ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Review 2026: ಮುಂದುವರಿದ ನಟಿ ಸೋನಂ ಕಪೂರ್‌ ಮೆಟರ್ನಿಟಿ ಫ್ಯಾಷನ್‌

ಬಾಲಿವುಡ್‌ ನಟಿ ಸೋನಂ ಕಪೂರ್‌ ತನ್ನ ಎರಡನೇ ಪ್ರೆಗ್ನೆನ್ಸಿಯನ್ನು ಕೂಡ ಎಂಜಾಯ್‌ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಬ್ಲ್ಯಾಕ್‌ ಟರ್ಟಲ್‌ ನೆಕ್‌ ಟಾಪ್‌ ಜತೆ ಬ್ಲೇಜರ್‌ ಹಾಗೂ ಪೆನ್ಸಿಲ್‌ ಮ್ಯಾಕ್ಸಿ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್‌ ಹೇಗಿದೆ? ಇಲ್ಲಿದೆ ವಿವರ.

ಚಿತ್ರಗಳು: ಸೋನಂ ಕಪೂರ್‌, ಬಾಲಿವುಡ್‌ ನಟಿ
1/5

ಸೋನಂ ಕಪೂರ್‌ ಪ್ರೆಗ್ನೆನ್ಸಿ ಫ್ಯಾಷನ್‌ ಸದ್ಯ ಜೆನ್‌ ಜಿ ಪ್ರೆಗ್ನೆಂಟ್‌ ಯುವತಿಯರನ್ನು ಸೆಳೆದಿದೆ.

2/5

ಸೋನಂ ಫ್ಯಾಷನೆಬಲ್‌ ಲುಕ್‌

ಹೌದು, ಬಾಲಿವುಡ್‌ ತಾರೆ ಸೋನಂ ಕಪೂರ್‌, ತನ್ನ ಎರಡನೇ ಪ್ರೆಗ್ನೆಸಿಯನ್ನು ಕೂಡ ಫ್ಯಾಷೆನಬಲ್‌ ಲುಕ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ಹೇಗೆಲ್ಲಾ ಫ್ಯಾಷನೆಬಲ್‌ ಆಗಿ ಕಾಣಿಸಬಹುದು? ಎಂಬುದನ್ನು ಆಗಾಗ್ಗೆ ತಮ್ಮ ಫ್ಯಾಷನ್‌ ಶೂಟ್‌ಗಳ ಮೂಲಕ ತೋರಿಸುತ್ತಿದ್ದಾರೆ.

3/5

ಮೆಟರ್ನಿಟಿ ಫ್ಯಾಷನ್‌ ಟ್ರೆಂಡ್‌ ಹುಟ್ಟು ಹಾಕಿದ ಸೋನಂ

ಅಂದಹಾಗೆ, ನಟಿ ಸೋನಂ ಕಪೂರ್‌ ತಮ್ಮ ಮೊದಲ ಪ್ರೆಗ್ನೆನ್ಸಿಯಲ್ಲೆ ಸಾಕಷ್ಟು ಫ್ಯಾಷನ್‌ ಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಗಲೇ ಟ್ರೆಂಡ್‌ ಹುಟ್ಟುಹಾಕಿದ್ದರು. ಇದೀಗ ತಮ್ಮ ಎರಡನೇ ಮಗುವಿನ ಪ್ರೆಗ್ನೆನ್ಸಿಯಲ್ಲಿ, ಮತ್ತೊಮ್ಮೆ ತಮ್ಮ ಡಿಫರೆಂಟ್‌ ಲುಕ್‌ಗಳ ಮೂಲಕ ಮಗುವನ್ನು ಹೆರಲಿರುವ ಜೆನ್‌ ಜಿ ಜನರೇಷನ್‌ ಯುವತಿಯರನ್ನು ಸೆಳೆಯುತ್ತಿದ್ದಾರೆ. ಇದು, ಅವರನ್ನು ಟ್ರೆಂಡ್‌ ಸೆಟ್ಟರ್‌ ತಾರೆಯನ್ನಾಗಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಸೋನಂ ಬ್ಲ್ಯಾಕ್‌ ಲೇಯರ್‌ ಲುಕ್‌

ಈ ಬಾರಿಯ ಮೆಟರ್ನಟಿ ಫ್ಯಾಷನ್‌ನಲ್ಲಿ, ಸೋನಂ ಕಂಪ್ಲೀಟ್‌ ಮಾನೋಕ್ರೋಮ್‌ ಬ್ಲ್ಯಾಕ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್‌ ಟರ್ಟಲ್‌ ನೆಕ್‌ನ ಕ್ರಾಪ್‌ ಟಾಪ್‌ ಮೇಲೆ ಬ್ಲ್ಯಾಕ್‌ ಕ್ರಾಪ್‌ ಬ್ಲೇಜರ್‌ ಇದರೊಂದಿಗೆ ಬಿಲೋ ವೇಸ್ಟ್ ಕೂರುವಂತಹ ಪೆನ್ಸಿಲ್‌ ಮ್ಯಾಕ್ಸಿ ಸ್ಕರ್ಟ್ ಧರಿಸಿದ್ದಾರೆ. ಇನ್ನು, ಇದರೊಂದಿಗೆ ಅವರು ಧರಿಸಿರುವ ಮಿನಿಮಲ್‌ ಆಕ್ಸೆಸರೀಸ್‌ ಮತ್ತಷ್ಟು ಅಂದವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯರಲ್ಲಿ ಸೋನಮ್ ಕೂಡ ಒಬ್ಬರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರು ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವ ಮೂಲಕ ಹೆಚ್ಚು ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಈ ನಟಿ ಕೊನೆಯ ಬಾರಿಗೆ 2023 ರಲ್ಲಿ ತೆರೆಕಂಡ 'ಬ್ಲೈಂಡ್' ಚಿತ್ರದಲ್ಲಿ ಕಾಣಿಸಿಕೊಂಡರು. ತಮ್ಮ ಮೊದಲ ಮಗುವಿನ ಜನನದ ನಂತರ ಅವರು ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ. ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author