ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Review 2026: ಎಲ್ಲೆ ಮೀರಿದ ನಿಯಾ ಶರ್ಮಾ ಫ್ಯಾಷನ್‌

Nia Sharma: ವಿಚಿತ್ರವಾದ ಕಟೌಟ್‌ ಹೊಂದಿದ ಬ್ಲ್ಯಾಕ್‌ ಕೋ ಆರ್ಡ್ ಸೆಟ್‌ ಧರಿಸಿರುವ ಟೆಲಿವುಡ್‌ ನಟಿ ನಿಯಾ ಶರ್ಮಾ ಬಿಚ್ಚಮ್ಮಳಾಗಿ ಕಾಣಿಸಿಕೊಂಡಿದ್ದಾಳೆ. ಇದ್ಯಾವ ಬಗೆಯ ಫ್ಯಾಷನ್‌? ಫ್ಯಾಷನಿಸ್ಟಾಗಳು ಹೇಳುವುದೇನು? ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ನಿಯಾ ಶರ್ಮಾ, ನಟಿ
1/5

ಗ್ಲಾಮರಸ್‌ ಬ್ಲ್ಯಾಕ್‌ ಕೋ ಆರ್ಡ್ ಸೆಟ್‌ನ ಕಟೌಟ್‌ ಪ್ಯಾಂಟ್‌ ಧರಿಸಿರುವ ನಟಿ ನಿಯಾ ಶರ್ಮಾ ಬಿಚ್ಚಮ್ಮಳಾಗಿ ಕಾಣಿಸಿಕೊಂಡಿದ್ದಾಳೆ. ಈಕೆಯ ಈ ಬಗೆಯ ಉಡುಗೆ ನೋಡಿ, ಫಾಲೋವರ್‌ಗಳ ಹುಬ್ಬೇರಿದೆ.

2/5

ಬಿಂದಾಸ್‌ ನಟಿ ನಿಯಾ

ಅಂದಹಾಗೆ, ನಿಯಾ ಶರ್ಮಾ ಟೆಲಿವುಡ್‌ ಬೆಡಗಿ. ನಟಿಸಿರುವುದು ಸೀರಿಯಲ್‌ ಹಾಗೂ ಜಾಹೀರಾತುಗಳಲ್ಲಾದರೂ, ಸದಾ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ ಬಿಂದಾಸ್‌ ನಟಿ ಎನ್ನಬಹುದು. ಸದಾ ಒಂದಲ್ಲ ಒಂದು ಪ್ರಯೋಗಾತ್ಮಕ ಔಟ್‌ಫಿಟ್‌ಗಳನ್ನು ಧರಿಸಿ, ಸುತ್ತಮುತ್ತಲಿನವರನ್ನು ಮಾತ್ರವಲ್ಲ, ಎಲ್ಲರಲ್ಲೂ ಬೆರಗು ಮೂಡುವಂತೆ ಮಾಡಿರುವ ಫ್ಯಾಷೆನಬಲ್‌ ನಟಿ ಎಂದರೂ ತಪ್ಪಾಗಲಾರದು! ಎಂಬುದು ಫ್ಯಾಷನ್‌ ವಿಮರ್ಶಕರ ಅಭಿಪ್ರಾಯ.

3/5

ನಿಯಾ ಶರ್ಮಾ ಕಟೌಟ್‌ ಪ್ಯಾಂಟ್‌

ಇನ್ನು, ಸೊಂಟದಿಂದ ಕೆಳಗೆ ಧರಿಸಿರುವ ನಿಯಾ ಶರ್ಮಾರ ಬಿಲೋ ವೇಸ್ಟ್ ಕಸ್ಟಮೈಸ್ಡ್ ಬ್ಲ್ಯಾಕ್‌ ಕಟೌಟ್‌ ಪ್ಯಾಂಟ್‌ ಇದುವರೆಗೂ ಹೆಚ್ಚಾಗಿ ಯಾರೂ ಟ್ರೈ ಮಾಡದ ವಿನ್ಯಾಸವಾಗಿದೆ. ಇಲ್ಲಿ ನಿಯಾ ಹಾಟ್‌ ಲುಕ್‌ಗೆ ಪ್ರಾಮುಖ್ಯತೆ ನೀಡಿ, ಸೊಂಟದ ಕೆಳಭಾಗವನ್ನು ಮುಲಾಜಿಲ್ಲದೇ ಖುಲ್ಲಂ ಖುಲ್ಲಾ ತೋರಿಸಿರುವುದು ಆಕೆ ಬೋಲ್ಡ್ ಫ್ಯಾಷನ್‌ಗೂ ರೆಡಿ ಎಂಬುದನ್ನು ತೋರ್ಪಡಿಸುತ್ತದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

4/5

ಪಿಯರ್ಸಿಂಗ್‌ ಮೂಲಕ ತೋರ್ಪಡಿಸಿದ ಫ್ಯಾಷನ್‌

ಅಷ್ಟು ಮಾತ್ರವಲ್ಲ, ನಿಯಾ ಶರ್ಮಾ, ಬೆಲ್ಲಿ ಹಾಗೂ ಸೊಂಟದ ಭಾಗದಲ್ಲೂ ಪಿಯರ್ಸಿಂಗ್‌ ಮಾಡಿರುವುದು ಆಕೆಯ ಪಿಯರ್ಸಿಂಗ್‌ ಪ್ರೇಮವನ್ನು ಹೈ ಲೈಟ್‌ ಮಾಡುತ್ತದೆ.

5/5

ಒಟ್ಟಿನಲ್ಲಿ, ನಿಯಾಳದ್ದು ಎಲ್ಲೆ ಮೀರಿದ ಫ್ಯಾಷನ್‌ ಎಂಬುದು ಆಕೆಯ ಸ್ಟೈಲಿಂಗ್‌ನಿಂದಲೇ ತಿಳಿಯಬಹುದು! ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಶೀಲಾ ಸಿ ಶೆಟ್ಟಿ

View all posts by this author