಲೋ ಮಾಡಲು ಸೀರೆ ಸ್ಟೈಲಿಸ್ಟ್‌ಗಳು 5 ಸ್ಟೈಲಿಂಗ್‌ ಐಡಿಯಾ ನೀಡಿದ್ದಾರೆ.

ಚಿತ್ರಗಳು: ಕೃತಿ ಕರಬಂಧ, ನಟಿ
1/5

ಸಾದಾ ಸ್ಯಾಟಿನ್‌ ಸೀರೆಯಲ್ಲಿ ನೀವೂ ಕೂಡ ನಟಿ ಕೃತಿ ಕರಬಂಧಳಂತೆ ಕಾಣಿಸಬೇಕೇ! ಹಾಗಾದಲ್ಲಿ ಈ 5 ಸಿಂಪಲ್‌ ಸ್ಟೈಲಿಂಗ್‌ ಐಡಿಯಾ ಟ್ರೈ ಮಾಡಿ ನೋಡಿ ಎನ್ನುತ್ತಿದ್ದಾರೆ ಸೀರೆ ಸ್ಟೈಲಿಸ್ಟ್‌ಗಳು.

ಸಾದಾ ಸ್ಯಾಟಿನ್‌ ಸೀರೆಯ ಆಯ್ಕೆ ಹೀಗಿರಲಿ

ಯಾವುದೇ ಪ್ರಿಂಟ್ಸ್ ಇರದ ಸಾದಾ ಪ್ಲೇನ್‌ ಸೀರೆಯನ್ನು ಆಯ್ಕೆ ಮಾಡಿ. ಇದು ಮಾನೋಕ್ರೋಮ್‌ ಲುಕ್‌ ನೀಡುತ್ತದೆ. ಅಲ್ಲದೇ ನೋಡಲು ಎಲಿಗೆಂಟ್‌ ಲುಕ್‌ ನೀಡುತ್ತದೆ.

2/5

ತಿಳಿಯಾದ ಸೀರೆ ಕಲರ್‌

ನೀವು ಆಯ್ಕೆ ಮಾಡುವ ಸ್ಯಾಟೀನ್‌ ಸೀರೆ ಕಲರ್‌ ಡಾರ್ಕ್‌ ಬೇಡ! ಆದಷ್ಟೂ ಪಾಸ್ಟೆಲ್‌ ಶೇಡ್‌ ಇಲ್ಲವೇ ತೀರಾ ತಿಳಿಯಾದ ಕಲರ್‌ಗಳದ್ದಾಗಿರಲಿ. ಉದಾಹರಣೆಗೆ., ತಿಳಿ ಆಕಾಶ ನೀಲಿ, ಪಿಂಕ್‌ ಇಲ್ಲವೇ ವೈಟ್‌. ಆಗ ನೋಡಲು ಫ್ರೆಶ್‌ ಲುಕ್‌ ನೀಡುವುದು.

3/5

ಬಾರ್ಡರ್‌ ಬದಲು ಡಿಸೈನ್‌

ಕೃತಿ ಉಟ್ಟಿರುವ ಸೀರೆ ಸಾದಾ ಇದ್ದರೂ ಈ ಸೀರೆಯ ಬಾರ್ಡರ್‌ ಜಾಗದಲ್ಲಿ ಪರ್ಲ್‌ ವಿನ್ಯಾಸವಿದೆ. ಇದು ಎಲ್ಲಾ ಸೀರೆಗಳಲ್ಲೂ ಕಂಡು ಬರುವುದಿಲ್ಲ. ಹಾಗಾಗಿ ಫ್ಯಾನ್ಸಿ ಶಾಪ್‌ನಲ್ಲಿ ದೊರಕುವ ಪರ್ಲ್‌ ಲೇಸ್‌ಗಳನ್ನು ಟೈಲರ್‌ ಬಳಿ ಕೊಟ್ಟು ಹಾಕಿಸಬಹುದು. ಇದು ಆಕರ್ಷಕವಾಗಿ ಕಾಣಿಸುತ್ತದೆ.

4/5

ಬ್ಲೌಸ್‌ ಗ್ಲಾಮರಸ್‌ ಡಿಸೈನ್‌ದ್ದಾಗಿರಲಿ

ಸಾದಾ ಸೀರೆಗೆ ಧರಿಸುವ ಬ್ಲೌಸ್‌ ಡಿಸೈನ್‌ದ್ದಾಗಿರಬೇಕು. ಅದು ಸ್ಲಿವ್‌ಲೆಸ್‌, ಹಾಲ್ಟರ್‌ನೆಕ್‌, ಪ್ರಿನ್ಸೆಸ್‌ ಕಟ್‌, ಕ್ರಾಪ್‌ ಟಾಪ್‌ ಶೈಲಿಯ ಬ್ಲೌಸ್‌ ಆಗಬಹುದು. ಆಗಷ್ಟೇ ಸೀರೆ ಹೈಲೈಟ್‌ ಆಗುವುದು.

5/5

ಮೇಕೋವರ್‌ ಹಿತ ಮಿತವಾಗಿರಲಿ

ಮೇಕಪ್‌ ತೀರಾ ಹಿತ ಮಿತವಾಗಿರಬೇಕು. ಈ ಸೀರೆ ಇಂಡೋ-ವೆಸ್ಟರ್ನ್‌ ಲುಕ್‌ ನೀಡುವುದರಿಂದ ಟ್ರೆಡಿಷನಲ್‌ ಲುಕ್‌ ಸಲ್ಲ! ಹಾಗಾಗಿ ನೋಡಲು ಆಕರ್ಷಕವಾಗಿ ಕಾಣಿಸುವ ಮೇಕಪ್‌, ಸಿಂಪಲ್‌ ಹೇರ್‌ಸ್ಟೈಲ್‌ ಸಾಥ್‌ ನೀಡುವ ಮಿನುಗುವ ಜ್ಯುವೆಲರಿಗಳು ಇದ್ದರೇ ಸಾಕು ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು.

ಶೀಲಾ ಸಿ ಶೆಟ್ಟಿ

View all posts by this author